ಎಫ್‌ಬಿಐ ಬಂಧನಕ್ಕೀಡಾಗಿರುವ ಲಷ್ಕರೆ ಉಗ್ರ ಪಾಕಿಸ್ತಾನದ ಮೂಲದ ಡೇವಿಡ್ ಕೋಲ್ಮನ್ ಹೆಡ್ಲಿಗೂ ಕಳೆದ ವರ್ಷ ಮುಂಬೈ ಮೇಲೆ ನಡೆಸಿರುವ ಉಗ್ರವಾದಿ ದಾಳಿಗೂ ಸಂಬಂಧವಿದೆ ಎಂಬುದಾಗಿ ಪತ್ತೆ ಹಚ್ಚಿರುವ ಪೊಲೀಸರು, ಈ ದಾಳಿಯಲ್ಲಿ ಆತನ ಪಾತ್ರವೇನು ಎಂಬುದರ ಪತ್ತೆಗೆ ಮುಂದಾಗಿದ್ದಾರೆ.
ಹೆಡ್ಲಿ ವರ್ಷಾರಂಭದಲ್ಲಿ ತನ್ನ ಶಾಲಾ ಸ್ನೇಹಿತರಿಗೆ ಕಳುಹಿಸಿದ್ದ ಇಮೇಲ್‌ನಲ್ಲಿ ತಾನು ಹಾಗೂ ತನ್ನ ಸಹಚರರು ಭಾರತದ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವುದಾಗಿ ಹೇಳಿದ್ದ. ಮಾಧ್ಯಮ ವರದಿಗಳ ಪ್ರಕಾರ ಹೆಡ್ಲಿ ಸಂದೇಶಗಳನ್ನು ಯೂಹೂ ಗ್ರೂಪ್ ಸೈಟ್‌ಗೆ ಕಳುಹಿಸಿದ್ದಾನೆ.
ಅಫ್ಘಾನ್‌ನ ಹಳ್ಳಿಗರ ಮೇಲೆ ನ್ಯಾಟೋ ಬಾಂಬ್ ದಾಳಿಯ ವಿರುದ್ಧವೂ ಹೆಡ್ಲಿ ಆಕ್ರೋಶ ವ್ಯಕ್ತಪಡಿಸಿದ್ದ. ಅತ ತನ್ನ ಈ ಅಸಮಾಧಾನ ಸೂಚಿಸಿದ್ದಾನೆ. ಭಯೋತ್ಪಾದನೆಯು ಹೇಡಿಗಳ ಕೃತ್ಯ ಎಂದು ಹೇಳಿದರೂ ತಾನು ಅದನ್ನು ಒಪ್ಪುವುದಿಲ್ಲ ಎಂದು ಆತ ತನ್ನ ಇಮೇಲ್ ಒಂದರಲ್ಲಿ ಹೇಳಿಕೊಂಡಿದ್ದಾನೆ.
ಭಯೋತ್ಪಾನೆಯು ಕ್ರೂರ ಹಾಗೂ ನಿರ್ದಯ ಎಂದು ಕರೆಯಬಹುದು. ಆದರೆ ಅದು ಹೇಡಿಗಳ ಕೃತ್ಯವಲ್ಲ ಎಂದು ಹೇಳಿದ್ದಾನೆ.