ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರಾಚಿ : ಕೃಷ್ಣರಿದ್ದ ವಿಮಾನ ತುರ್ತು ಭೂಸ್ಪರ್ಷ (SM Krishna | Emirates Flight | Capital | Karachi | Dubai)
 
PTI
ಪ್ರತಿಕೂಲ ಹವಾಮಾನದಿಂದಾಗಿ ವಿದೇಶಾಂಗ ಸಚಿವ ಎಸ್‌.ಎಂ.ಕೃಷ್ಣ ಅವರಿದ್ದ ಎಮಿರೇಟ್ಸ್ ವಿಮಾನ ಕರಾಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಷ ಮಾಡಿದ ಘಟನೆ ಗುರುವಾರ ರಾತ್ರಿ ವರದಿಯಾಗಿದೆ.

ದುಬೈನಿಂದ 3.40 ಗಂಟೆಗೆ ಹೊರಟಿದ್ದ ವಿಮಾನ ದೆಹಲಿಗೆ ತಲುಪಬೇಕಾಗಿತ್ತು. ಆದರೆ ಕೆಟ್ಟ ಹವಾಮಾನದಿಂದಾಗಿ ಕರಾಚಿಯತ್ತ ಪಯಣಿಸಬೇಕಾಯಿತು ಎಂದು ಎಮಿರೇಟ್ಸ್ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವಿಮಾನದಲ್ಲಿ ವಿದೇಶಾಂಗ ಸಚಿವ ಕೃಷ್ಣ ಸೇರಿದಂತೆ 101 ಪ್ರಯಾಣಿಕರಿದ್ದು, ಕರಾಚಿಯಲ್ಲಿ ಇಂಧನ ತುಂಬಿಸಿಕೊಂಡ ನಂತರ ಮತ್ತೆ ದುಬೈಗೆ ಮರಳಿತು ಎಂದು ವಕ್ತಾರರು ವಿವರಣೆ ನೀಡಿದ್ದಾರೆ.

ಇದಕ್ಕಿಂತ ಮೊದಲು, ನವದೆಹಲಿಯಲ್ಲಿ ಪ್ರತಿಕೂಲ ಹವಾಮಾನವಿರುವುದರಿಂದ ಭೂಸ್ಪರ್ಷ ಮಾಡಲು ಅನುಮತಿ ನೀಡಲು ವಿಮಾನ ನಿಲ್ದಾಣದ ಅಧಿಕಾರಿಗಳು ನಿರಾಕರಿಸಿದ್ದರಿಂದ, ಕರಾಚಿಯಲ್ಲಿ ತುರ್ತುಭೂಸ್ಪರ್ಷ ಮಾಡಲಾಗಿದೆ ಎಂದು ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ