ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕಿಸ್ತಾನಕ್ಕೆ ಹೋಗ್ಬೇಡಿ: ಭಾರತೀಯರಿಗೆ ಸಲಹೆ (Pakistan | Travel | India | Security)
Feedback Print Bookmark and Share
 
ಪಾಕಿಸ್ತಾನದಲ್ಲಿನ ಭದ್ರತಾ ಪರಿಸ್ಥಿತಿ ದಿನೇದಿನೇ ಕುಸಿಯುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿಗೆ ಪ್ರಯಾಣ ಬೆಳೆಸದಿರುವಂತೆ ತನ್ನ ಪ್ರಜೆಗಳಿಗೆ ಭಾರತ ಸಲಹೆ ನೀಡಿದೆ. ಪಾಕಿಸ್ತಾನದಲ್ಲಿ ಸೇನೆ, ಪೊಲೀಸ್ ಹಾಗೂ ಜನಸಾಮಾನ್ಯರನ್ನು ಗುರಿಯಾಗಿಸಿ ಸರಣಿ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಭಾರತದ ಈ ಎಚ್ಚರಿಕೆ ಹೊರಬಿದ್ದಿದೆ.

ಹೆಚ್ಚಿನೆಲ್ಲಾ ಗುರುದ್ವಾರಗಳಿರುವ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಪದೇಪದೇ ಭಯೋತ್ಪಾದನಾ ದಾಳಿಗಳು ನಡೆಯುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಭಾರತೀಯ ಯಾತ್ರಿಕರು ಪ್ರಯಾಣಿಸುವುದು ಸೂಕ್ತವಲ್ಲ ಎಂಬ ಆಭಿಪ್ರಾಯವನ್ನು ಭಾರತ ಸರ್ಕಾರ ಹೊಂದಿದೆ" ಎಂಬುದಾಗಿ ಗೃಹ ಸಚಿವಾಲಯ ನೀಡಿರುವ ಹೇಳಿಕೆಯಲ್ಲಿ ಸೂಚನೆ ನೀಡಲಾಗಿದೆ.

"ಅಂತೆಯೇ, ಇದೇ ಉದ್ದೇಶಕ್ಕಾಗಿ ಭಾರತದ ಪ್ರಜೆಗಳು ಪಾಕಿಸ್ತಾನಕ್ಕೆ ಅಲ್ಲಿನ ಭದ್ರತಾ ಪರಿಸ್ಥಿತಿ ಸುಧಾರಿಸುವ ತನಕ ಯಾವುದೇ ಭೇಟಿನೀಡುವುದು ಸೂಕ್ತವಲ್ಲ ಎಂಬುದಾಗಿ ಭಾರತ ಸರ್ಕಾರ ಸಲಹೆ ನೀಡುತ್ತದೆ" ಎಂಬುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದನಾ ದಾಳಿಗಳಲ್ಲಿ ಸುಮಾರು 200 ಮಂದಿ ಹತರಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ