ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಿರುಪತಿ ಲಾಡುಗೆ ಭೌಗೋಳಿಕ ಹಕ್ಕು ಸ್ವಾಮ್ಯ (Thirupathi | Laddu | Thimmappa | Rights)
 
WD
ತಿರುಪತಿ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಭಕ್ತರಿಗೆ ವಿತರಿಸಲಾಗುವ ಲಾಡುವಿಗೆ ಭೌಗೋಳಿಕ ಹಕ್ಕು ಸ್ವಾಮ್ಯ ಲಭಿಸಿದ್ದು ತಿರುಪತಿ ಲಾಡಿನ ಹೆಸರಿನಲ್ಲಿ ನಕಲಿ ಲಾಡು ತಯಾರಿಕೆ ಅಥವಾ ಮಾರಾಟವನ್ನು ನಿಷೇಧಿಸಲಾಗಿದೆ. ತಿರುಪತಿ ಲಾಡುವಿಗೆ ಭೌಗೋಳಿಕ ಗುರುತಿನ ಮಾನ್ಯತೆ ನೀಡಬೇಕು ಎಂದು ಕೋರಿ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಆಡಳಿತ ಮಂಡಳಿ ಇತ್ತೀಚೆಗೆ ಚೆನ್ನೈನ ಭೌಗೋಳಿಕ ಸಂಕೇತ ನೋಂದಣಿ ಕಚೇರಿಯನ್ನು ಕೋರಿತ್ತು.

ಟಿಟಿಡಿಗೆ ಈಗಾಗಲೇ ಹಕ್ಕು ಸ್ವಾಮ್ಯ ದಾಖಲೆಗಳನ್ನು ನೀಡಲಾಗಿದ್ದು ಇನ್ನು ಮುಂದೆ ಯಾರೂ ತಿರುಪತಿ ಲಾಡನ್ನು ನಕಲು ಮಾಡುವಂತಿಲ್ಲ ಎಂದು ಭೌಗೋಳಿಕ ಸಂಕೇತ ನೋಂದಣಿ ಕಚೇರಿ ಸಹಾಯಕ ನಿರ್ದೇಶಕ ಜಿ. ಎಲ್. ವರ್ಮಾ ತಿಳಿಸಿದ್ದಾರೆ. ಹಾಗಾಗಿ ತಿರುಪತಿ ತಿಮ್ಮಪ್ಪನ ಪ್ರಸಾದ ರೂಪದಲ್ಲಿ ವಿತರಿಸಲಾಗುವ ಘಮಬೀರುವ ಲಾಡನ್ನು ಇನ್ನು ಯರೂ ನಕಲಿಸಲು ಸಾಧ್ಯವಿಲ್ಲ.

ತಿರುಪತಿ ಲಾಡು ವಿಶೇಷವಾದ ಗಾತ್ರ ಮತ್ತು ರುಚಿ ಹೊಂದಿದೆ. ಗುಣಮಟ್ಟದಲ್ಲಿ ಕೂಡ ಜನರಿಂದ ಪ್ರಸಿದ್ಧಿ ಪಡೆದಿದೆ ಎಂದು ಟಿಟಿಡಿ ತನ್ನ ಅರ್ಜಿಯಲ್ಲಿ ತಿಳಿಸಿತ್ತು. ತಿರುಪತಿಯಲ್ಲಿ, 700ರಿಂದ 720 ಗ್ರಾತೂಗುವ ದೊಡ್ಡ, ಹಾಗೂ 174 ಗ್ರಾಂ ತೂಗುವ ಚಿಕ್ಕ ಎಂಬ ಎರಡು ಗಾತ್ರದಲ್ಲಿ ಲಾಡುಗಳು ಲಭ್ಯವಿದೆ. ಚಿಕ್ಕ ಲಾಡನ್ನು ಭಕ್ತಾದಿಗಳಿಗೆ ದೇವಾಲಯದಲ್ಲಿ ಉಚಿತವಾಗಿ ವಿತರಿಸಿದರೆ, ದೊಡ್ಡ ಲಾಡನ್ನು ದರ್ಶನದ ಟಿಕೆಟ್ ಆಧಾರದಲ್ಲಿ ತಲೆಗೆ ಇಂತಿಷ್ಟು ಎಂಬುದಾಗಿ ವಿತರಿಸಲಾಗುತ್ತದೆ.

ಇದೀಗಾಗಲೇಶಾಂಪೇನ್, ಟೆಕ್ವಿಲಾದಂಥ ಜನಪ್ರಿಯ ವಸ್ತುಗಳಿಗೆ ಭೌಗೋಳಿಕ ಹಕ್ಕು ಸ್ವಾಮ್ಯತೆ ದೊರೆತಿದೆ. ಭಾರತದ ಡಾರ್ಜಿಲಿಂಗ್ ಚಹಾ, ಮಧುಬನಿ ಚಿತ್ರಕಲೆ, ಗೋವಾ ಫೆನ್ನಿಗೆ ಇದೇ ರೀತಿಯ ಭೌಗೋಳಿಕ ಹಕ್ಕು ಸ್ವಾಮ್ಯ ದೊರೆತಿದೆ.
ಸಂಬಂಧಿತ ಮಾಹಿತಿ ಹುಡುಕಿ