ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಾಯಾ ಕರಾಮತ್ತು;ತರಾತುರಿಯಲ್ಲಿ ಪ್ರತಿಮೆ ಅನಾವರಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಯಾ ಕರಾಮತ್ತು;ತರಾತುರಿಯಲ್ಲಿ ಪ್ರತಿಮೆ ಅನಾವರಣ
ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ, ತನ್ನದೇ ಆರು ಸೇರಿದಂತೆ ಒಟ್ಟು 40 ಪ್ರತಿಮೆಗಳನ್ನು ರಾಜ್ಯದ ವಿವಿಧೆಡೆ ಜುಲೈ 3ರಂದು ಅನಾವರಣಗೊಳಿಸಲು ನಿರ್ಧರಿಸಲಾಗಿತ್ತು, ಆದರೆ ಇದೀಗ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಅಚ್ಚರಿಯ ಬೆಳವಣಿಗೆ ಎಂಬಂತೆ ನಿಗದಿತ ಅವಧಿಗಿಂತ ಮುನ್ನವೇ ಮಾಯಾ ತರಾತುರಿಯಲ್ಲಿ ಗುರುವಾರ ರಾತ್ರಿ ತನ್ನದು ಸೇರಿದಂತೆ 15 ಪ್ರತಿಮೆಗಳನ್ನು ಅನಾವರಣಗೊಳಿಸಿದ್ದಾರೆ.

ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಜುಲೈ 3ಕ್ಕೆ ಈ ಮೊದಲು ನಿಗದಿಪಡಿಸಲಾಗಿತ್ತು. ಆದರೆ ಮಾಯಾ ಅವರ ನಿರ್ಧಾರವನ್ನು ಪ್ರಶ್ನಿಸಿ, ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ತಡೆ ನೀಡಬೇಕೆಂದು ಕೋರಿ ದೆಹಲಿ ಮೂಲದ ನ್ಯಾಯವಾದಿ ರವಿಕಾಂತ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಿಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಏತನ್ಮಧ್ಯೆ ಗುರುವಾರ ರವಿಕಾಂತ್ ಅವರು, ಮಾಯಾವತಿ ಅವರು ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಸದಂತೆ ತಡೆಯುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಶೀಘ್ರ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದು ಕೋರಿದ್ದರು. ಅದರಂತೆ ಪ್ರಕರಣದ ಅರ್ಜಿಯ ವಿಚಾರಣೆಯನ್ನು ಜುಲೈ 29ಕ್ಕೆ ನಿಗದಿಪಡಿಸಿತ್ತು. ಈ ಹಿನ್ನೆಲೆಯಲ್ಲಿ ಮಾಯಾ ತರಾತುರಿಯಲ್ಲಿ ನಿನ್ನೆ ರಾತ್ರಿ ಕೆಲವು ಪ್ರತಿಮೆಗಳನ್ನು ಅನಾವರಣಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಐಎಎನ್‌ಎಸ್ ಸುದ್ದಿಸಂಸ್ಥೆ ಜೊತೆ ದೂರವಾಣಿಯಲ್ಲಿ ಮಾತನಾಡಿದ ವಕೀಲ ರವಿಕಾಂತ್, ತನ್ನ ಮಹತ್ವಾಕಾಂಕ್ಷೆಯ ಯೋಜನೆಯನ್ನು ಮಾಯಾ ಅವರು ತರಾತುರಿಯಲ್ಲಿ ಉದ್ಘಾಟಿಸಿದ್ದಾರೆ. ಆದರೆ ನ್ಯಾಯಾಂಗ ಇದನ್ನು ಒಪ್ಪುವುದಿಲ್ಲ ಎಂದಿರುವ ಅವರು, ಆ ನಿಟ್ಟಿನಲ್ಲಿ ತನಗೆ ಮಾಯಾ ವಿರುದ್ಧದ ಸಮರದಲ್ಲಿ ದೊರೆತ ಮೊದಲ ಜಯ ಇದಾಗಿದೆ ಎಂದು ತಿಳಿಸಿದ್ದಾರೆ.

ಯೋಜನೆಯ ಜಾರಿಗೆ ಕಾನೂನು ತೊಡಕು ಉಂಟಾಗಬಹುದು ಎಂದು ಪರಿಗಣಿಸಿರುವ ಮಾಯಾವತಿ ಲಘುಬಗನೆ ಕಾರ್ಯಕ್ರಮವನ್ನು ಮಾಡಿ, ಕೆಲವು ಪ್ರತಿಮೆಗಳನ್ನು ಅನಾವರಣಗೊಳಿಸಿದ್ದಾರೆ. ಆದರೆ ನಿಗದಿತ ಅವಧಿಗಿಂತ ಮುನ್ನ ಪ್ರತಿಮೆ ಅನಾವರಣದ ಕುರಿತು ಮಾಯಾ ಅವರು ಯಾವುದೇ ವಿವರಣೆ ನೀಡಿಲ್ಲ. ಆದರೆ ಇದು ತನ್ನ ಎದುರಾಳಿಗಳಿಗೆ ಮಣ್ಣುಮುಕ್ಕಿಸುವ ತಂತ್ರ ಎಂದು ಭಾವಿಸಲಾಗಿದೆ.

'ನನ್ನ ವ್ಯಕ್ತಿತ್ವಕ್ಕೆ ವಿರೋಧಿಗಳು ಅನಾವಶ್ಯಕವಾಗಿ ಕಳಂಕ ತರುವಂತಹ ಅಪವಾದ ಹೊರಿಸುತ್ತಿದ್ದಾರೆ ಎಂದಿರುವ ಅವರು, ದಲಿತರಿಗೆ ಮೀಸಲಾಗಿಟ್ಟ ಪಾರ್ಕ್, ಮ್ಯೂಸಿಯಂ ಹಾಗೂ ಸ್ಮಾರಕ ನಿರ್ಮಾಣಕ್ಕೆ ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ನನ್ನ ಮೇಲೆ ಆಪಾದನೆ ಹೊರಿಸಲಾಗುತ್ತಿದೆ' ಎಂದು ಮಾಯವತಿ ಈ ಸಂದರ್ಭದಲ್ಲಿ ದೂರಿದ್ದಾರೆ. ಈ ಆಪಾದನೆ ಸಂಪೂರ್ಣ ಆಧಾರರಹಿತವಾದದ್ದು, ನಾನು ಯಾವುದೇ ಹಣವನ್ನು ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಬಿಎಸ್ಪಿ ವರಿಷ್ಠೆ ಸ್ಪಷ್ಟನೆ ನೀಡಿದ್ದಾರೆ.
ಮಾಯಾವತಿ, ತನ್ನದೇ ಆರು ಸೇರಿದಂತೆ ಒಟ್ಟು 40 ಪ್ರತಿಮೆಗಳನ್ನು ರಾಜ್ಯದ ವಿವಿಧೆಡೆ ಜುಲೈ 3ರಂದು ಅನಾವರಣಗೊಳಿಸಲು ನಿರ್ಧರಿಸಿದ್ದರು. ರಾಜ್ಯದ ಖಜಾನೆಗೆ ಭಾರೀ ರಂಧ್ರ ಕೊರೆಯಬಹುದಾದ ಈ ಯೋಜನೆಗಳೊಂದಿಗೆ, ಕಾನ್ಶಿರಾಂ ಸ್ಮಾರಕ ಮತ್ತು ಗೌತಮ ಬುದ್ಧಸ್ಥಳಗಳನ್ನೂ ಉದ್ಘಾಟಿಸಲು ಯೋಜಿಸಲಾಗಿತ್ತು.

ಲಖ್ನೋ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ದೊರೆತ ಉತ್ತರ ಪ್ರಕಾರ, ಲಖ್ನೋದ ವಿವಿಧೆಡೆ ನಿರ್ಮಿಸಲಾಗಿದ್ದ ಕಾನ್ಶಿರಾಂ ಮತ್ತು ಮಾಯಾವತಿ ಪ್ರತಿಮೆಗಳಿಗೆ 6.68 ಕೋಟಿ ರೂಪಾಯಿ ವೆಚ್ಚ ತಗುಲಿತ್ತು. ಅಂತೆಯೇ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಸ್ಥಾಪಿಸಲಾಗಿದ್ದ 60 ಅಮೃತಶಿಲಾ ಆನೆ (ಮಾಯಾವತಿ ಪಕ್ಷ ಬಿಎಸ್ಪಿ ಚಿಹ್ನೆ)ಯ ವಿಗ್ರಹಗಳಿಗೆ ರಾಜ್ಯ ಖಜಾನೆಯಿಂದ 52 ಕೋಟಿ ರೂಪಾಯಿ ವೆಚ್ಚವಾಗಿತ್ತು.

ಉತ್ತರ ಪ್ರದೇಶದ ಸರಕಾರವು ಬಜೆಟ್‌ನಲ್ಲಿ ಇದಕ್ಕಾಗಿ ಮೀಸಲಾಗಿಟ್ಟ ನಿಧಿಯನ್ನು ಗಣನೆಗೆ ತೆಗೆದುಕೊಂಡರೆ, ಈಗ ಆಗಿರುವ ವೆಚ್ಚವೆಲ್ಲಾ ನಗಣ್ಯ. ಉತ್ತರ ಪ್ರದೇಶ ಸಾಂಸ್ಕೃತಿಕ ಇಲಾಖೆಯ 2009-10 ಬಜೆಟ್‌ನಲ್ಲಿ, ಹಿಂದಿನ ಹಣಕಾಸು ವರ್ಷದಲ್ಲಿ ಇಲಾಖೆಯು 'ಮಹಾನ್ ನಾಯಕರ' ಪ್ರತಿಮೆಗಳನ್ನು ಸ್ಥಾಪಿಸುವುದಕ್ಕೆ 194 ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗಿತ್ತು ಮತ್ತು ಅದನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಲಾಗಿತ್ತು. ಆ ನಿಟ್ಟಿನಲ್ಲಿ ಮಾಯಾವತಿ ಅವರು ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ದೂರಿ ರವಿ ಅವರು ಇದೀಗ ಸುಪ್ರೀಂ ಮೆಟ್ಟಿಲೇರಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚಿದಂಬರಂ ಆಯ್ಕೆ ಸಿಂಧುವಲ್ಲ: ಹೈಕೋರ್ಟ್‌ಗೆ ದೂರು
ಅಮರನಾಥ ಯಾತ್ರೆ ಪುನರಾರಂಭ
ಅಸ್ಸಾಂ ರಾಜ್ಯಪಾಲ ಶಿವಚರಣ್ ನಿಧನ
ಅಸ್ಸಾಂ: ಉಗ್ರರ ಬಂದ್‌ ಕರೆಗೆ ಜನಜೀವನ ಅಸ್ತವ್ಯಸ್ತ
ಬಿಹಾರ ಎಂಜಿನಿಯರ್ ಸಾವು ಆತ್ಮಹತ್ಯೆಯೋ, ಕೊಲೆಯೊ?
ಗುಜರಾತ್ ತೀರದಲ್ಲಿ ಸೌದಿ ಹಡಗು ಕಣ್ಮರೆ