ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿ ಇನ್ನಾದ್ರೂ ಕೋಮು ರಾಜಕೀಯ ಬಿಡಲಿ: ಮೊಯ್ಲಿ (Babri Masjid | BJP | Liberhan report | Veerappa Moily)
Bookmark and Share Feedback Print
 
ಬಾಬರಿ ಮಸೀದಿ ಧ್ವಂಸಗೊಳ್ಳಲು ಬಿಜೆಪಿಯ ಹಿರಿಯ ಮುಖಂಡರೇ ಕಾರಣ ಎಂದು ಲಿಬರ್ಹಾನ್ ಆಯೋಗದ ವರದಿ ತಿಳಿಸಿರುವುದು ಆ ಪಕ್ಷ ಕೋಮುವಾದಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು ಎಂಬ ಸ್ಪಷ್ಟ ಎಚ್ಚರಿಕೆಯಾಗಿದೆ ಎಂದು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಮಸೀದಿ ಕೆಡವಲು ಕಾರಣರಾದ ಬಿಜೆಪಿಯ ಹಿರಿಯ ಮುಖಂಡರು ಈ ದೇಶದ ಜನತೆಗೆ ಉತ್ತರಿಸಬೇಕಾಗುತ್ತದೆ. ಸಂಘ ಪರಿವಾರ, ವಿಎಚ್‌ಪಿ ಮತ್ತು ಬಿಜೆಪಿ ಮುಖಂಡರ ಪಾತ್ರ ನಿಜಕ್ಕೂ ಆಘಾತಕಾರಿ ಎಂದರು.

ಆ ನಿಟ್ಟಿನಲ್ಲಿ ಬಿಜೆಪಿ, ಸಂಘಪರಿವಾರದವರು ತಮ್ಮ ಧೋರಣೆಯನ್ನು ಬದಲಾಯಿಸಿಕೊಳ್ಳಬೇಕು ಎಂಬ ಸ್ಪಷ್ಟ ಸಂದೇಶವನ್ನು ಲಿಬರ್ಹಾನ್ ಆಯೋಗದ ವರದಿ ನೀಡಿದೆ ಎಂದು ಹೇಳಿದರು. ಬಿಜೆಪಿ ಈಗಲಾದರೂ ಕೋಮು ದ್ವೇಷದ ರಾಜಕೀಯವನ್ನು ಬಿಟ್ಟು ರಾಷ್ಟ್ರೀಯ ನೀತಿಯಾದ ಸೌಹಾರ್ದ ನೀತಿಯನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.

ಈಗಲೂ ಬಿಜೆಪಿ ಮತ್ತು ಸಂಘ ಪರಿವಾರದವರು ಈ ವಿಚಾರವನ್ನು ಸಂಘರ್ಷಕ್ಕೆ ಬಳಸಿದರೆ ಈ ದೇಶದ ಜನತೆ ನಿಜಕ್ಕೂ ಅವರನ್ನು ಕ್ಷಮಿಸುವುದಿಲ್ಲ ಎಂಬುದು ನನ್ನ ಅನಿಸಿಕೆ ಎಂದು ಮೊಯ್ಲಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ