ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಜಿಯಾಬಾದ್: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಗಾಳಿಯಲ್ಲಿ ಗುಂಡು (Ghaziabad | Protest | NH-24 | Teachers day)
 
ಗಜಿಯಾಬಾದಿನ ವಸತಿಪ್ರದೇಶದಲ್ಲಿ ಪೊಲೀಸರು ಹಾಗೂ ಸ್ಥಳೀಯರ ನಡುವೆ ಸಂಭವಿಸಿದ ಘರ್ಷಣೆಯು ಹಿಂಸಾತ್ಮಕ ತಿರುವು ಪಡೆದು, ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಶನಿವಾರ ಸಂಭವಿಸಿದೆ.

ರೋಷಗೊಂಡ ಪ್ರತಿಭಟನಾಕಾರರು ಎನ್ಎಚ್-24ರಲ್ಲಿ ತಡೆ ಉಂಟುಮಾಡಿದ್ದು, ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ಲಾಲ್ ಕೌನ್‌ನಿಂದ ಯುಪಿ ಗೇಟ್‌ ತನಕ ಸುಮಾರು 15 ಕಿಲೋಮೀಟರ್ ತನಕ ವಾಹನಗಳು ಚಲಿಸಲಾಗದೆ ನಿಂತಿದ್ದವು.

ಹೈವೇಯಲ್ಲಿ ಸಾಗುತ್ತಿದ್ದವರು ಬೆಳಿಗ್ಗೆ ಏಳುಗಂಟೆಯಿಂದ ರಸ್ತೆಯಲ್ಲಿ ಬಾಕಿಯಾಗಿದ್ದು ವೈಶಾಲಿ ಮತ್ತು ಇಂದಿರಾಪುರಂನಂತಹ ಸ್ಥಳಗಳಿಗೆ ತೆರಳುವವರು ಅಲ್ಲಿಗೆ ತಲುಪಲಾಗದೆ ತೊಂದರೆ ಅನುಭವಿಸುವಂತಾಯಿತು.

ಉದ್ರಿಕ್ತ ಮಂದಿ ಡಜನ್‌ಗಿಂತಲೂ ಅಧಿಕ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಲ್ಲಿ ಒಂದು ಬಸ್ ಹಾಗೂ ಎರಡು ಟ್ರಕ್‌ಗಳೂ ಸೇರಿವೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಅಸಾಧ್ಯವಾದಾಗ ಪೊಲೀಸರು ಲಾಠಿಛಾರ್ಜ್ ನಡೆಸಿದ್ದು ಇದಕ್ಕೂ ಬಗ್ಗದಾಗ ಗಾಳಿಯಲ್ಲಿ ಗುಂಡುಹಾರಿಸಿದರು.

ಇದು ಅಕ್ರಮವಾಗಿ ರಚಿಸಲಾಗಿರುವ ಕಾಲನಿ ಎಂದು ಹೇಳಲಾಗಿದ್ದು, ಅನಧಿಕೃತವಾದ ಕಡ್ಡಗಳನ್ನು ಕೆಡವಲು ಆರಂಭಿಸಿದಾಗ ಇಲ್ಲಿನ ನಿವಾಸಿಗಳು ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಗಿದೆ. ಸರ್ಕಾರಿ ಭೂಮಿಯಲ್ಲಿ ಲ್ಯಾಂಡ್ ಮಾಫಿಯಾಗಳು ಅಕ್ರಮವಾಗಿ ಕಾಲನಿ ರೂಪಿಸಿದ್ದಾರೆ ಎಂಬುದು ಅಧಿಕಾರಿಗಳ ದೂರು. ಆದರೆ, ನಾವು ಇಲ್ಲಿ 15ವರ್ಷಗಳಿಂದ ನೆಲೆಸಿದ್ದೇವೆ ಎಂಬುದಾಗಿ ಹೇಳುತ್ತಿರುವ ನಿವಾಸಿಗಳು ಕಟ್ಟಡಗಳನ್ನು ಕೆಡವುದಕ್ಕೆ ಪ್ರತಿರೋಧ ಒಡ್ಡಿದ್ದಾರೆ.

ಇಲ್ಲಿ ನೆಲೆಸುತ್ತಿರುವ ಹೆಚ್ಚಿನ ನಿವಾಸಿಗಳು ಕೆಳಮಧ್ಯಮ ವರ್ಗದವರೆಂದು ಹೇಳಲಾಗಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ