ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈ ದಾಳಿಗೆ ಒಂದು ವರ್ಷ: ಹುತಾತ್ಮರ ಸ್ಮರಣೆ (Mumbai | 26/11 | police parade | Trident)
Bookmark and Share Feedback Print
 
26/11 ಮುಂಬೈ ಭಯೋತ್ಪಾದನೆ ದಾಳಿಗೆ ಒಂದು ವರ್ಷ ಸಂದಿತು. ಇಂದಿಗೂ ಭಯೋತ್ಪಾದಕರ ಎದುರು ಅಸಹಾಯಕತೆಯ ಪ್ರದರ್ಶನ ದುಃಸ್ವಪ್ನದಂತೆ ಕಾಡುತ್ತದೆ. ಮುಂಬೈ ದಾಳಿಯಲ್ಲಿ ಹುತಾತ್ಮರಾದವರಿಗೆ, ದಾಳಿಗೆ ಒಂದು ವರ್ಷ ಸಂದಿರುವ ನೆನಪಿಗಾಗಿ ಸಾವಿರಾರು ಜನರು ಇಂದು ಕಲೆತು ಹುತಾತ್ಮರನ್ನು ಸ್ಮರಿಸಿಕೊಂಡು ಗೌರವ ಅರ್ಪಿಸಲಿದ್ದಾರೆ.

ಮೊಂಬತ್ತಿ ಬೆಳಕಿನ ಮೆರವಣಿಗೆ, ಪೊಲೀಸ್ ಪಥಸಂಚಲನ, ಗೇಟ್‌ ವೇ ಆಫ್ ಇಂಡಿಯದಲ್ಲಿ ಸರ್ವಧರ್ಮೀಯ ಪ್ರಾರ್ಥನಾ ಸಭೆ ಮತ್ತು ಚಾಬಾಡ್ ಹೌಸ್‌ನಲ್ಲಿ ಸ್ಮರಣೀಯ ಸೇವೆ- ಎಲ್ಲ ವರ್ಗದ ಜನರು 26/11ಭಯೋತ್ಪಾದನೆ ದಾಳಿಯ ಹುತಾತ್ಮರನ್ನು ಸ್ಮರಿಸಲಿದ್ದಾರೆ.ಭಯೋತ್ಪಾದಕರ ದಾಳಿಗೆ ಗುರಿಯಾದ ಟ್ರೈಡೆಂಟ್ ಹೊಟೆಲ್‌ನಿಂದ ಮುಂಬೈ ಪೊಲೀಸರ ಪಥಸಂಚಲನವು ಆರಂಭವಾಗಿ ಗಿರ್ಗಾಮ್ ಚೌಪಾಟ್ಟಿಯಲ್ಲಿ ಮುಕ್ತಾಯವಾಗಲಿದೆ.

ಪೆರೇಡ್‌ಗೆ ಮುನ್ನ, ಮುಖ್ಯಮಂತ್ರಿ ಅಶೋಕ್ ಚವಾಣ್, ಉಪಮುಖ್ಯಮಂತ್ರಿ ಛಗನ್ ಭುಜಬಲ್ ಮುಂತಾದವರು ಹೊಟೆಲ್ ಟ್ರೈಡೆಂಟ್ ಹುತಾತ್ಮರಿಗೆ ಗೌರವಾರ್ಪಣೆ ಮಾಡಿದರು. ಪೆರೇಡ್‌ನಲ್ಲಿ ಪೊಲೀಸರು ಪಡೆಯ ಸಾಮರ್ಥ್ಯ ಹೆಚ್ಚಳಕ್ಕೆ ಕಳೆದೊಂದು ವರ್ಷದಲ್ಲಿ ಸಂಪಾದಿಸಿದ ಅತ್ಯಾಧುನಿಕ ಶಸ್ತ್ರಗಳನ್ನು, ತಂತ್ರಜ್ಞಾನವನ್ನು ಪ್ರದರ್ಶಿಸಿದರು.

ಮಂಗಳವಾರ ಸೇವೆಗೆ ಸೇರ್ಪಡೆಯಾದ ಮಹಾರಾಷ್ಟ್ರ ಎಲೈಟ್ ಕಮಾಂಡೊ ಪಡೆಯಾದ ಫೋರ್ಸ್ ಒನ್ ಕೂಡ ಪಥಸಂಚಲನದ ಭಾಗವಾಗಿತ್ತು. ಮುಂದೆ ಯಾವುದೇ ಭಯೋತ್ಪಾದನೆ ದಾಳಿ ಸಂಭವಿಸಿದರೂ ಫೋರ್ಸ್ ಒನ್ ಮುಂಚೂಣಿಯಲ್ಲಿರುತ್ತದೆ. ಫೋರ್ಸ್ ಒನ್ ಪಡೆಯು ಭಯೋತ್ಪಾದನೆ ನಿಗ್ರಹ ಕವಾಯತನ್ನು ಟ್ರೈಡೆಂಟ್‌ ಬಳಿ ನಡೆಸಿತು. ರೈಲ್ವೆ ರಕ್ಷಣಾ ಪೊಲೀಸರು ಕೂಡ ಚತ್ರಪತಿ ಶಿವಾಜಿ ಸ್ಟೇಡಿಯಂನಲ್ಲಿ 9.30ಕ್ಕೆ ಪಥಸಂಚಲನ ನಡೆಸಿದರು.
ಸಂಬಂಧಿತ ಮಾಹಿತಿ ಹುಡುಕಿ