ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ವಿದೇಶಕ್ಕೆ ಹಾರಬೇಕೆ, ದೇವರಿಗೆ ಆಟಿಕೆ ವಿಮಾನ ಅರ್ಪಿಸಿ' (Abroad | Plane | Gurdwara | Dream)
Bookmark and Share Feedback Print
 
ಸುಖ ಅರಸಿ ವಿದೇಶಿ ನೆಲಕ್ಕೆ ಹಾರುವ ಕನಸು ಫಲಪ್ರದವಾಗಲು ಜಲಂಧರ್ ಜಿಲ್ಲೆಯ ಸಣ್ಣ ಗ್ರಾಮಕ್ಕೆ ಬನ್ನಿ, ಸ್ಥಳೀಯ ಗುರುದ್ವಾರಕ್ಕೆ ಆಟಿಕೆ ವಿಮಾನವನ್ನು ಕೊಡುಗೆ ನೀಡಿದರೆ ನಿಮ್ಮ ಕನಸುಗಳು ವಾಸ್ತವ ರೂಪ ಪಡೆಯಬಹುದು. ಇದೊಂದು ಅಚ್ಚರಿಯಾಗಿ ಕಂಡರೂ,ವಿದೇಶದಲ್ಲಿ ಭವ್ಯ ಭವಿಷ್ಯದ ಕನಸು ಕಾಣುವ ನೂರಾರು ಭಕ್ತರು, ಪಂಜಾಬ್ ದೋಬಾ ಪ್ರದೇಶದ ತಲ್ಹಾನ್ ಎಂಬ ಸಂತ ಬಾಬಾ ಸಿಂಗ್ ಶಾಹಿದ್ದೀನ್‌‌ಗೆ ನಿಷ್ಠವಾದ ಗುರುದ್ವಾರಕ್ಕೆ ಬರುವುದನ್ನು ಕಂಡರೆ ನಿಜವಿರಬಹುದೆನ್ನಿಸುತ್ತದೆ.

ಸಾವಿರಾರು ಭಕ್ತರು ಈ ಪವಿತ್ರ ಸ್ಥಳವನ್ನು ಭಕ್ತಿ, ಗೌರವದಿಂದ ಪರಿಗಣಿಸುತ್ತಾರೆ. ವಿದೇಶಕ್ಕೆ ತೆರಳಲು ವೀಸಾ ಪಡೆಯುವ ಕನಸು ಹೊಂದಿದ ಅನೇಕ ಮಂದಿ ಭಕ್ತರು ಇಲ್ಲಿಗೆ ಬರುತ್ತಾರೆ. ಈ ಗುರುದ್ವಾರದ ಬಗ್ಗೆ ಜನಪ್ರಿಯವಾಗಿರುವ ಭಾವನೆ ಏನೆಂದರೆ ಆಟಿಕೆ ವಿಮಾನವನ್ನು ಗುರುದ್ವಾರಕ್ಕೆ ಅರ್ಪಿಸಿದರೆ ಅವರ ಇಚ್ಛೆಗಳು ಫಲಪ್ರದವಾಗುತ್ತದೆ. ವಿವಿಧ ವಿಮಾನಗಳ ಹೆಸರು ಕೆತ್ತಿರುವ ಆಟಿಕೆ ವಿಮಾನಗಳನ್ನು ಭಕ್ತರು ಇಲ್ಲಿ ಅರ್ಪಿಸುತ್ತಾರೆ.

ಗುರುದ್ವಾರದ ಹೊರಗೆ ಇರುವ ಅಂಗಡಿಗಳಲ್ಲಿ ಆಟಿಕೆ ವಿಮಾನಗಳನ್ನು ಖರೀದಿಸಿ ಶ್ರೀ ಗುರು ಗ್ರಂಥ ಸಾಹಿಬ್‌ಗೆ ಅರ್ಪಿಸುತ್ತಾರೆ. ಯಾವುದೇ ನಿರ್ದಿಷ್ಟ ರಾಷ್ಟ್ರಕ್ಕೆ ಹಾರುವ ಕನಸು ಕಂಡವರು ಆ ರಾಷ್ಟ್ರದ ಏರ್‌ಲೈನ್‌ನ ಆಟಿಕೆ ವಿಮಾನವನ್ನು ಅರ್ಪಿಸುತ್ತಾರೆ. ತಾವು ಎರಡು ವರ್ಷಗಳ ಕೆಳಗೆ ಜರ್ಮನಿಗೆ ತೆರಳಿದ್ದೆ. ನನ್ನ ಬಯಕೆ ಈಡೇರಿದ್ದರಿಂದ ಗುರುದ್ವಾರಕ್ಕೆ ಆಟಿಕೆ ವಿಮಾನ ನೀಡಲು ನಿರ್ಧರಿಸಿದ್ದಾಗಿ ಭಕ್ತರೊಬ್ಬರು ಹೇಳಿದ್ದಾರೆ. ಭಕ್ತರ ಕೋರಿಕೆ ಈಡೇರಿಕೆಗೆ ಆಟಿಕೆ ವಿಮಾನಗಳನ್ನು ಸಂಗ್ರಹಿಸುವುದೇ ಗುರುದ್ವಾರ ಆಡಳಿತವರ್ಗಕ್ಕೆ ಈಗ ಕಷ್ಟದ ಕೆಲಸವಾಗಿ ಪರಿಣಮಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ