ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮತಾಂತರ, ಜಿಹಾದ್‌ಗೆ ಮೀಸಲಾತಿ ಪೂರಕ: ಬಿಜೆಪಿ, ವಿಎಚ್‌ಪಿ (VHP | Ranganath Commission | BJP | Muslim)
Bookmark and Share Feedback Print
 
ರಂಗನಾಥ್ ಆಯೋಗದ ಮುಸ್ಲಿಮರಿಗೆ ಶೇ.10ರ ಮೀಸಲಾತಿ ಶಿಫಾರಸ್ಸಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್, ಇದು ಅಸಾಂವಿಧಾನಿಕವಾಗಿದೆ; ಸರಕಾರಿ ಪ್ರಾಯೋಜಿತ ಜಿಹಾದ್‌‌ ಮತ್ತು ಮತಾಂತರಕ್ಕೆ ಪ್ರೋತ್ಸಾಹ ನೀಡುತ್ತದೆ ಎಂದು ಆರೋಪಿಸಿವೆ.

ಇದು ಮತಾಂತರಕ್ಕೆ ಪ್ರೋತ್ಸಾಹ ನೀಡುತ್ತದೆ..
ಹೀಗೆಂದು ಮಾಜಿ ನ್ಯಾಯಮೂರ್ತಿ ರಂಗನಾಥ್ ಮಿಶ್ರಾರವರ ವರದಿಯನ್ನು ಟೀಕಿಸಿರುವುದು ಭಾರತೀಯ ಜನತಾ ಪಕ್ಷ.

ಈ ಮೀಸಲಾತಿ ಶಿಫಾರಸ್ಸು ಧಾರ್ಮಿಕ ಮತಾಂತರಕ್ಕೆ ಪ್ರೋತ್ಸಾಹ ನೀಡುವುದಲ್ಲದೆ, ಸಂವಿಧಾನದಲ್ಲಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಸ್ತಿತ್ವಕ್ಕೆ ಧಕ್ಕೆಯನ್ನು ತರಲಿದೆ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.

ದಲಿತ ಮುಸ್ಲಿಮರು ಮತ್ತು ದಲಿತ ಕ್ರಿಶ್ಚಿಯನ್ನರಿಗೆ ಮೀಸಲಾತಿ ನೀಡುವ ಪ್ರಸ್ತಾಪವನ್ನು ಮುಂದಿಡುವ ಮೂಲಕ ಕಾಂಗ್ರೆಸ್ ತಾನೇ ತೋಡಿಕೊಂಡ ಗುಂಡಿಗೆ ಬಿದ್ದಿದೆ. ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವುದರಿಂದ ರಾಷ್ಟ್ರವಿರೋಧಿ ಮತ್ತು ಮತಾಂತರಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎನ್ನುವ ಬಿಜೆಪಿ ನಿಲುವನ್ನು ಇದರಿಂದ ಸಮರ್ಥಿಸಿಕೊಂಡಂತಾಗಿದೆ ಎಂದು ಪಕ್ಷದ ವಕ್ತಾರ ರಾಜೀವ್ ಪ್ರತಾಪ್ ರೂಡಿ ತಿಳಿಸಿದ್ದಾರೆ.

ಇದು ಸರಕಾರಿ ಪ್ರಾಯೋಜಿತ ಜಿಹಾದ್...
ಮುಸ್ಲಿಮರಿಗೆ ಶೇ.10 ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯದವರಿಗೆ ಶೇ.5ರ ಮೀಸಲಾತಿಯನ್ನು ತೀವ್ರವಾಗಿ ಖಂಡಿಸಿರುವ ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ, ಇದು ಅಸಾಂವಿಧಾನಿಕ ಎಂದು ಜರೆದಿದ್ದಾರೆ.

ಅಲ್ಲದೆ ಇಸ್ಲಾಮ್‌ ಹೆಸರಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ನಿರಾಕರಿಸುತ್ತಿರುವವರಿಂದ ದೇಶ ನಾಶಪಡಿಸುವ ಜಿಹಾದಿ ಸಂಚಿದು. ಕುಟುಂಬ ಕಲ್ಯಾಣ ಯೋಜನೆಯನ್ನು ಪಾಲಿಸುತ್ತಿರುವ ಹಿಂದೂ ಪರಿಶಿಷ್ಟರು ಮತ್ತು ಇತರರಿಗೆ ಇದರಿಂದ ಮೋಸವಾದಂತಾಗಿದೆ ಎಂದು ಅವರು ಹೇಳಿದ್ದಾರೆ.

ಶಿಫಾರಸ್ಸುಗಳ ಬಗ್ಗೆ ತೀವ್ರವಾಗಿ ಕಿಡಿ ಕಾರುತ್ತಾ ತೊಗಾಡಿಯಾ, ಎಲ್ಲಾ ಹಿಂದೂ ಪರಿಶಿಷ್ಟ ಜಾತಿಗಳು, ಇತರ ಹಿಂದುಳಿದ ಜಾತಿಗಳು ಹಾಗೂ ಬುಡಕಟ್ಟು ಜಾತಿಗಳವರು ತಮ್ಮ ಮಕ್ಕಳೂ ಬದುಕಬೇಕಾದರೆ ಸರಕಾರದ ದರೋಡೆ ಮತ್ತು ಜಿಹಾದ್ ವಿರುದ್ಧ ತಿರುಗಿ ಬೀಳಬೇಕು ಎಂದು ಕರೆ ನೀಡಿದ್ದಾರೆ.

ಆರ್‌ಜೆಡಿ, ಎಲ್‌ಜೆಪಿಗಳಿಂದ ಸ್ವಾಗತ...
ಅತ್ತ ಬಿಜೆಪಿ, ವಿಎಚ್‌ಪಿಗಳು ಭಾರೀ ಟೀಕೆ ವ್ಯಕ್ತಪಡಿಸುತ್ತಿರುವ ಬೆನ್ನಿಗೆ ಲೋಕ ಜನ ಶಕ್ತಿ (ಎಲ್‌ಜೆಪಿ) ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥರು ಆಯೋಗದ ಸಲಹೆಗಳನ್ನು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.

ಸರಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಕಡಿಮೆ ಅವಕಾಶಗಳನ್ನು ಅಥವಾ ಕೆಲವು ಬಾರಿ ಅವಕಾಶವನ್ನೇ ನೀಡಲಾಗುತ್ತಿಲ್ಲ. ನಮ್ಮ ಪ್ರಕಾರ ರಾಜ್ಯ ಮತ್ತು ಕೇಂದ್ರ ಸರಕಾರಗಳ ಎಲ್ಲಾ ನೌಕರಿಗಳಲ್ಲೂ ಮುಸ್ಲಿಮರಿಗೆ ಶೇ.15ರ ಮೀಸಲಾತಿ ನೀಡಬೇಕು ಎಂದು ಎಲ್‌ಜೆಪಿ ಆಗ್ರಹಿಸಿದೆ.

ಅದೇ ಹೊತ್ತಿಗೆ ಕೇಂದ್ರ ಸರಕಾರವು ರಂಗನಾಥ್ ಆಯೋಗದ ವರದಿಯನ್ನು ಜಾರಿಗೆ ತರಲು ವಿಫಲವಾದರೆ ಚಳವಳಿ ನಡೆಸುವುದಾಗಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಬೆದರಿಕೆ ಹಾಕಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕವೂ ಸರಕಾರಿ ವಲಯಗಳಲ್ಲಿ ಅಲ್ಪಸಂಖ್ಯಾತರಿಗೆ ಪ್ರಾಧಾನ್ಯತೆ ಸಿಗುತ್ತಿಲ್ಲ. ಹಾಗಾಗಿ ರಂಗನಾಥ್ ಆಯೋಗದ ವರದಿ ಶ್ಲಾಘನೀಯ ಮತ್ತು ಅದು ಕಡ್ಡಾಯವಾಗಿ ಜಾರಿಗೊಳ್ಳಲೇಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸಂಬಂಧಪಟ್ಟ ಸುದ್ದಿಯಿದು--
ಸರ್ಕಾರಿ ನೌಕರಿಯಲ್ಲಿ ಮುಸ್ಲಿಮರಿಗೆ ಶೇ.10 ಮೀಸಲಾತಿ..!
ಸಂಬಂಧಿತ ಮಾಹಿತಿ ಹುಡುಕಿ