ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ ರಾಜ್ಯದಲ್ಲಿ ಓಟ್ ಕಡ್ಡಾಯ ಮಾಡ್ತಾರಂತೆ..! (Narendra Modi | Gujarat | Election | Cheif Minister)
Bookmark and Share Feedback Print
 
ಓಟ್ ಹಾಕುವುದು ಕಡ್ಡಾಯ ಎಂಬೊಂದು ನೀತಿಯನ್ನು ಜಾರಿ ಮಾಡಲು ಹೊರಟಿರುವವರು ಗುಜರಾತ್‌ನ ಖಡಕ್ ಮುಖ್ಯಮಂತ್ರಿ ನರೇಂದ್ರ ಮೋದಿ. ಸ್ಥಳೀಯ ಚುನಾವಣೆ ಸಂದರ್ಭದಲ್ಲಿ ಕಡ್ಡಾಯವಾಗಿ ಮತ ಚಲಾಯಿಸಬೇಕು, ಇಲ್ಲದೆ ಇದ್ದರೆ ಸೂಕ್ತ ಕ್ರಮವನ್ನು ಅವರ ವಿರುದ್ಧ ಕೈಗೊಳ್ಳಲಾಗುತ್ತದೆ ಎನ್ನುತ್ತದೆ ಸರಕಾರದ ಈ ಹೊಸ ನೀತಿ.

ಈ ನೀತಿ ಇನ್ನಷ್ಟೇ ಜಾರಿಗೆ ಬರಬೇಕಾಗಿದೆ. ಈಗಿರುವ ನಿಯಮಗಳಿಗೆ ತಿದ್ದುಪಡಿ ತರುವ ಈ ಪ್ರಸ್ತಾಪವನ್ನು ಮುಂಬರುವ ವಿಧಾನಸಭಾ ಅಧಿವೇಶನ ಸಂದರ್ಭದಲ್ಲಿ ಮೋದಿ ಸರಕಾರ ಮುಂದಿಡಲಿದೆ.

ವಿಧಾನಸಭೆಯಲ್ಲಿ ಈ ಕಾನೂನಿಗೆ ಅಂಗೀಕಾರ ಬಿದ್ದಲ್ಲಿ ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಮುಂತಾದ ಚುನಾವಣೆಗಳ ಸಂದರ್ಭದಲ್ಲಿ ಜನತೆ ಮತ ಚಲಾಯಿಸುವುದು ಕಡ್ಡಾಯವಾಗಲಿದೆ.

ಗುಜರಾತ್ ಸ್ಥಳೀಯಾಡಳಿತ ನಿಯಮ 2009ರ (ತಿದ್ದುಪಡಿ ಮಸೂದೆ) ಪ್ರಕಾರ, ಮತ ಚಲಾಯಿಸಲು ವಿಫಲನಾಗುವ ಮತದಾರ ಅದಕ್ಕೆ ನೀಡಬೇಕಾದ ಕಾರಣವನ್ನು ತಿಂಗಳೊಳಗೆ ಒಪ್ಪಿಸಬೇಕು. ತಪ್ಪಿದಲ್ಲಿ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ.

ಈ ತಿದ್ದುಪಡಿ ಮಸೂದೆಯ ಪ್ರಕಾರ ಬಹುತೇಕ ಶೇ.50 ಸೀಟುಗಳನ್ನು ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಮಹಿಳೆಯರಿಗೆ ಮೀಸಲಿಡುವುದು ಕಡ್ಡಾಯ. ತಳಮಟ್ಟದಿಂದ ಮತ ಚಲಾವಣೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಸರಕಾರ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ