ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾಲಕಿ ಮೇಲೆ ದೌರ್ಜನ್ಯ : ಟಿವಿ ನಟಿ ಬಂಧನ (Actress | Urvashi | Child labour act | Domestic)
 
ಮುಂಬೈ: ಶಾಲೆಗೆ ಸೇರಿಸುವ ಭರವಸೆ ಮೇಲೆ ಮನೆಗೆ ಕರೆತಂದು ಮನೆಕೆಲಸಕ್ಕೆ ಇಟ್ಟುಕೊಂಡಿದ್ದ 10 ವರ್ಷ ವಯಸ್ಸಿನ ಬಾಲಕಿ ಮೇಲೆ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಮುಂಬೈನಲ್ಲಿ ಟಿವಿ ನಟಿ ಊರ್ವಶಿ ಎಂಬವರನ್ನು ಬಂಧಿಸಲಾಗಿದೆ. ಬಾಲಕಾರ್ಮಿಕ ವಿರೋಧಿ ಕಾಯ್ದೆಯಡಿ ಕೂಡ ನಟಿ ವಿರುದ್ಧ ಕೇಸು ದಾಖಲಿಸಲಾಗಿದೆ.

ಬಾಲಕಿಯ ಕಣ್ಣುಗಳಿಗೆ ನಟಿ ಗುದ್ದಿದ್ದರಿಂದ ಕಣ್ಣುಗಳ ಕೆಳಗೆ ಕಪ್ಪು ಬಣ್ಣಕ್ಕೆ ತಿರುಗಿದೆ ಮತ್ತು ಬಾಲಕಿಯ ಕೈಗಳನ್ನು ಬಿಸಿಯಾದ ಪಾತ್ರೆಗಳನ್ನು ಮೈಗೆ ತಾಗಿಸಿ ಸುಟ್ಟಗಾಯದ ಗುರುತುಗಳಿವೆ. ಶಾಲೆಗೆ ಸೇರಿಸಿ ಶಿಕ್ಷಣಕ್ಕೆ ನೆರವು ನೀಡುವ ಆಶ್ವಾಸನೆ ಮೇಲೆ ಬಡ ಕುಟುಂಬವೊಂದರ ಬಾಲಕಿಯನ್ನು ಊರ್ವಶಿ ಕರೆತಂದಿದ್ದಳು. ಆದರೆ ನಟಿ ಊರ್ವಶಿ ಬಾಲಕಿಗೆ ಸದಾ ಕಿರುಕುಳ ಮತ್ತು ಚಿತ್ರಹಿಂಸೆ ನೀಡುತ್ತಿದ್ದಳೆಂದು ಹೇಳಲಾಗಿದೆ.

ಬಾಲಕಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕಿ ನೆರೆಹೊರೆಯ ಇತರೆ ಮಕ್ಕಳ ಜತೆ ಆಟವಾಡುತ್ತಿದ್ದಾಗ ಆಕೆಯ ಕಣ್ಣುಗಳು ಕಪ್ಪು ಬಣ್ಣಕ್ಕೆ ತಿರುಗಿದ್ದು, ಕೈಗಳಲ್ಲಿ ತೀವ್ರ ಸುಟ್ಟ ಗಾಯದ ಗುರುತುಗಳನ್ನು ಗಮನಿಸಿದ ಪಕ್ಕದ ಮನೆಯ ಮಹಿಳೆ, ಈ ಕುರಿತು ಬಾಲಕಿಯನ್ನು ಪ್ರಶ್ನಿಸಿದಾಗ ದೌರ್ಜನ್ಯ ಬೆಳಕಿಗೆ ಬಂತೆಂದು ಹೇಳಲಾಗಿದೆ. ಕೂಡಲೇ ಅವರು ಬಾಲಕಿಯ ಮೇಲೆ ದೈಹಿಕ ಹಲ್ಲೆ ಕುರಿತು ಪೊಲೀಸರಿಗೆ ದೂರು ನೀಡಿದ ಬಳಿಕ ಪೊಲೀಸರು ಊರ್ವಶಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆಂದು ವರದಿಯಾಗಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ