ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎಷ್ಟೊತ್ತಿಗೆ ತಲುಪುತ್ತೇವೆ?- ವೈಎಸ್ಆರ್ ಕೊನೆಯ ಮಾತಿದು (Rajasekhara Reddy | Captain S.K. Bhatia | helicopter | Chittoor)
 
WD
"ಚಿತ್ತೂರಲ್ಲಿ ಎಷ್ಟೊತ್ತಿಗೆ ಇರ್ತೇವೆ?" ಇದು ಅವರು ನತದೃಷ್ಟ ಹೆಲಿಕಾಫ್ಟರ್ ಏರುವ ಮುನ್ನ ಆಡಿದ ಕೊನೆಯ ಮಾತು. ಹೆಲಾಕಾಫ್ಟರ್ ಫೈಲಟ್ ಎಸ್.ಕೆ. ಭಾಟಿಯಾ ಅವರಿಗೆ ಕೇಳಿದ ಪ್ರಶ್ನೆ ಇದು. "ಎರಡು ಗಂಟೆ 10 ನಿಮಿಷದಲ್ಲಿ ಅಲ್ಲಿರ್ತೇವೆ ಎಂಬುದಾಗಿ ಬೇಗಂಪೇಟೆ ವಿಮಾನನಿಲ್ದಾಣದಲ್ಲಿ 8.35ಕ್ಕೆ ಹೆಲಿಕಾಫ್ಟರ್ ಹೊರಡುವ ಮುನ್ನ ಭಾಟಿಯಾ ಹೇಳಿದ್ದರು. ಅವರು ಚಿತ್ತೂರಿಗೆ ತಮ್ಮ ಮಹತ್ವಾಕಾಂಕ್ಷಿ ಯೋಜನೆಯಾಗದ 'ರಚ್ಚಬಂಡ' ಗ್ರಾಮಸಭೆ ಕಾರ್ಯಕ್ರಮದ ಉದ್ಘಾಟನೆಗೆ ತೆರಳಿದ್ದರು.

ಯಾವತ್ತೂ ಸಮಯ ಪೋಲು ಮಾಡದ ರೆಡ್ಡಿ ಅಂದೂ ಸಹ ಹೆಲಿಕಾಫ್ಟರ್ ಏರುವ ಮುನ್ನ ತಮ್ಮ 50 ನಿಮಿಷಗಳಲ್ಲಿ ಅನೇಕ ಕಾರ್ಯಗಳನ್ನು ಕೈಗೊಂಡಿದ್ದರು. 7.45ಕ್ಕೆ ತಮ್ಮ ನಿವಾಸದಲ್ಲಿ ಲಘು ಉಪಹಾರ ಸೇವಿಸಿದ್ದು, ಬಳಿಕ ಪ್ರಧಾನ ಕಾರ್ಯದರ್ಶಿ ಜನ್ನತ್ ಹುಸೈನ್ ಮತ್ತು ಹೆಚ್ಚುವರಿ ಡಿಜಿಪಿ(ಇಂಟಲಿಜೆನ್ಸ್) ಕೆ.ಅವರವಿಂದ ರಾವ್ ಅವರೊಂದಿಗೆ ಸಭೆ ನಡೆಸಿದ್ದು, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ವ್ಯತಿರಿಕ್ತ ವರದಿಗಳ ಕುರಿತು ಚರ್ಚಿಸಿದ್ದರು.

ಸೆಪ್ಟೆಂಬರ್ ಒಂದರಂದು ವಿಧಾನ ಸಭೆಯಲ್ಲಿ ಅಂಗೀಕಾರಗೊಂಡಿರುವ ಮಸೂದೆಯೊಂದು ಸೇರಿದಂತೆ ಮೂರು ಕಡತಗಳಿಗೆ ಸಹಿ ಮಾಡಿದರು. ಹೆಲಿಕಾಫ್ಟರ್ ಏರುವ ಕೊನೆಯ ಗಳಿಗೆಯಲ್ಲಿ ತಮ್ಮ ಪುತ್ರನ ಒಡೆತನದ ಸಾಕ್ಷಿ ವಾಹಿನಿಗೆ ಕೆಲವು ಕ್ಷಣಗಳ ಸಂದರ್ಶನ ನೀಡಿದ್ದರು. ಇದು ಅವರ ಜೀವನದ ಕಟ್ಟಕಡೆಯ ಸಂದರ್ಶನ ಆಗಿ ಹೋಯಿತು.

ಅವರ ಪ್ರಯಾಣದ ಹಿಂದಿನ ದಿನದಂದು ಕೆಲವು ಆಸಕ್ತಿಕರ ವಿಚಾರಗಳು ಸಂಭವಿಸಿವೆ. ರಸ್ತೆ ಹಾಗೂ ಕಟ್ಟಡಗಳ ಸಚಿವ ಗಲ್ಲಾ ಅರುಣಾ ಮತ್ತು ಅರಣ್ಯ ಸಚಿವ ಅವರು ತಾವು ಸಿಎಂ ಜತೆ ಪ್ರಯಾಣಿಸುತ್ತೇವೆ ಎಂಬುದಾಗಿ ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳೊಂದಿಗೆ ವಾದಕ್ಕಿಳಿದಿದ್ದರು. ಆದರೆ ನೀವು ಮುಖ್ಯಮಂತ್ರಿಗಳನ್ನು ಚಿತ್ತೂರಿನಲ್ಲಿ ಬರಮಾಡಿಕೊಳ್ಳಿ ಎಂದು ಹೇಳಲಾಗತ್ತು.

ಇದಲ್ಲದೆ, ಮುಖ್ಯಮಂತ್ರಿಗಳ ಆಪ್ತರಾಗಿದ್ದ ರವಿಚಾಂದ್ ಅವರೂ ಹೆಲಿಕಾಫ್ಟರ್‌ನಲ್ಲಿ ಪ್ರಯಾಣಿಸಬೇಕಿತ್ತು. ಆದರೆ ಇಂಧನ ಟ್ಯಾಂಕ್ ತುಂಬಿದ್ದ ಕಾರಣ ಕೇವಲ ಮೂರು ಮಂದಿ ಮಾತ್ರ ಪ್ರಯಾಣಿಸಬಹುದು ಎಂಬುದಾಗಿ ಪೈಲಟ್ ಸ್ಪಷ್ಟವಾಗಿ ಹೇಳಿದ್ದರು.

ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಭಾಸ್ಕರ್ ಶರ್ಮಾ ಅವರು 10.45ರ ವೇಳೆಗೆ ವಾಡಿಕೆಯಂತೆ ಕರೆ ನೀಡಿದ್ದ ಅವರಿಗೆ ಹೆಲಿಕಾಫ್ಟರ್ ಸುರಕ್ಷಿತವಾಗಿ ಇಳಿದಿದ್ದಾರೆ ಎಂಬ ಕುರಿತು ಮಾಹಿತಿ ಸಿಗದಿದ್ದಾಗ ಮೊದಲ ಬಾರಿಗೆ ಎಚ್ಚರಿಕೆ ಗಂಟೆ ಬಾರಿಸಿತ್ತು. 11 ಹಾಗೂ 11.15ರೊಳಗೆ ಮತ್ತೆ ಕರೆಗಳನ್ನು ಮಾಡಲಾಗಿದ್ದು ಚಿತ್ತೂರು ಪೊಲೀಸ್ ವರಿಷ್ಠಾಧಿಕಾರಿ, ಆಂಧ್ರಪ್ರದೇಶ ವಾಯುಯಾನ ಕಾರ್ಪೋರೇಶನ್‌ನ ಪ್ರಧಾನ ನಿರ್ದೇಶಕ, ಹಾಗೂ ವಿಶೇಷ ಕಾರ್ಯದರ್ಶಿ ರಮಣ ರೆಡ್ಡಿ ಅವರಿಗೆ ಕರೆಗಳನ್ನು ಮಾಡಲಾಗಿತ್ತು.

ಮೊದಲಿಗೆ ಏವಿಯೇಶನ್ ಸಿಬ್ಬಂದಿಯೊಬ್ಬರು ಮುಖ್ಯಮಂತ್ರಿ ಕಚೇರಿಗೆ ಸಿಎಂ ಕ್ಷೇಮವಾಗಿ ತಲುಪಿದ್ದಾರೆ ಮತ್ತು ಅವರು ಸಹ ಪೈಲಟ್ ಜೊತೆ ಮಾತನ್ನಾಡಿರುವುದಾಗಿಯೂ ಹೇಳಿದ್ದರು. ಆದರೆ ಇದು ಸುಳ್ಳು ಮಾಹಿತಿಯಾಗಿತ್ತು.

11.30ರ ವೇಳೆಗೆ ಮುಖ್ಯಮಂತ್ರಿಗಳ ಪ್ರಧಾನ ಸಲಹಾಗಾರರಾದ ಕೆ.ವಿ.ಪಿ. ರಾಮಚಂದ್ರ ರಾವ್ ಅವರು ಪ್ರಮುಖ ಬೆಳವಣಿಗೆಯ ಸುದ್ದಿ ನೀಡಿದ್ದರು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ