ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಾಂಧೀಜಿಯ ನೂರು ಕೋಟಿ ರೂ ಪ್ರತಿಮೆಗೆ ಮೊಮ್ಮಗ ವಿರೋಧ (Gandhi | Dandi | anniversary | sculpture)
Feedback Print Bookmark and Share
 
PTI
PTI
ಖಂಡಿತವಾಗಿಯೂ ಗಾಂಧೀಜಿ ಬದುಕಿರುತ್ತಿದ್ದರೆ ಇದಕ್ಕೆ ಒಪ್ಪುತ್ತಿರಲಿಲ್ಲ. ಗಾಂಧೀಜಿಯವರು ಹಮ್ಮಿಕೊಂಡಿದ್ದ ಐತಿಹಾಸಿಕ ದಂಡಿಯಾತ್ರೆಯ ಸ್ಮರಣಾರ್ಥ ಅದ್ಧೂರಿ ಆಚರಣೆಗೆ ಗಾಂಧೀಜಿಯವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರೂ ಸಹ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

1930ರ ಮಾರ್ಚ್ 12ರಿಂದ ಎಪ್ರಿಲ್ 6ರ ತನಕ ನಡೆದ 390 ಕಿಲೋಮೀಟರ್ ದೂರದ ಬೃಹತ್ ಜಾಥಾದ ಸ್ಮರಣೆಯನ್ನು ವಿಜೃಂಭಣೆಯಿಂದ ಆಚರಿಸುವ ಯೋಜನೆಗೆ ನಕಾರ ಸೂಚಿಸಿರುವ ಗಾಂಧಿಯವರ ಮೊಮ್ಮಗ, ಪಶ್ಚಿಮ ಬಂಗಾಳದ ರಾಜ್ಯಪಾಲ ಹಾಗೂ ದಂಡಿ ಸಮಿತಿಯ ಅಧ್ಯಕ್ಷರೂ ಆಗಿರುವ ಗೋಪಾಲ ಗಾಂಧಿಯವರು ಇದು ಗಾಂಧಿ ತತ್ವಗಳಿಗೆ ಅಸಂಬದ್ಧವಾದುದು ಎಂದು ಹೇಳಿದ್ದಾರೆ.

ಇದರೊಂದಿಗೆ ಗಾಂಧೀಜಿಯವರು ದಂಡಿ ಯಾತ್ರೆ ಕೈಗೊಂಡಿದ್ದ ವೇಳೆ ಅವರನ್ನು ಅನುಸರಿಸಿದ್ದ 78 ಅನುಯಾಯಿಗಳನ್ನು ಸುತ್ತುವರಿದ ಗಾಂಧೀಜಿಯವರ 60 ಅಡಿ ಎತ್ತರದ ಪ್ರತಿಮೆಯನ್ನು ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುವ ಯೋಜನೆಯನ್ನೂ ಅವರು ನಿರಾಕರಿಸಿದ್ದಾರೆ.

ದಂಡಿಯಾತ್ರೆಯ ಸ್ಮರಣೆಗಾಗಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹಣ ವ್ಯಯಿಸುವುದು ಸಮಂಜಸವಲ್ಲ ಮತ್ತು ಇದು ಗಾಂಧಿ ತತ್ವಗಳಿಗೆ ಅಸಂಬದ್ಧವಾಗಿದೆ ಎಂದು ಹೇಳಿದ್ದಾರೆ. ರಾಷ್ಟ್ರದ ಮುಕ್ಕಾಲು ಪಾಲು ಮಂದಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬಳಲುತ್ತಿರುವಾಗ ಇಷ್ಟು ದೊಡ್ಡ ಮಟ್ಟದಲ್ಲಿ ವ್ಯಯಿಸುವುದು ಸೂಕ್ತವಲ್ಲ. ಇದಲ್ಲದೆ ಗುಜರಾತಿನಲ್ಲೂ ಸಾಕಷ್ಟು ಸಮಸ್ಯೆಗಳಿವೆ ಎಂದು ಗೋಪಾಲ್ ಗಾಂಧಿ ಹೇಳಿದ್ದಾರೆ. ಪ್ರತಿಮೆ ನಿರ್ಮಾಣಕ್ಕೆ ನಿಯೋಜಿತರಾಗಿದ್ದ ಶಿಲ್ಪಿ ಲತಿಕ ಕಾಟ್ ಅವರಿಗೂ ಈ ಕುರಿತು ಮಾಹಿತಿ ನೀಡಲಾಗಿದೆ.

ಬದಲಿಗೆ, ದಂಡಿ ಸತ್ಯಾಗ್ರಹಿಗಳ ಹೆಸರನ್ನು ಪ್ರಮುಖವಾಗಿ ಕೆತ್ತುವ ಮೂಲಕ ಸೂಕ್ತ ಸ್ಮಾರಕವನ್ನು ನಿರ್ಮಿಸಲು ಸಮಿತಿ ನಿರ್ಧರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ