ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಉಗ್ರರನ್ನು ಬೆಂಬಲಿಸುವ ರಾಷ್ಟ್ರಗಳ ವಿಚಾರಣೆ ನಡೆಸ್ಬೇಕು:ಸಿಂಗ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರನ್ನು ಬೆಂಬಲಿಸುವ ರಾಷ್ಟ್ರಗಳ ವಿಚಾರಣೆ ನಡೆಸ್ಬೇಕು:ಸಿಂಗ್
PTI
ಯಾವುದೇ ರೀತಿಯಿಂದಲೂ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ರಾಷ್ಟ್ರಗಳನ್ನು ಮತ್ತು ಸಂಘಟನೆಗಳನ್ನು ತರಾಟೆಗೆತೆಗೆದುಕೊಂಡ ಪ್ರಧಾನಿ ಮನಮೋಹನ್ ಸಿಂಗ್, ಉಗ್ರರನ್ನು ಬೆಂಬಲಿಸುವ ರಾಷ್ಟ್ರಗಳನ್ನು ವಿಚಾರಣೆಗೆ ಗುರಿಪಡಿಸಬೇಕು ಅಲ್ಲದೇ ಭಯೋತ್ಪಾದನೆ ವಿರುದ್ಧ ಹೋರಾಡಲು ಇದು ಸರಿಯಾದ ಸಮಯ ಎಂದು ಅಲಿಪ್ತ ರಾಷ್ಟ್ರಗಳ 15ನೇ ಶೃಂಗಸಭೆಯಲ್ಲಿ ಬುಧವಾರ ದಿಟ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಯಾವ ರಾಷ್ಟ್ರ ಉಗ್ರರಿಗೆ ಸುರಕ್ಷಿತ ಸ್ವರ್ಗ ತಾಣವನ್ನು ನಿರ್ಮಿಸಿ ಬೆಂಬಲ ನೀಡುತ್ತದೋ ಅಂತಹ ರಾಷ್ಟ್ರಗಳನ್ನು ವಿಚಾರಣೆಗೆ ಒಳಪಡಿಸಬೇಕು ಎಂದ ಸಿಂಗ್, ಇತ್ತೀಚಿನ ವರ್ಷಗಳಲ್ಲಿ ಭಯೋತ್ಪಾದಕರ ಸಂಘಟನೆಗಳು ಹೆಚ್ಚು ವ್ಯವಸ್ಥಿತವಾಗಿ ದಾಳಿ ನಡೆಸುವ ಮಟ್ಟಕ್ಕೆ ಬೆಳೆದಿವೆ. ಉಗ್ರರು ಯಾವುದೇ ಒಂದು ಧರ್ಮ ಅಥವಾ ಸಮೂಹವನ್ನು ಪ್ರತಿನಿಧಿಸುವುದಿಲ್ಲ ಎಂದು ಪ್ರತಿಪಾದಿಸಿದರು.

ಭಯೋತ್ಪಾದನೆ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕು ಎಂದು ಕರೆ ನೀಡಿರುವ ಸಿಂಗ್, ಉಗ್ರರಿಗೆ ಒದಗಿಸುತ್ತಿರುವ ಸೌಲಭ್ಯವನ್ನು ನಿಲ್ಲಿಸಬೇಕು ಮತ್ತು ಅವರಿಗೆ ಯಾವುದೇ ರಾಷ್ಟ್ರದಲ್ಲಿ ಆಶ್ರಯ ನೀಡಬಾರದು ಎಂದು ಹೇಳಿದರು.

ನಾಳೆ ಮನಮೋಹನ್ ಸಿಂಗ್-ಗಿಲಾನಿ ಮುಖಾಮುಖಿ: ಈಜಿಪ್ಟ್‌ನ ಶರ್ಮ್ ಎ ಶೇಕ್‌ನಲ್ಲಿ 118 ಅಭಿವೃದ್ಧಿಶೀಲ ರಾಷ್ಟ್ರಗಳ 15ನೇ ಅಲಿಪ್ತ ರಾಷ್ಟ್ರಗಳ ಶೃಂಗಸಭೆಯಲ್ಲಿ ಗುರುವಾರ ಭಾರತದ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮತ್ತು ಪಾಕಿಸ್ತಾನದ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಮುಖಾಮುಖಿಯಾಗಲಿದ್ದಾರೆ.

ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕೈಗೊಂಡ ಕ್ರಮಗಳೇನು?ಭಯೋತ್ಪಾದನೆ ನಿಗ್ರಹ ಕುರಿತಂತೆ ಪಾಕ್‌ನ ನಿಲುವು ಸೇರಿದಂತೆ ಹಲವಾರು ವಿಷಯಗಳ ಕುರಿತು ಉಭಯ ನಾಯಕರು ಚರ್ಚಿಸಲಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶಿಕ್ಷಣದಿಂದ ಕೋಮು ಓಲೈಕೆ, ರಾಜಕೀಯ ದೂರವಿಡಿ: ಬಿಜೆಪಿ
ದ್ವೇಷ ಭಾಷಣ: ವರುಣ್ ಗಾಂಧಿ ವಿರುದ್ಧ ಚಾರ್ಜ್‌ಶೀಟ್
ಕಳಂಕಿತ ಸೇನಾಸಿಬ್ಬಂದಿಗಳನ್ನು ಕ್ರಿಮಿನಲ್ ಕೋರ್ಟಿನಲ್ಲಿ ವಿಚಾರಣೆ ನಡೆಸಬಹುದು
ಮತ್ತೊಂದು ದಾಳಿ: ಮುಂಬೈಯಲ್ಲಿ ಕಟ್ಟೆಚ್ಚರ
ಬಾಬ್ರಿಫೈಲ್‌: ಸಿಬಿಐ ತನಿಖೆಗೆ ಹೈಕೋ ಆದೇಶ
ಮುಂಬೈಯಲ್ಲಿ ಹೊರಗಿನವರಿಗೆ ಮನೆ ಬೇಡ: ಸೇನೆ ಒತ್ತಾಯ