ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಾಲಿಬಾನ್‌ಗೆ ಬೆಂಬಲ ಆರೋಪ ಶುದ್ಧ ಸುಳ್ಳು: ಭಾರತ (A.K. Antony | Taliban | Support | India)
Feedback Print Bookmark and Share
 
ಭಾರತವು ಆಫ್ಘಾನಿಸ್ತಾನದ ಗಡಿಯುದ್ದಕ್ಕೂ ತಾಲಿಬಾನ್‌ಗೆ ಬೆಂಬಲ ಹಾಗೂ ಹಣಕಾಸಿನ ನೆರವು ನೀಡುತ್ತಿದೆ ಎಂಬ ಪಾಕಿಸ್ತಾನದ ಆಪಾದನೆಯನ್ನು ಶುದ್ಧ ಸುಳ್ಳು ಎಂದಿರುವ ಭಾರತ ಈ ಆರೋಪವು ‘ಅಸಂಬದ್ಧ ಹಾಗೂ ಆಧಾರರಹಿತ’ ಎಂಬುದಾಗಿ ತಳ್ಳಿ ಹಾಕಿದೆಯಲ್ಲದೆ, ತಾಲಿಬಾನ್ಇಡೀ ವಿಶ್ವದ ಶಾಂತಿಗೆ ಅತಿದೊಡ್ಡ ಬೆದರಿಕೆ ಎಂದು ಹೇಳಿದೆ.

"ತಾಲಿಬಾನ್ ಜಗತ್ತಿನ ಶಾಂತಿಗೆ ಅತಿದೊಡ್ಡ ಬೆದರಿಕೆಯಾಗಿರುವ ಕಾರಣ ಭಾರತ ತಾಲಿಬಾನನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಭಾರತದ ಮೇಲಿನ ಆಪಾದನೆ ಅಸಂಬದ್ಧ ಮತ್ತು ಸಂಪೂರ್ಣವಾಗಿ ಆಧಾರ ರಹಿತವಾದುದು" ಎಂದು ರಕ್ಷಣಾ ಸಚಿವ ಎ.ಕೆ. ಆಂಟನಿ ಹೇಳಿದ್ದಾರೆ. ಅವರು ರಕ್ಷಣಾ ಇಲಾಖೆಯ ಸಮಾರಂಭದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.

ಆಫ್ಘಾನಿಸ್ತಾನದ ಗಡಿಯಲ್ಲಿನ ತಾಲಿಬಾನ್ ಉಗ್ರಗಾಮಿಗಳಿಗೆ ಹಣಕಾಸು ನೆರವಿನಂತಹ ಬೆಂಬಲಗಳನ್ನು ನೀಡುವ ಮೂಲಕ ಭಾರತವು ಪಾಕಿಸ್ತಾನದಲ್ಲಿ ಅಶಾಂತಿ ಹುಟ್ಟುಹಾಕಲು ಪ್ರಚೋದನೆ ನೀಡುತ್ತಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ರೆಹ್ಮಾನ್ ಮಲಿಕ್ ಸೋಮವಾರ ಆಪಾದಿಸಿದ್ದರು.

ಈ ಕುರಿತು ರಕ್ಷಣಾ ಸಚಿವರ ಅಭಿಪ್ರಾಯ ಕೇಳಿದ ವೇಳೆಗೆ ಅವರು ಮಲಿಕ್ ಅರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

"ಪಾಕಿಸ್ತಾನದಲ್ಲಿ ಅಸ್ಥಿರತೆ ಹುಟ್ಟುಹಾಕಲು ತಾಲಿಬಾನ್‌ಗೆ ಬೆಂಬಲ ನೀಡುತ್ತಿರುವ ಕೆಲವು ದ್ವೇಷಸಾಧಕರಲ್ಲಿ ಭಾರತವೂ ಸೇರಿರುವುದು ತನಗೆ ಮನವರಿಕೆಯಾಗಿದೆ’ ಎಂದು ಮಲಿಕ್ ಟಿವಿ ಸುದ್ದಿವಾಹಿನಿ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ