ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಡಿಯಲ್ಲಿ ಅಕ್ರಮವಾಗಿ ನುಸುಳಲು ಯತ್ನಿಸಿದ ಐವರ ಹತ್ಯೆ (Insurgents | Encounter | Jammu Kashmir)
 
ಪಾಕಿಸ್ತಾನ ಗಡಿಯಲ್ಲಿ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದ ಐವರನ್ನು ಭಾರತೀಯ ಸೈನಿಕರು ಬುಧವಾರ ಮುಂಜಾನೆ ಗುಂಡಿಕ್ಕಿ ಕೊಂದುಹಾಕಿದ್ದಾರೆ. ಈ ಗುಂಡಿನ ಚಕಮಕಿಯು ಗುರೇಜ್ ಸೆಕ್ಟರ್‌ನಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡಿನಿಯಂತ್ರಣ ರೇಖೆಯಲ್ಲಿ ಕಾವಲಿದ್ದ ಸೈನಿಕರು ಗಡಿಯಲ್ಲಿ ನುಸುಳಲು ಪ್ರಯತ್ನಿಸಿದ ಉಗ್ರರನ್ನು ಪತ್ತೆ ಮಾಡಿದರು. ಸೈನಿಕರನ್ನು ಕಾಣುತ್ತಲೆ ಅವರು ಗುಂಡು ಹಾರಾಟ ನಡೆಸಿದ್ದು, ಈ ವೇಳೆ ಸಂಭವಿಸಿದ ಕಾದಾಟದ ವೇಳೆ ಐವರು ಹತರಾಗಿದ್ದಾರೆ ಎಂಬುದಾಗಿ ಸೇನಾವಕ್ತಾರ ಕರ್ನಲ್ ಉಮಾಮಹೇಶ್ವರ್ ಅವರು ತಿಳಿಸಿದ್ದಾರೆ. ಕಾಶ್ಮೀರದ ಬಂಡೀಪುರ ಜಿಲ್ಲೆಯ ಗುರೇಜ್ ವಲಯದಲ್ಲಿ ಇದು ಸಂಭವಿಸಿದೆ. ಕಾದಾಟ ಇನ್ನೂ ಮುಂದುವರಿದಿದೆ.

ಬಾರಾಮುಲ್ಲಾದಲ್ಲಿ ನಡೆದ ಇನ್ನೊಂದು ಗುಂಡಿನ ಕಾಳಗದಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದು, ಇನ್ನೊರ್ವ ಸೈನಿಕ ಗಾಯಗೊಂಡಿದ್ದಾರೆ. ಉಗ್ರರ ಕುರಿತು ಖಚಿತ ಮಾಹಿತಿ ಲಭಿಸಿರುವ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಇಲ್ಲಿನ ಅರಣ್ಯ ಪ್ರದೇಶವನ್ನು ಸುತ್ತುವರಿದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ