ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವ್ಯವಸ್ಥೆ ಲೋಪ ಬೆಳಕಿಗೆ ತಂದ ವಿನಿತಾ ಕಾಮ್ಟೆ ಪುಸ್ತಕ (Vinita Kamte | Last Bullet | Lapse)
Bookmark and Share Feedback Print
 
'ಪತಿಯನ್ನು ಕಳೆದುಕೊಂಡ ಪತ್ನಿಯಾಗಿ ಮಾತ್ರ ತಾವು ಈ ಪುಸ್ತಕ ಬರೆದಿಲ್ಲ, ನಮ್ಮ ವ್ಯವಸ್ಥೆಯ ಲೋಪದೋಷಗಳನ್ನು ಬೆಳಕಿಗೆ ತರುವುದು ಅಗತ್ಯವಾಗಿದ್ದ ವಿದ್ಯಾವಂತ ವ್ಯಕ್ತಿಯಾಗಿ ಈ ಪುಸ್ತಕ ಬರೆದಿದ್ದೇನೆ'ಮುಂಬೈ ಭಯೋತ್ಪಾದನೆ ದಾಳಿಗೆ ಬಲಿಯಾದ ಐಪಿಎಸ್ ಅಧಿಕಾರಿ ಅಶೋಕ್ ಕಾಮ್ಟೆ ಪತ್ನಿಯಾದ ವಿನಿತಾ ಕಾಮ್ಟೆ ಅವರು ತಮ್ಮ ಪತಿಯ ಗೌರವಾರ್ಥವಾಗಿ ಬರೆದ 'ಟು ದಿ ಲಾಸ್ಟ್ ಬುಲೆಟ್' ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಹೊಟೆಲ್ ತಾಜ್‌ನಲ್ಲಿ ನೆರೆದಿದ್ದ ಜನ‌ಸಮ‌ೂಹಕ್ಕೆ ಮನವರಿಕೆ ಮಾಡಿದರು.

ಹಿರಿಯ ಪತ್ರಕರ್ತೆ ವಿನಿತಾ ದೇಶ್‌ಮುಖ್ ಸಹಯೋಗದಲ್ಲಿ ಬರೆದ ವಿನಿತಾ ಕೃತಿಯನ್ನು ಅಮೇಯಾ ಪ್ರಕಾಶನ್ ಪ್ರಕಟಿಸಿದೆ. ಪುಸ್ತಕದಲ್ಲಿ ವಿನಿತಾ ಕಾಮ್ಟೆ ಪತಿಯ ಸಾವಿನ ಸಂದರ್ಭಗಳ ಬಗ್ಗೆ ಸತ್ಯಾಂಶವನ್ನು ಶೋಧಿಸುವ ಯತ್ನದಲ್ಲಿ ಅವರು ಅನುಭವಿಸಿದ ವೇದನೆಯನ್ನು ವಿವರಿಸಲಾಗಿದೆ. ಮ‌ೂವರು ಅಧಿಕಾರಿಗಳಾದ ಹೆಚ್ಚುವರಿ ಆಯುಕ್ತ ಕಾಮ್ಟೆ, ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಮತ್ತು ಎನ್‌ಕೌಂಟರ್ ತಜ್ಞ ವಿಜಯ್ ಸಾಲಸ್ಕರ್ ಅವರು ಹೇಗೆ ಕಾಮಾ ಆಸ್ಪತ್ರೆಯ ಹೊರಗೆ ಗುಂಡಿಗೆ ಬಲಿಯಾದರೆಂದು 'ಟು ದಿ ಲಾಸ್ಟ್ ಬುಲೆಟ್' ಬಯಲುಮಾಡಿದೆ.

ಉಗ್ರಗಾಮಿಗಳು ಗುಂಡು ಹಾರಿಸಿದ ಬಳಿಕ ಅದೇ ಸ್ಥಳದಲ್ಲೀ ಪೊಲೀಸ್ ವಾಹನವೊಂದು ಹಾದುಹೋಗಿದ್ದರೂ ಸುಮಾರು 40 ನಿಮಿಷಗಳವರೆಗೆ ಗುಂಡು ತಾಗಿದವರಿಗೆ ಯಾವುದೇ ನೆರವು ಸಿಗಲಿಲ್ಲವೆಂಬ ಸತ್ಯವನ್ನು ವಿನಿತಾ ಕಾಮ್ಟೆ ಬಹಿರಂಗ ಮಾಡಿದ್ದಾರೆ.ಆರ್‌ಟಿಐ ಕಾರ್ಯಕರ್ತ ಅರುಣಾ ರಾಯ್, ಮಾಜಿ ನಗರ ಪೊಲೀಸ್ ಆಯುಕ್ತರಾದ ಜೂಲಿಯೊ ರಿಬೇರೊ ಮತ್ತು ಎಂ.ಎನ್, ಸಿಂಗ್ ಹಾಗೂ ಪ್ರಸ್ತಕ್ತ ಆಯುಕ್ತ ಡಿ.ಶಿವಾನಂದನ್ ಪುಸ್ತಕ ಬಿಡುಗಡೆ ಮಾಡಿದರು. ತಾವು ಪೊಲೀಸ್ ಅಧಿಕಾರಿ ಪತ್ನಿ ಎಂಬ ಸ್ಥಾನಮಾನದಿಂದ ಈ ಪುಸ್ತಕ ಬರೆಯಲು ಸಾಧ್ಯವಾಗಿಲ್ಲ.

ಆರ್‌ಟಿಐ ಕಾಯ್ಡೆಯ ನೆರವಿನಿಂದ ತಮಗೆ ಪುಸ್ತಕ ಬರೆಯಲು ಸಾಧ್ಯವಾಯಿತು ಎಂದು ವಿನಿತಾ ಹೇಳಿರುವುದರಿಂದ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ ಅಗತ್ಯವೆಂದು ರಾಯ್ ಒತ್ತಿಹೇಳಿದರು.ಅನೇಕ ಸಾಕ್ಷಿಗಳನ್ನು ಸಂದರ್ಶಿಸಿ, ಲಾಗ್ ಪುಸ್ತಕಗಳ ವಿವರ ಪಡೆದಿದ್ದ ವಿನಿತಾ ಅವರಿಗೆ ಸತ್ಯ ಹುಡುಕುವ ದಾರಿಯಲ್ಲಿ ಪೊಲೀಸರಿಂದಲೇ ತೊಡಕುಗಳು ಉಂಟಾದವೆಂದು ಹೇಳಿದ್ದಾರೆ. ಸಾರ್ವಜನಿಕರು ಮತ್ತು ಮಾಧ್ಯಮ ಪುಸ್ತಕವನ್ನು ಓದಿ ವ್ಯವಸ್ಥೆಯಲ್ಲಿನ ಲೋಪದೋಷಗಳ ಬಗ್ಗೆ ಗಮನ ಸೆಳೆಯಬೇಕೆಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ