ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವರನೂ ಗಂಡು, ವಧುವೂ ಗಂಡು; ಇದು ಗಂಡಸರ ಮದುವೆ..! (Homosexual couple | Lesbians | India | male couple)
Bookmark and Share Feedback Print
 
ಸಾಮಾಜಿಕ ಮಾನ್ಯತೆ ಅಪರೂಪವಾಗಿರುವ ಹೊರತಾಗಿಯೂ ಸಲಿಂಗಿಗಳ ಮದುವೆ ಸಿಂಧುವಾಗಿದ್ದನ್ನು ಸ್ವಾಗತಿಸಿದ್ದ ಜೋಡಿಗಳೀಗ ಒಂದೊಂದೇ ಮದುವೆಗೆ ಶರಣಾಗುತ್ತಿವೆ. ಹಲವಾರು ವರ್ಷಗಳಿಂದ ಗೆಳೆಯರೆಂದು ಗುರುತಿಸಿಕೊಂಡಿದ್ದ ಭೋಪಾಲ್ ಯುವಕರಿಬ್ಬರು ಈ ಪಟ್ಟಿಗೆ ಹೊಸ ಸೇರ್ಪಡೆ.

ಮಧ್ಯಪ್ರದೇಶ ರಾಜಧಾನಿ ಭೋಪಾಲ್ ಸಮೀಪದ ಭಟ್ಟಿ ಚೌಹರಹಾ ಎಂಬಲ್ಲಿನ ಇಸ್ರಾರ್ (25) ಮತ್ತು ಆಯಾಜ್ (30) ಎಂಬಿಬ್ಬರು ಯುವಕರು ಶನಿವಾರ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ.
Gay couple
PTI


ವಿದ್ಯಾವಂತರಾಗಿರುವ ಇಬ್ಬರೂ ಸಂಪ್ರದಾಯಬದ್ಧವಾಗಿ ವಿವಾಹವಾಗಿದ್ದಾರೆ. ಇವರಲ್ಲಿ ಇಸ್ರಾರ್ ಡಿಪ್ಲೋಮಾ ಮಾಡಿದವರು. ಸಮಾಜದಿಂದ ವಿರೋಧ ವ್ಯಕ್ತವಾಗಿದ್ದರೂ ಮದುವೆಯಾಗುವ ತೀರ್ಮಾನಕ್ಕೆ ಬಂದಿರುವುದಾಗಿ ಅವರು ಹೇಳಿದ್ದಾರೆ.

ಕಳೆದ ಒಂಬತ್ತು ವರ್ಷಗಳಿಂದ ಪರಸ್ಪರ ಆತ್ಮೀಯರಾಗಿರುವ ಜೋಡಿ ಮದುವೆ ಸಮಾರಂಭದಲ್ಲಿ ಮಾತನಾಡುತ್ತಾ, ನಮ್ಮ ಪ್ರೀತಿಯನ್ನು ಸರಿಯಾದ ಗಮ್ಯಸ್ಥಾನಕ್ಕೆ ತಲುಪಿಸಲು ನಾವು ಮದುವೆಯಾಗುವ ತೀರ್ಮಾನಕ್ಕೆ ಬಂದೆವು ಎಂದಿದ್ದಾರೆ.

ಇಲ್ಲಿ ನಾವು ಯಾವುದೇ ತಪ್ಪು ಅಥವಾ ಪಾಪ ಮಾಡಿಲ್ಲ. ಹಾಗಾಗಿ ಯಾರೂ ಇದನ್ನು ಆಕ್ಷೇಪಿಸುವಂತಿಲ್ಲ ಜೋಡಿ ಒಕ್ಕೊರಲಿನಿಂದ ಘೋಷಿಸಿದ್ದಾರೆ.

ಸಲಿಂಗಿ ಜೋಡಿಗಳು ಮದುವೆಯಾದ ನಂತರ ಕದ್ದು-ಮುಚ್ಚಿ ಅಥವಾ ಅವಮಾನಕಾರಿಯಾಗಿ ಸಂಸಾರ ನಡೆಸುವ ಕಾಲ ಮುಗಿದು ಹೋಗಿದೆ. ನಾವು ಯಾವುದನ್ನೂ ಲೆಕ್ಕಿಸುವುದಿಲ್ಲ ಎಂದು ಜೋಡಿ ತಿಳಿಸಿದೆ.

ಸಲಿಂಗಿ ಜೋಡಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಯಾವುದೇ ಹಿಂಜರಿಕೆ ತೋರಿಸದೆ ದಿಟ್ಟವಾಗಿ ಮುನ್ನಡೆಯಬೇಕು ಮತ್ತು ವಿರೋಧಿಸುವ ಸಮಾಜಕ್ಕೆ ನಾವೇನೂ ತಪ್ಪು ಮಾಡುತ್ತಿಲ್ಲ ಎಂದು ಹೇಳಬೇಕು ಎಂದು ಜೋಡಿ ಕರೆಯನ್ನೂ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ