ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿಶೇಷ ಸೌಲಭ್ಯ-ಮುಸ್ಲಿಮರ ಧ್ವನಿಗೆ ಅರ್ಥವಿಲ್ಲ: ಲಿಬರ್ಹಾನ್ (Kalyan Singh | Babri Masjid | Demolition | Liberhan)
Bookmark and Share Feedback Print
 
ಸಂಸತ್‌ನಲ್ಲಿ ಕೋಲಾಹಲವೆಬ್ಬಿಸಿದ್ದ ಬಾಬರಿ ಮಸೀದಿ ಧ್ವಂಸ ಪ್ರಕರಣದ ಲಿಬರ್ಹಾನ್ ಆಯೋಗದ ವರದಿ ಇದೀಗ ಮತ್ತೊಂದು ವಿವಾದ ಹುಟ್ಟುಹಾಕಿದೆ. ಏಕಸದಸ್ಯ ಆಯೋಗದ ಮುಖ್ಯಸ್ಥ ಲಿಬರ್ಹಾನ್ ಅವರು ಮುಸ್ಲಿಂ ಬಗ್ಗೆ ವ್ಯಕ್ತಪಡಿಸಿರುವ ಹೇಳಿಕೆ ಬಿಸಿ, ಬಿಸಿ ಚರ್ಚೆಗೆ ಗ್ರಾಸವಾಗಿದೆ.

ಭಾರತದಲ್ಲಿ ಮುಸ್ಲಿಮರು ಹಾಗೂ ಮೊಗಲರು ಶತಮಾನಗಳಷ್ಟು ಕಾಲ ಆಡಳಿತ ನಡೆಸಿದ್ದರೂ ಕೂಡ ಕೆಲವು ಭಾರತೀಯರು ಇನ್ನೂ ಕೂಡ ಮುಸ್ಲಿಮರಿಗೆ ವಿಶೇಷ ಸೌಲಭ್ಯ ನೀಡಬೇಕೆಂದು ಧ್ವನಿ ಎತ್ತುತ್ತಿರುವುದು ನಿರರ್ಥಕವಾಗಿದೆ ಎಂದು ವರದಿಯಲ್ಲಿ ಅಭಿಪ್ರಾಯ ಮಂಡಿಸಲಾಗಿದೆ.

ಕೇವಲ ತಮ್ಮ ಧಾರ್ಮಿಕ ಆಚರಣೆಯ ವಿಭಿನ್ನತೆಯ ಹಿನ್ನೆಲೆಯಲ್ಲಿಯೂ ಕೂಡ ಮುಸ್ಲಿಮರು ತಮಗೆ ವಿಶೇಷ ಸೌಲಭ್ಯ ನೀಡಬೇಕೆನ್ನುವುರಲ್ಲಿಯೂ ಯಾವುದೇ ಅರ್ಥವಿಲ್ಲ ಎಂಬುದಾಗಿ ವಿವರಿಸಲಾಗಿದೆ. ಈ ಪ್ರಸ್ತಾಪವೇ ಈಗ ಲಿಬರ್ಹಾನ್ ವಿರುದ್ಧ ತಿರುಗಿಬಿದ್ದಿದೆ.

ಆಯೋಗದಲ್ಲಿ ವರದಿಯಲ್ಲಿ ಮುಸ್ಲಿಮರ ಬಗ್ಗೆ ಹಾಗೇ ಲಿಬರ್ಹಾನ್ ವ್ಯಕ್ತಪಡಿಸಿರುವ ಅಭಿಪ್ರಾಯದ ಅರ್ಥವೇನು ಎಂಬುದಾಗಿ ಮುಸ್ಲಿಮ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

1996ರ ಡಿಸೆಂಬರ್ 6ರಂದು ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣ ರಾಷ್ಟ್ರದಾದ್ಯಂತ ಕೋಮುದಳ್ಳುರಿಗೆ ಕಾರಣವಾಗಿತ್ತು. ಘಟನೆ ಕುರಿತಂತೆ ಲಿಬರ್ಹಾನ್ ಆಯೋಗವನ್ನು ನೇಮಿಸಲಾಗಿತ್ತು. ಸತತ 17ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಮಂಗಳವಾರವಷ್ಟೇ ಲೋಕಸಭೆಯಲ್ಲಿ ಲಿಬರ್ಹಾನ್ ವರದಿಯನ್ನು ಮಂಡಿಸಲಾಗಿತ್ತು.

ವರದಿಯಲ್ಲಿ ಬಿಜೆಪಿಯ ಹಿರಿಯ ತಲೆಗಳಾದ ವಾಜಪೇಯಿ,ಅಡ್ವಾಣಿ, ಮುರಳಿಮನೋಹರ್ ಜೋಶಿ ಸೇರಿದಂತೆ ಸಂಘ ಪರಿವಾರ,ವಿಹಿಂಪ ಮುಖಂಡರ ಹೆಸರು ಆರೋಪಪಟ್ಟಿಯಲ್ಲಿ ದಾಖಲಾಗಿತ್ತು. ಇದು ಲೋಕಸಭೆಯಲ್ಲಿ ಕೋಲಾಹಲಕ್ಕೆ ಎಡೆಮಾಡಿಕೊಟ್ಟಿತ್ತು. ಅವೆಲ್ಲ ಅವಾಂತರಗಳ ನಡುವೆಯೇ ಲಿಬರ್ಹಾನ್ ಮುಸ್ಲಿಮರ್ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯ ಸಹ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಸಂಬಂಧಿತ ಮಾಹಿತಿ ಹುಡುಕಿ