ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸುಖೋಯ್‌ನಲ್ಲಿ ಹಾರಿದ ರಾಷ್ಟ್ರಪತಿ ಗಿನ್ನಿಸ್ ದಾಖಲೆ (Pratibha | Kalam | Sukhoi | Lohegaon)
Bookmark and Share Feedback Print
 
PTI
PTI
ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಬುಧವಾರ ಭಾರತೀಯ ವಾಯುಪಡೆಯ ಸುಖೋಯ್-30ಎಂಕೆಐ ಯುದ್ಧವಿಮಾನದಲ್ಲಿ ಹಾರಾಟ ಮಾಡುವ ಮ‌ೂಲಕ ಸೂಪರ್‌ಸೋನಿಕ್ ಸುಖೋಯ್ ವಿಮಾನದಲ್ಲಿ ಹಾರಿದ ಪ್ರಪ್ರಥಮ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. ಪುಣೆಯ ಹೊರವಲಯದ ಲೊಹೆಗಾಂವ್ ವಾಯುಪಡೆ ನೆಲೆಯಿಂದ ಪ್ರತಿಭಾ ಪಾಟೀಲ್ ಕುಳಿತಿದ್ದ ಸುಖೋಯ್ ವಿಮಾನ ಆಕಾಶಕ್ಕೆ ನೆಗೆಯಿತು.

ಗಂಟೆಗೆ 3000 ಕಿಮೀ ಚಲಿಸುವ ಸುಖೋಯ್ ವಿಮಾನವನ್ನು ಪ್ರತಿಭಾ ಪಾಟೀಲ್ ಕುಳಿತಿರುವ ದೃಷ್ಟಿಯಿಂದ 700-800 ಕೀಮೀ ವೇಗದಲ್ಲಿ 30 ನಿಮಿಷಗಳ ಕಾಲ ಹಾರಿತು. ಬೆಳಿಗ್ಗೆ 9 ಗಂಟೆಗೆ ವಾಯುನೆಲೆಗೆ ಆಗಮಿಸಿದ ಪ್ರತಿಭಾ ಪಾಟೀಲ್ ಅವರು ವಾಯುಪಡೆ ಯೋಧರಿಂದ ಗೌರವರಕ್ಷೆ ಸ್ವೀಕರಿಸಿದರು. 74 ವರ್ಷ ವಯಸ್ಸಿನ ಪ್ರತಿಭಾ ಪಾಟೀಲ್ ಅವರು ಸುಖೋಯ್ ವಿಮಾನದಲ್ಲಿ ವಿಶೇಷ ಗುರುತ್ವಾಕರ್ಷಣ ನಿಗ್ರಹ ಧಿರಿಸು ಧರಿಸಿದ್ದರು.

ಸುಖೋಯ್ ವಿಮಾನದಲ್ಲಿ ಹಾರುವಾಗ ಗುರುತ್ವಾಕರ್ಷಣೆ ಶಕ್ತಿಯಿಂದ ಮೆದುಳಿಗೆ ಹೆಚ್ಚಿನ ರಕ್ತದೊತ್ತಡ ತಡೆಯಲು ಈ ಸೂಟ್ ಧರಿಸಬೇಕಾಗುತ್ತದೆ. ಸುಖೋಯ್‌ನಲ್ಲಿ ಹಾರಲು ರಾಷ್ಟ್ರಪತಿ ಇಚ್ಛೆವ್ಯಕ್ತಪಡಿಸಿದ ಬಳಿಕ ಕಳೆದ 3 ತಿಂಗಳಿಂದ ಅದಕ್ಕೆ ಸಿದ್ಧತೆ ಮಾಡಲಾಗಿತ್ತು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಕೂಡ ಸುಖೋಯ್ ವಿಮಾನದಲ್ಲಿ ಹಾರಾಟ ನಡೆಸಿದ್ದು, ಪ್ರತಿಭಾ ಕೂಡ ಅವರ ಹಾದಿ ಹಿಡಿದಿದ್ದಾರೆ.

ರಾಷ್ಟ್ರಪತಿ ಕುಳಿತ ವಿಮಾನಕ್ಕೆ ವಿಂಗ್ ಕಮಾಂಡರ್ ಎಸ್.ಸಾಜನ್ ಪೈಲಟ್ ಹೊಣೆ ವಹಿಸಿದ್ದು, 3500 ಗಂಟೆಗಳ ಹಾರಾಟದ ಅನುಭವ ಹೊಂದಿದ್ದು, ಪ್ರಶಸ್ತಿ ವಿಜೇತರಾಗಿದ್ದಾರೆ. ಪ್ರತಿಭಾಪಾಟೀಲ್ ಸುಖೋಯ್ ಯುದ್ಧವಿಮಾನವನ್ನು ಏರಿ, ಪೈಲಟ್ ಹಿಂಭಾಗದ ಆಸನದಲ್ಲಿ ಕುಳಿತುಕೊಂಡರು. ಸುಖೋಯ್ ಯುದ್ಧವಿಮಾನದ ಅಕ್ಕಪಕ್ಕದಲ್ಲಿ ಬೆಂಗಾವಲಾಗಿ ಎರಡು ವಿಮಾನಗಳು ಹಾರಾಟ ನಡೆಸಿದವು.

ಅರ್ಧ ಗಂಟೆಯ ಬಳಿಕ ಸುಖೋಯ್ ವಿಮಾನ ಸುರಕ್ಷಿತವಾಗಿ ನೆಲೆಯಲ್ಲಿ ಇಳಿಯಿತು. ವಿಮಾನ ಇಳಿಯುತ್ತಿದ್ದಂತೆ ರಾಷ್ಟ್ರಪತಿ ನೆರೆದಿದ್ದ ಜನರತ್ತ ಕೈಬೀಸಿ ಹರ್ಷ ವ್ಯಕ್ತಪಡಿಸಿದರು ಮತ್ತು ವಿಜಯದ ಸಂಕೇತ ತೋರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ