ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚಂದ್ರಯಾನ-1ರಿಂದ ಚಂದ್ರನಲ್ಲಿ ನೀರಿನ ಕುರುಹು? (India | Chandrayaan-1 | Moon | Water)
 
PTI
PTI
ಭಾರತದ ಚೊಚ್ಚಲ ಚಂದ್ರಯಾನ ಯೋಜನೆ ಚಂದ್ರಯಾನ-1 ನೌಕೆಯು ಚಂದ್ರನ ಮೇಲ್ಮೈಯಲ್ಲಿ ನೀರಿನ ಕುರುಹನ್ನು ಪತ್ತೆಹಚ್ಚಿದೆಯೇ? ನಿಯಂತ್ರಣ ಕಚೇರಿಯ ಸಂಪರ್ಕ ಕಡಿದುಕೊಂಡು ಚಂದ್ರಯಾನ-1 ಯೋಜನೆ ಹಠಾತ್ ಅಂತ್ಯಗೊಳ್ಳುವುದಕ್ಕೆ ಮುಂಚಿತವಾಗಿ ಚಂದ್ರನ ಮೇಲ್ಮೈಯಲ್ಲಿ ನೀರಿನ ಅಂಶ ಪತ್ತೆಹಚ್ಚಿರುವ ಬಗ್ಗೆ ಇಂಗಿತ ನೀಡಲಾಗಿದೆ.

ಚಂದ್ರಯಾನ-1 ಯೋಜನೆಯ ಪ್ರಮುಖ ಶೋಧನೆಯನ್ನು ಗುರುವಾರ ಪ್ರಕಟಿಸಲಾಗುವುದೆಂದು ನಿರೀಕ್ಷಿಸಲಾಗಿದ್ದು, ಚಂದ್ರನಲ್ಲಿ ನೀರಿನ ಕುರುಹು ಕಂಡುಬಂದಿದೆಯೆಂಬ ಗುಸುಗುಸು ಕೇಳಿಬರುತ್ತಿದೆ.ಚಂದ್ರನ ಮೇಲ್ಮೈನಲ್ಲಿ ನೀರಿನ ಕುರುಹಿನ ಶೋಧನೆ ನಿಜವಾಗಿದ್ದರೆ ಚಂದ್ರಯಾನ ನೌಕೆಯಲ್ಲಿ ಅಳವಡಿಸಿದ್ದ ಉಪಕರಣ ನಾಸಾದ ಮ‌ೂನ್ ಮಿನರಾಲಜಿ ಮ್ಯಾಪರ್‌ಗೆ ಈ ಕ್ರೆಡಿಟ್ ಸಲ್ಲುತ್ತದೆ.

388 ಕೋಟಿ ರೂ. ವೆಚ್ಚದ ಚಂದ್ರಯಾನ-1 ನೌಕೆಯನ್ನು ಅಕ್ಟೋಬರ್ 22ರಂದು ಉಡಾಯಿಸಲಾಗಿದ್ದು, ಸಂಪರ್ಕ ವೈಫಲ್ಯದಿಂದ ಆ.20ರಂದು ಅಂತ್ಯಗೊಂಡಿತು. ಚಂದ್ರನಲ್ಲಿ ನೀರಿನ ಸುಳಿವನ್ನು ಪತ್ತೆಹಚ್ಚುವುದು ಯೋಜನೆಯ ಮುಖ್ಯಗುರಿಗಳಲ್ಲಿ ಒಂದಾಗಿತ್ತು.ಇಲ್ಲಿಯವರೆಗೆ ನಾಸಾ ಅಥವಾ ಇಸ್ರೋ ಆಗಲೀ ಈ ಶೋಧನೆ ಬಗ್ಗೆ ತುಟಿಪಿಟಕ್ಕೆನ್ನಿಲ್ಲ.

ವಾಷಿಂಗ್ಟನ್ ಡಿಸಿಯ ನಾಸಾ ಮುಖ್ಯಕೇಂದ್ರದಲ್ಲಿ ಗುರುವಾರ ಮಾಧ್ಯಮದ ಜತೆ ಸಂವಾದದಲ್ಲಿ ಈ ಕುರಿತು ಪ್ರಕಟಣೆ ಹೊರಬೀಳಲಿದೆ. ಪ್ರಖ್ಯಾತ ಚಂದ್ರಯಾನ ವಿಜ್ಞಾನಿ, ಬ್ರೌನ್ ವಿವಿಯ ಕಾರ್ಲೆ ಪೀಟರ್ಸ್ ಇಲ್ಲಿ ಭಾಗವಹಿಸಲಿದ್ದಾರೆ. ಚಂದ್ರನಲ್ಲಿ ನೀರಿನ ಕುರುಹು ಪತ್ತೆಯಾದ ಬಗ್ಗೆ ಪ್ರತಿಕ್ರಿಯೆ ನೀಡದ ಬ್ರೌನ್ ವಿವಿಯ ವಕ್ತಾರ, ಇದೊಂದು ಪ್ರಮುಖ ಶೋಧನೆಯಾಗಿದ್ದು, ಚಂದ್ರಯಾನ ಯೋಜನೆಗೆ ಮಹತ್ತರವಾಗಿದೆ. ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಪ್ರಮುಖ ದಾಪುಗಾಲಾಗಿದೆಯೆಂದು ಪ್ರತಿಕ್ರಿಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ