ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಸ್ತ್ರಕ್ರಿಯೆಯಿಂದ ದೃಷ್ಟಿನಾಶ: ತನಿಖೆಗೆ ಆದೇಶ (cataract | surgery | sight | Nellore)
Feedback Print Bookmark and Share
 
ಉಚಿತ ನೇತ್ರಚಿಕಿತ್ಸಾ ಶಿಬಿರದಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದ ಹತ್ತು ಮಂದಿ ತಮ್ಮ ದೃಷ್ಟಿಯನ್ನು ಕಳೆದುಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಆಂಧ್ರಪ್ರದೇಶ ಸರ್ಕಾರ ಆದೇಶ ನೀಡಿದೆ.

ಈ ದುರ್ಘಟನೆಯು ಆಂಧ್ರ-ತಮಿಳ್ನಾಡು ಗಡಿ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಸಂಭವಿಸಿದೆ. ಶಸ್ತ್ರಚಿಕಿತ್ಸೆಯ ಬಳಿಕ, ತಮ್ಮ ಜೀವ ಉಳಿಸಿಕೊಳ್ಳಲು ನಾಲ್ವರು ತಮ್ಮ ಕಣ್ಣುಗುಡ್ಡೆಯನ್ನೇ ತೆಗೆಸಿಕೊಳ್ಳಬೇಕಾಯಿತು ಎಂಬುದಾಗಿ ಅವರ ಸಂಬಂಧಿಕರು ತಿಳಿಸಿದ್ದಾರೆ.

ನೆಲ್ಲೂರಿನ ಬೊಲ್ಲಿನೆನಿ ಕಣ್ಣು ಆಸ್ಪತ್ರೆಯ ವೈದ್ಯರ ತಂಡ ಒಂದು ಅಕ್ಟೋಬರ್ 20ರಂದು 24 ಮಂದಿಗೆ ಕಣ್ಣಿನ ಪೊರೆತೆಗೆಯಲೋಸುಗ ಶಸ್ತ್ರಕ್ರಿಯೆ ನಡೆಸಲಾಗಿತ್ತು. ಇವರಲ್ಲಿ 10 ಮಂದಿ ತಮ್ಮ ದೃಷ್ಟಿಯನ್ನು ಕಳಕೊಂಡಿದ್ದಾರೆ.

ಇದಕ್ಕೆ ವೈದ್ಯರ ನಿರ್ಲಕ್ಷವೇ ಕಾರಣ ಎಂಬುದಾಗಿ ಶಸ್ತ್ರಕ್ರಿಯೆಗೊಳಗಾಗಿರುವವರ ಕುಟುಂಬಿಕರು ಹೇಳುತ್ತಿದ್ದರೆ, ರೋಗಿಗಳು ಸೂಕ್ತ ಎಚ್ಚರಿಕೆ ವಹಿಸದಿರುವುದೇ ಇದಕ್ಕೆ ಕಾರಣ ಎಂಬುದಾಗಿ ವೈದ್ಯರು ಹೇಳುತ್ತಿದ್ದಾರೆ.

ಶಸ್ತ್ರಕ್ರಿಯೆಗೊಳಗಾದ 15 ಮಂದಿಯಲ್ಲಿ ಮರುದಿನದಂದು ತೀವ್ರವಾದ ಉರಿಹಾಗೂ ನೋವು ಕಾಣಿಸಿಕೊಂಡ ಕಾರಣ ಅವರು ಮರು ದಿನ ಮರಳಿ ಆಸ್ಪತ್ರೆಗೆ ಬಂದಿದ್ದರು. ಇವರನ್ನು ಬಳಿಕ ಚೆನ್ನೈಯ ಶಂಕರ ನೇತ್ರಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಇವರು ಮರಳಿ ದೃಷ್ಟಿ ಪಡೆಯುವ ಸಂಭವ ಅತ್ಯಂತ ದುರ್ಬಲವಾಗಿದೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ