ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಂಧಮಾಲ್-ಚರ್ಚ್ ನಿರ್ಮಿಸಿ ಹೊಸ ಜೀವನ ಆರಂಭಿಸಿ: ಚಿದು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಂಧಮಾಲ್-ಚರ್ಚ್ ನಿರ್ಮಿಸಿ ಹೊಸ ಜೀವನ ಆರಂಭಿಸಿ: ಚಿದು
ಕ್ರಿಶ್ಚಿಯನ್ನರೇ...ಐ ಯಾಮ್ ಸ್ಸಾರಿ....
Chidambaram
PTI
' ಕ್ರಿಶ್ಚಿಯನ್ನರೇ ಕ್ಷಮಿಸಿ...ಇಂತಹ ಘಟನೆ ನಡೆಯಬಾರದಿತ್ತು' ಹೀಗಂತ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಕೋಮು ದಳ್ಳುರಿಯಿಂದ ನೊಂದಿರುವ ಒರಿಸ್ಸಾದ ಕಂಧಮಾಲ್‌ನ ನಿರಾಶ್ರಿತರ ಶಿಬಿರವೊಂದಕ್ಕೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಚಿದು ಅವರಿಂದ ಹೊರಹೊಮ್ಮಿದ ನುಡಿಗಳಿವು.

85ರ ಹರೆಯದ ವಿಶ್ವಹಿಂದೂ ಪರಿಷತ್ ಮುಖಂಡ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರನ್ನು ಕಳೆದ ವರ್ಷ ದುಷ್ಕರ್ಮಿಗಳು ಹತ್ಯೆಗೈದ ನಂತರ, ಕಂಧಮಾಲ್ ತಿಂಗಳು ಕಾಲ ಕೋಮುದಳ್ಳುರಿಯಿಂದ ಹೊತ್ತಿ ಉರಿದಿತ್ತು. ಸಾವಿರಾರು ಮಂದಿ ಮನೆ-ಮಠ ಕಳೆದುಕೊಂಡಿದ್ದರು. ಘಟನೆಯಲ್ಲಿ ಬಲಿಪಶುವಾಗಿ ನಿರಾಶ್ರಿತರ ಶಿಬಿರಗಳಲ್ಲಿರುವ ಕ್ರಿಶ್ಚಿಯನ್ ಕುಟುಂಬಗಳನ್ನು ಚಿದಂಬರಂ ಅವರು ಈ ಸಂದರ್ಭದಲ್ಲಿ ಭೇಟಿ ಮಾಡಿದರು.

ಕಳೆದ ವರ್ಷ ನಡೆದ ಘಟನೆ ಕುರಿತಾಗಿ ನೊಂದ ಕ್ರಿಶ್ಚಿಯನ್ ಕುಟುಂಬಗಳಲ್ಲಿ ಕ್ಷಮಾಪಣೆ ಕೋರಿದರು,ಇದರಿಂದಾಗಿ ತಾವೆಲ್ಲ ನಿರಾಶ್ರಿತರ ಶಿಬಿರಗಳಿಗೆ ಬರುವಂತಾಯಿತು ಎಂದರು. ಆದರೆ ನೀವೆಲ್ಲ ನಿಮ್ಮ ಊರುಗಳಿಗೆ ಹಿಂದಿರುಗಿ ಎಂದು ಮನವಿ ಮಾಡಿದರು. ಅಲ್ಲದೇ ನೀವೇನು ಭಯಪಡಬೇಕಾದ ಅಗತ್ಯವಿಲ್ಲ, ನಿಶ್ಚಿಂತೆಯಿಂದ ನಿಮ್ಮ ಮನೆಗೆ ಮರಳಿ ಎಂದು ಧೈರ್ಯ ತುಂಬಿದರು. ಕೋಮುದಳ್ಳುರಿ ಘಟನೆಯನ್ನು ತೀವ್ರವಾಗಿ ಖಂಡಿಸಿದ ಗೃಹ ಸಚಿವರು, ನೀವು ಮತ್ತೆ ಹೊಸ ಜೀವನವನ್ನು ಆರಂಭಿಸಿ ಎಂದು ಕೇಳಿಕೊಂಡು, ನಿಮ್ಮ ಚರ್ಚ್‌ಗಳನ್ನು ಪುನರ್ ನಿರ್ಮಿಸಿ, ಧಾರ್ಮಿಕ ಆಚರಣೆಯನ್ನು ಮುಂದುವರಿಸಿ ಎಂದು ಸಲಹೆ ನೀಡಿದರು.

PTI
ಬಜರಂಗ ದಳ ಮತ್ತು ಆರ್‌ಎಸ್‌ಎಸ್‌ನವರ ಹೆದರಿಕೆಯಿಂದಾಗಿ ಕೆಲವು ನಿರಾಶ್ರಿತರು ಚಿದಂಬರಂ ಅವರಲ್ಲಿ ಮಾತನಾಡಲು ಹಿಂದೇಟು ಹಾಕಿದಾಗ, ನೀವೇನೂ ಭಯಪಡಬೇಡಿ, ತಪ್ಪಿತಸ್ಥರನ್ನು ತನಿಖೆಗೆ ಒಳಪಡಿಸಿ ಶಿಕ್ಷಿಸುವುದಾಗಿ ಭರವಸೆ ನೀಡಿದರು.

ಗೃಹ ಸಚಿವರು ಒರಿಸ್ಸಾದ ಮಂದೈಕಾ, ರಾಹಿಕೋಲಾ, ತಿನಿಗಿಯಾ ಮತ್ತು ತಿಕಾಬಾಲಿ ಜಿಲ್ಲೆಗಳಲ್ಲಿರುವ ಆಶ್ರಯ ಪಡೆದಿರುವ ಸುಮಾರು 1,500 ಜನರನ್ನು ಭೇಟಿ ಮಾಡಿ, ಪರಿಶೀಲನೆ ನಡೆಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತ.ನಾ. ಸದನದಲ್ಲಿ ಚೈತನ್ಯ ಮೂಡಿಸಿದ ವಯಾಗ್ರ!
ಬರಗಾಲದ ಬೇಗೆ ನಡುವೆ ಮುಂಬೈನಲ್ಲಿ ಮಳೆಯ ಸಿಂಚನ
ಒಂದು ವಿಷಯದಲ್ಲಿ ಫೇಲ್ ಆದ್ರೂ ತೇರ್ಗಡೆ!
ಮಾಯಾ ಕರಾಮತ್ತು;ತರಾತುರಿಯಲ್ಲಿ ಪ್ರತಿಮೆ ಅನಾವರಣ
ಚಿದಂಬರಂ ಆಯ್ಕೆ ಸಿಂಧುವಲ್ಲ: ಹೈಕೋರ್ಟ್‌ಗೆ ದೂರು
ಅಮರನಾಥ ಯಾತ್ರೆ ಪುನರಾರಂಭ