ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಉಲ್ಫಾ ದಾಳಿಯ ಮಾಹಿತಿಯಿದ್ದರೂ ತಪ್ಪಿಸಲಾಗಲಿಲ್ಲ' (New Delhi | Assam | Chidambaram | Nalbari)
Bookmark and Share Feedback Print
 
ಅಸ್ಸಾಂನಲ್ಲಿ ಹೊಸ ದಾಳಿಗಳನ್ನು ಉಲ್ಫಾ ಯೋಜಿಸಿದೆಯೆಂಬ ಬಗ್ಗೆ ಕೇಂದ್ರಸರ್ಕಾರಕ್ಕೆ ಪೂರ್ವಭಾವಿ ಮಾಹಿತಿಗಳಿದ್ದರೂ, ಭಾನುವಾರ ನಲ್ಬಾರಿ ಜಿಲ್ಲೆಯಲ್ಲಿ ನಡೆದ ಬಾಂಬ್ ದಾಳಿ ತಪ್ಪಿಸಲು ವಿಫಲವಾಗಿದ್ದಾಗಿ ಗೃಹಸಚಿವ ಪಿ.ಚಿದಂಬರಂ ಅವರು ಸಂಸತ್ತಿನಲ್ಲಿ ಮಾಹಿತಿ ನೀಡಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ನಲ್ಬಾರಿ ಮತ್ತು ಗುವಾಹಟಿ ಜಿಲ್ಲೆಗಳಲ್ಲಿ ಉಲ್ಫಾ ಉಗ್ರಗಾಮಿಗಳು ಬಾಂಬ್ ಸ್ಫೋಟ ನಡೆಸಲು ಯೋಜಿಸಿದ್ದಾರೆಂದು ನಮಗೆ ಗುಪ್ತಚರ ಮಾಹಿತಿಗಳು ಸಿಕ್ಕಿದ್ದವು.

ಅಸ್ಸಾಂ ಸರ್ಕಾರ ಮತ್ತು ರಾಜ್ಯ ಪೊಲೀಸರ ಜತೆ ನಾವು ಈ ವರದಿಗಳನ್ನು ಹಂಚಿಕೊಂಡಿದ್ದೆವು ಎಂದು ನಲ್ಬಾರಿ ಬಾಂಬ್ ಸ್ಫೋಟ ಕುರಿತು ತಮ್ಮ ಹೇಳಿಕೆಯಲ್ಲಿ ಅವರು ರಾಜ್ಯಸಭೆಗೆ ಮಾಹಿತಿ ನೀಡಿದರು. ರಾಜ್ಯಸರ್ಕಾರದ ವರದಿಗಳನ್ನು ಉಲ್ಲೇಖಿಸಿ, ಬಾಂಬ್ ಸ್ಫೋಟದಲ್ಲಿ ಭಾಗಿಯೆಂದು ಶಂಕಿಸಲಾದ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆಯೆಂದು ಗೃಹಸಚಿವರು ತಿಳಿಸಿದರು.

ಬಾಂಬ್ ದಾಳಿಗೆ ಮುಂಚಿತವಾಗಿ ರಾಜ್ಯಸರ್ಕಾರವು ರಾಜ್ಯದೊಳಕ್ಕೆ ನುಸುಳಿದ್ದಾರೆಂದು ಶಂಕಿಸಲಾದ 9 ಮಂದಿ ಉಲ್ಫಾ ಉಗ್ರಗಾಮಿಗಳ ಬಗ್ಗೆ ಕಟ್ಟೆಚ್ಚರದ ಸೂಚನೆ ನೀಡಿತ್ತೆಂದು ಅವರು ಹೇಳಿದ್ದಾರೆ. ಎರಡು ಜಿಲ್ಲೆಗಳಲ್ಲಿ ಮತ್ತಿತರ ಕಡೆ ಬಿಗಿ ಬಂದೋಬಸ್ತ್ ವಹಿಸಿದ್ದರೂ, ನಲ್ಬಾರಿ ಘಟನೆಯನ್ನು ತಪ್ಪಿಸಲಾಗಲಿಲ್ಲ ಎಂದು ಚಿದಂಬರಂ ವಿಷಾದಿಸಿದ್ದಾರೆ.ಉಗ್ರಗಾಮಿ ಸಂಘಟನೆ ಮೇಲೆ ಭದ್ರತಾಪಡೆಗಳ ತೀವ್ರ ಒತ್ತಡದಿಂದ ಅವರು ಹತಾಶಸ್ಥಿತಿಯಲ್ಲಿದ್ದರು ಎಂದು ಸಚಿವರು ಹೇಳಿದ್ದಾರೆ.

ಉಲ್ಫಾದ ಪ್ರಮುಖ ನಾಯಕರು ಜೈಲಿನಲ್ಲಿದ್ದಾರೆ. ಇಬ್ಬರು ಉಲ್ಫಾ ನಾಯಕರು ಭದ್ರತಾಪಡೆಗಳಿಗೆ ಶರಣಾಗಿದ್ದವು. ಮ‌ೂವರು ಉಲ್ಫಾ ನಾಯಕರು ವಿದೇಶದಲ್ಲಿದ್ದಾರೆಂದು ನಂಬಲಾಗಿದ್ದು,ಅವರ ಮಧ್ಯೆಯೇ ಭಿನ್ನಾಭಿಪ್ರಾಯ ಉದ್ಭವಿಸಿದೆ. ಹೀಗಾಗಿ ಬಾಂಬ್ ಸ್ಫೋಟವು ಉಲ್ಭಾ ಹತಾಶ ಸ್ಥಿತಿಯನ್ನು ಬಿಂಬಿಸುತ್ತದೆಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಸ್ಸಾಂ, ಉಲ್ಫಾ, ನಲ್ಬಾರಿ, ಬಾಂಬ್