ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಿಂದೂಗಳ ಐಕ್ಯತೆಗೆ ಜಾತಿ ಪದ್ಧತಿಯೇ ಬೇಲಿ: ಆರೆಸ್ಸೆಸ್ (Hindu | RSS | Mohan Bhagwat | Cast barrier)
Bookmark and Share Feedback Print
 
ಹಿಂದೂ ಸಮಾಜವನ್ನು ಕಳೆದ ನೂರಾರು ವರ್ಷಗಳಿಂದ ಬಾಧಿಸುತ್ತಿರುವ ಜಾತಿ ಪದ್ಧತಿಯನ್ನು ತೊಡೆದು ಹಾಕಬೇಕೆಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಕರೆ ನೀಡಿದ್ದಾರೆ.

ಜಾತೀಯತೆಯು ಹಿಂದುತ್ವದ ಪ್ರಗತಿಗೆ ತಡೆಯಾಗಿದೆ. ಇದನ್ನು ತೊಲಗಿಸಬೇಕಾದ ಅಗತ್ಯವಿದೆ ಎಂದು ತಾಜ್ ನಗರದಲ್ಲಿ ನಡೆಯುತ್ತಿರುವ ಎರಡು ದಿನಗಳ ಬುದ್ಧಿಜೀವಿಗಳ ಸಮಾವೇಶವೊಂದರಲ್ಲಿ ಸೋಮವಾರ ರಾತ್ರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ತಿಳಿಸಿದ್ದಾರೆ.

ಈ ಬಗ್ಗೆ ಆರೆಸ್ಸೆಸ್‌ನ ಸೈದ್ಧಾಂತಿಕ ನಿಲುವುಗಳಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದರು.

ನಾವು ಹಿಂದೂ ಸಮಾಜದಲ್ಲಿ ಬದಲಾವಣೆಯನ್ನು ಎದುರು ನೋಡುತ್ತಿದ್ದೇವೆ. ಹಾಗಾಗಬೇಕಾದರೆ ನಾವೆಲ್ಲರೂ ಸಾಮೂಹಿಕವಾಗಿ ಜಾತೀಯತೆಯ ವಿರುದ್ಧ ಹೋರಾಡಬೇಕಾದ ಅಗತ್ಯವಿದೆ. ಈ ವಿಚಾರದಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಮುಂಚೂಣಿಯಲ್ಲಿದ್ದು, ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಆರೆಸ್ಸೆಸ್‌ನಲ್ಲೇ ಅತೀ ಹೆಚ್ಚು ಅಂತರ್ಜಾತೀಯ ವಿವಾಹಗಳು ನಡೆದಿವೆ ಎಂದು ಭಾಗ್ವತ್ ವಿವರಣೆ ನೀಡಿದರು.

ಹಿಂದೂ ಸಮಾಜದಲ್ಲಿನ ಜಾತಿ ಪದ್ಧತಿಗಳ ಮೇಲೆ ದಾಳಿ ನಡೆಸಿದ ಭಾಗ್ವತ್, ಇದನ್ನು ನಿಷೇಧಿಸುವ ಅಗತ್ಯವಿದೆ ಎಂಬುದನ್ನು ಬೆಟ್ಟು ಮಾಡಿ ತೋರಿಸಿದರು. ಹಿಂದೂ ಸಮಾಜದ ಒಗ್ಗಟ್ಟಿಗಾಗಿ ಜಾತೀಯತೆಯನ್ನು ಶಕ್ತಿಹೀನಗೊಳಿಸುವ ಚಳುವಳಿಯಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಮುಂಚೂಣಿಯಲ್ಲಿದ್ದಾರೆ.

ಹಿಂದೂಗಳಲ್ಲಿನ ಜಾತಿ ಪದ್ಧತಿಗಳನ್ನು ಸರಿಪಡಿಸದ ಹೊರತು ಇತರ ಧರ್ಮಗಳ ಹುಳುಕುಗಳ ಗೋಜು ನಿಮಗ್ಯಾಕೆ ಎಂದು ಇತ್ತೀಚೆಗಷ್ಟೇ ಧಾರ್ಮಿಕ ಮುಖಂಡರೊಬ್ಬರು ಆರೆಸ್ಸೆಸ್‌ನತ್ತ ಪ್ರಶ್ನೆಯೆಸೆದಿರುವುದನ್ನು ಇದೀಗ ಸ್ಮರಿಸಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ