ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಚಿನ್ ನಿಷ್ಠ ಮಹಾರಾಷ್ಟ್ರೀಯನಲ್ಲ: ರಾವತ್ ವಾಗ್ದಾಳಿ (Sachin | Gavaskar | India | Attack)
Feedback Print Bookmark and Share
 
WD
WD
ಬ್ಯಾಟಿಂಗ್ ತಾರೆ ಸಚಿನ್ ತೆಂಡೂಲ್ಕರ್ ವಿರುದ್ಧ ಶಿವಸೇನೆ ತನ್ನ ವಾಗ್ದಾಳಿ ಮುಂದುವರಿಸಿದ್ದು, ಸಚಿನ್ ಯಾರೇ ಮರಾಠಿ ಕ್ರಿಕೆಟ್ ಆಟಗಾರನಿಗೆ ನೆರವು ನೀಡಿದ ಉದಾಹರಣೆಯಿಲ್ಲವೆಂದು ಟೀಕಿಸಿದೆ. ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಸಚಿನ್ ವಿರುದ್ಧ ಶಿವಸೇನೆ ಮುಖಂಡ ಬಾಳಾ ಠಾಕ್ರೆ ವಾಗ್ದಾಳಿ ಬಳಿಕ ಸೇನೆಯ ಸಂಸತ್ ಸದಸ್ಯ ಸಂಜಯ್ ರಾವತ್ ಸಚಿನ್ ವಿರುದ್ಧ ಟೀಕೆ ಮುಂದುವರಿಸಿದ್ದಾರೆ.

ಸುನಿಲ್ ಗಾವಸ್ಕರ್ ನಿಜವಾದ ಮಹಾರಾಷ್ಟ್ರೀಯ ಎಂದು ಗವಾಸ್ಕರ್ ಅವರನ್ನು ಹೊಗಳಿದ್ದು, ಭಾರತ ತಂಡದ ನಾಯಕರಾಗಿದ್ದ ಸಂದರ್ಭದಲ್ಲಿ ಅನೇಕ ಆಟಗಾರರಿಗೆ ಟೆಸ್ಟ್ ಪಂದ್ಯಗಳಲ್ಲಿ ಸ್ಥಾನ ದೊರಕಿಸಿಕೊಟ್ಟಿದ್ದಾರೆಂದು ರಾವತ್ ಹೊಗಳಿದ್ದಾರೆ.

ಸಾಮ್ನಾದಲ್ಲಿ ಬರೆದಿರುವ ಲೇಖನದಲ್ಲಿ ರಾವತ್ ಸಚಿನ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ಮಾಡಿದ್ದು, ಸಚಿನ್ ದೇಶಕ್ಕಾಗಿ ತ್ಯಾಗಮಾಡಿಲ್ಲ. ಅವರ ಸಾಧನೆ ಬರೀ ಬಿಸಿಸಿಐ ಮತ್ತು ದಾಖಲೆಪುಸ್ತಕಕ್ಕೆ ಮಾತ್ರ ಸೀಮಿತ. ಮರಾಠಿ ಕ್ರಾಂತಿಕಾರಿಗಳ ಮಟ್ಟವನ್ನೂ ಸಚಿನ್ ಮುಟ್ಟುವುದಿಲ್ಲವೆಂದು ಟೀಕಿಸಿದ್ದಾರೆ.. ತೆಂಡೂಲ್ಕರ್ ಮತ್ತು ಗವಾಸ್ಕರ್ ನಡುವೆ ಹೋಲಿಕೆ ಮಾಡಿ, ಮರಾಠಿ ಕ್ರಿಕೆಟಿಗರಿಗೆ ಸಚಿನ್ ಸಹಾಯಹಸ್ತ ನೀಡಿದ ಉದಾಹರಣೆಯಿಲ್ಲ.

ಬೇರೆಯವರನ್ನು ಬಿಡಿ, ವಿನೋದ್ ಕಾಂಬ್ಳಿಗೆ ಕೂಡ ಸಹಾಯ ಮಾಡಿಲ್ಲವೆಂದು ರಾವತ್ ವಾಗ್ದಾಳಿ ಮಾಡಿದ್ದಾರೆ.ಇದಕ್ಕೆ ವಿರುದ್ಧವಾಗಿ ಗವಾಸ್ಕರ್, ಭಾರತದ ಪರ ನಾಯಕನಾಗಿದ್ದಾಗ, ಮುಂಬೈ ಮತ್ತು ಮಹಾರಾಷ್ಟ್ರದಿಂದಲೇ ತಂಡದ ಅರ್ಧಭಾಗದಷ್ಟು ಆಟಗಾರರನ್ನು ಎಳೆದುಕೊಂಡಿದ್ದರು. ಸುರು ನಾಯಕ್ ಮತ್ತು ಜುಲ್ಫಿಕರ್ ಪಾರ್ಕರ್ ಅವರಿಗೆ ಕನಿಷ್ಟ ಒಂದು ಪಂದ್ಯದಲ್ಲಾದರೂ ಅವಕಾಶ ನೀಡುವ ಮ‌ೂಲಕ ಅನೇಕ ಮರಾಠಿ ಆಟಗಾರರಿಗೆ ಟೆಸ್ಟ್ ಪಂದ್ಯಗಳಲ್ಲಿ ಸ್ಥಾನ ದೊರಕಿಸಿ ಕೊಟ್ಟಿದ್ದಾರೆಂದು ಅವರು ಹೇಳಿದ್ದಾರೆ.

ಆದರೆ ತೆಂಡೂಲ್ಕರ್ ಮಹಾನ್ ಆಟಗಾರನೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ನಿಜವಾದ ಮಹಾರಾಷ್ಟ್ರೀಯನೆಂದರೆ ಗವಾಸ್ಕರ್. ಇಡೀ ರಾಷ್ಟ್ರ ಈಗಲೂ ಅವರನ್ನು ಅದೇ ರೀತಿ ಪ್ರೀತಿಸುತ್ತದೆಂದು ಲೇಖನದಲ್ಲಿ ತಿಳಿಸಲಾಗಿದೆ.ಸಚಿನ್ ಮುಂತಾದ ಆಟಗಾರರು ಕ್ರಿಕೆಟ್ ಆಟದಿಂದ ಶ್ರೀಮಂತರಾಗಿದ್ದಾರೆ. ಸಚಿನ್ ಶ್ರೀಮಂತಿಕೆ 200 ಕೋಟಿ ರೂಪಾಯಿ ಗಡಿಯನ್ನು ದಾಟಿದೆ. ಸೌರವ್ ಗಂಗೂಲಿ ಬಂಗಾಳದ ಬಗ್ಗೆ ಹೆಮ್ಮೆ ಪಡುವಂತೆ ಸಚಿನ್ ಕೂಡ ಮಹಾರಾಷ್ಟ್ರದ ಬಗ್ಗೆ ಹೆಮ್ಮೆ ಪಡಬೇಕೆಂದು ತಾವು ನಿರೀಕ್ಷಿಸುವುದಾಗಿ ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ