ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶೋಪಿಯಾನ್ ಪ್ರಕರಣ; ಶ್ರೀನಗರದಲ್ಲಿ ಭಾರೀ ಹಿಂಸಾಚಾರ (Shopian rape | CBI | Kashmir Valley | Nilofar Jan)
Bookmark and Share Feedback Print
 
ಶೋಪಿಯಾನ್‌ನಲ್ಲಿನ ಇಬ್ಬರು ಮಹಿಳೆಯರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿರುವ ವರದಿಗೆ ಆಕ್ರೋಶಗೊಂಡಿರುವ ಶ್ರೀನಗರ ಜನತೆ ಭಾರೀ ಹಿಂಸಾಚಾರದಲ್ಲಿ ನಿರತರಾಗಿದ್ದು, ದೊಂಬಿಯನ್ನು ನಿಯಂತ್ರಿಸಲು ಪೊಲೀಸರು ಆಶ್ರುವಾಯು ಮತ್ತು ಲಾಠಿಚಾರ್ಜ್ ನಡೆಸಿದ್ದಾರೆ.

ಇದೇ ವರ್ಷದ ಮೇ ತಿಂಗಳಲ್ಲಿ ನಡೆದಿದ್ದ ಇಬ್ಬರು ಯುವತಿಯರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ನಡೆಸಿದ ಸಿಬಿಐ, ಯುವತಿಯರು ನೀರಿನಲ್ಲಿ ಮುಳುಗಿ ಸತ್ತಿದ್ದಾರೆ; ಅವರ ಮೇಲೆ ಅತ್ಯಾಚಾರವೆಸಗಲಾಗಿಲ್ಲ ಎಂದು ವರದಿ ನೀಡಿದೆ ಎಂಬ ಪತ್ರಿಕಾ ವರದಿಗಳ ಹಿನ್ನಲೆಯಲ್ಲಿ 'ಶೋಪಿಯಾನ್ ಮಜ್ಲೀಸ್ ಮುಶಾವರಾತ್' ಬಂದ್‌ಗೆ ಕರೆ ನೀಡಿತ್ತು. ಈ ಪ್ರತಿಭಟನೆಗೆ ಹುರಿಯತ್ ಕಾನ್ಫರೆನ್ಸ್‌ನ ಉಭಯ ಬಣಗಳೂ ಬೆಂಬಲ ಸೂಚಿಸಿವೆ.

ನಿಲೋಫರ್ ಜಾನ್ (22) ಮತ್ತು ಆಕೆಯ ಸಂಬಂಧಿ 17ರ ಹರೆಯದ ಆಸಿಯಾ ಜಾನ್‌ರ ಶವ ಮೇ 30ರಂದು ಸೋಪಿಯಾನ್‌ನಲ್ಲಿನ ಕಾಲುವೆಯಲ್ಲಿ ಪತ್ತೆಯಾಗಿದ್ದವು. ಇವರಿಬ್ಬರನ್ನೂ ಭದ್ರತಾ ಪಡೆಗಳ ಸಿಬ್ಬಂದಿಗಳು ಅತ್ಯಾಚಾರವೆಸಗಿ ಕೊಲೆ ಮಾಡಿದ್ದರು ಎಂದು ಆರೋಪಿಸಿ ಭಾರೀ ಪ್ರತಿಭಟನೆಗಳು ನಡೆದಿದ್ದವು.

ದೇಶದ ಅಗ್ರ ತನಿಖಾ ಸಂಸ್ಥೆ ತನ್ನ 66 ಪುಟಗಳ ವರದಿಯನ್ನು ಸೋಮವಾರ ಜಮ್ಮು-ಕಾಶ್ಮೀರ ಹೈಕೋರ್ಟ್‌ಗೆ ಸಲ್ಲಿಸಿತ್ತು.

ಶ್ರೀನಗರದಲ್ಲಿನ ಅಂಗಡಿ, ಮಳಿಗೆಗಳು ಮತ್ತು ವ್ಯಾಪಾರಿ ಕೇಂದ್ರಗಳು ಇಂದು ಬಾಗಿಲು ಮುಚ್ಚಿವೆ. ಇತರ ನಗರಗಳಲ್ಲೂ ಸಾರ್ವಜನಿಕ ಜೀವನ ಅಸ್ತವ್ಯಸ್ತಗೊಂಡಿದ್ದು, ಸಾರ್ವಜನಿಕ ಸಾರಿಗೆ ವಾಹನಗಳು ರಸ್ತೆಗಳಿಗಿಳಿದಿಲ್ಲ.

ಅದೇ ಹೊತ್ತಿಗೆ ರಾಜಧಾನಿಯಲ್ಲಿ ಪ್ರಮುಖ ಖಾಸಗಿ ಸಾರಿಗೆ ವಾಹನಗಳು ಬಿಗಿ ಭದ್ರತೆಯಲ್ಲಿ ಕಾರ್ಯನಿರತವಾಗಿವೆ. ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರು ಶತಯತ್ನ ನಡೆಸುತ್ತಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವಾಜ್ ಮೌಲವಿ ಉಮರ್ ಫಾರೂಕ್, ಶಬೀರ್ ಶಾ ಮತ್ತು ನಯೀಮ್ ಖಾನ್ ಸೇರಿದಂತೆ ಪ್ರಮುಖ ನಾಯಕರನ್ನು ಮಂಗಳವಾರ ಮುಂಜಾನೆ ಬಂಧಿಸಲಾಗಿದೆ.

ಗಲಭೆ ನಿರತರನ್ನು ಚದುರಿಸಲು ಪೊಲೀಸರು ಆಶ್ರವಾಯು ಮತ್ತು ಲಾಠಿಚಾರ್ಜ್ ನಡೆಸಿದ್ದು, ಕಲ್ಲು ತೂರಾಟಗಳಲ್ಲೂ ಭಾಗವಹಿಸಿದ್ದು ರಾಜಧಾನಿಯಲ್ಲಿ ಸಾಮಾನ್ಯವಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ