ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅತ್ಯಾಚಾರಕ್ಕೆ ಯತ್ನಿಸಿ ಸುಟ್ಟು ಹಾಕಿದ ದುರುಳ ಐಐಟಿ ವಿದ್ಯಾರ್ಥಿ (Rape | murder | IIT Student | Nagaland)
Feedback Print Bookmark and Share
 
ತನ್ನ ಲೈಂಗಿಕ ದಾಹ ತೀರಿಸಿಕೊಳ್ಳಲು ಯುವತಿಯೊಬ್ಬಳಿಗೆ ಆಮಿಷ ಒಡ್ಡಿದಾಗ, ಆಕೆ ಒಪ್ಪದ ಕಾರಣಕ್ಕೆ ಆಕೆಯ ಕತ್ತು ಹಿಸುಕಿ ಕೊಂದು, ಬಳಿಕ ಯಾವುದೇ ಗುರುತು ಉಳಿಯದಂತೆ ಮಾಡಲು ಅರೆಬರೆಸುಟ್ಟು ಹಾಕಿರುವ ಅಮಾನುಷ ಕೃತ್ಯವನ್ನು ದೆಹಲಿ ಐಐಟಿಯ ಸಂಶೋಧನಾ ವಿದ್ಯಾರ್ಥಿಯೊಬ್ಬ ಎಸಗಿರುವುದಾಗಿ ವರದಿಯಾಗಿದೆ.

ಈ ದುರ್ಘಟನೆಯು ದಕ್ಷಿಣ ದೆಹಲಿಯ ಮುನಿರ್ಕಾ ಎಂಬಲ್ಲಿ ಸಂಭವಿಸಿದೆ. ಪುಷ್ಪಂ ಸಿನ್ನಾ ಎಂಬ 34ರ ಹರೆಯದ ಐಐಟಿ ಸಂಶೋಧನಾ ವಿದ್ಯಾರ್ಥಿಯನ್ನು ಈ ಸಂಬಂಧ ಶನಿವಾರ ಸಾಯಂಕಾಲ ಬಂಧಿಸಲಾಗಿದೆ. ನಾಗಾಲ್ಯಾಂಡಿನ ರಾಂಚನ್ಪಿ ಹೊಂಗ್ರೆ ಎಂಬ 19ರ ಹರೆಯದ ಯವತಿ ಈ ದಾರುಣ ಸಾವು ಕಂಡಿದ್ದಾಳೆ.

ಯುವತಿಯು ತನ್ನ ಸಹೋದರಿಯ ಮನೆಗೆ ತೆರಳಿದ್ದಳು. ಇವರ ನೆರೆ ಮನೆಯಲ್ಲಿದ್ದ ಸಿನ್ನಾ ಹಲವು ದಿನಗಳಿಂದ ಯುವತಿಯನ್ನು ಪುಸಲಾಯಿಸುತ್ತಿದ್ದ. ಆದರೆ ಆಕೆ ಈತನ ಆಮಿಷಗಳಿಗೆ ಸೊಪ್ಪು ಹಾಕಿರಲಿಲ್ಲ. ಶನಿವಾರ ಮಧ್ಯಾಹ್ನ ಆಕೆಯೊಬ್ಬಳೆ ಮನೆಯಲ್ಲಿ ಇದ್ದ ವೇಳೆ ಮನೆಗೆ ನುಗ್ಗಿದ ಸಿನ್ನಾ ಆಕೆಯ ಮೇಲೆ ಲೈಂಗಿಕ ಹಲ್ಲೆನಡೆಸಿದ್ದಾನೆ. ಆಕೆ ಪ್ರತಿಭಟಿಸಿದಾಗ ಉಸಿರುಗಟ್ಟಿಸಿ ಕೊಂದಿದ್ದು, ಸಾಕ್ಷ್ಯಗಳನ್ನು ಮರೆಮಾಚಲು ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸ್ಟೋವ್‍ನಲ್ಲಿ ಸುಟ್ಟುಹಾಕಿದ್ದ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ವಸಂತ ವಿಹಾರ ಪ್ರದೇಶದಲ್ಲಿ ಬಿದ್ದಿದ್ದ ಯುವತಿಯ ಶವವನ್ನು ಕಂಡು ಅಲ್ಲಿನ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದೊಂದು ಆಕಸ್ಮಿಕ ಮರಣ ಎಂಬುದಾಗಿ ಪೊಲೀಸರು ಮೊದಲಿಗೆ ಭಾವಿಸಿದ್ದರಾದರೂ, ಮರಣೋತ್ತರ ಪರೀಕ್ಷೆಯಿಂದ ಉಸಿರುಗಟ್ಟಿಸಿ ಕೊಂದು ಸುಟ್ಟು ಹಾಕಿರುವ ವಿಚಾರ ಬೆಳಕಿಗೆ ಬಂದಿತ್ತು.

ವಸಂತ ವಿಹಾರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದಾಖಲಾಗಿದೆ. ಹುಡುಗಿಯ ಶವವನ್ನು ಆಕೆಯ ಮನೆಯವರಿಗೆ ಒಪ್ಪಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ