ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯ್ಯಪ್ಪ ಭಕ್ತರಿಗೆ ಮೀನು-ಮಾಂಸ, ಯುವತಿಯರ ಜತೆ ಸೀಟು..! (Lord Ayyappa | Sabarimala pilgrim | Andaman | Nov-veg)
Bookmark and Share Feedback Print
 
ಬ್ರಹ್ಮಾಚಾರಿ ಅಯ್ಯಪ್ಪ ಭಕ್ತರೆಂದರೆ ಮಧು-ಮಾಂಸ ವರ್ಜಿತರು, ಮಹಿಳೆಯರಿಂದ ದೂರ ಉಳಿಯಬೇಕಾದವರು ಎಂಬುದು ಶಬರಿಮಲೆಯ ಅಲಿಖಿತ ನಿಯಮ. ಅದನ್ನು ಪಾಲಿಸಿಕೊಂಡೂ ಬರುತ್ತಿದ್ದಾರೆ ಯಾತ್ರಾರ್ಥಿಗಳು. ಆದರೆ ಕೆಲವು ದುಷ್ಕರ್ಮಿಗಳು ಇದನ್ನು ಭಂಗ ಮಾಡಲೆತ್ನಿಸಿದ ಪ್ರಸಂಗವೊಂದು ವರದಿಯಾಗಿದೆ.

ಅಂಡಮಾನ್‌ ಮತ್ತು ನಿಕೋಬಾರ್ ದ್ವೀಪದಿಂದ ಹಡಗಿನ ಮೂಲಕ ಚೆನ್ನೈ ತಲುಪಿ ಅಲ್ಲಿಂದ ಕೇರಳದಲ್ಲಿರುವ ಶಬರಿಮಲೆಗೆ ತೆರಳಬೇಕಾಗಿದ್ದ ಭಕ್ತರಿಗೆ ಈ ಅನುಭವವಾಗಿರುವುದು. ಹಡಗಿನಲ್ಲಿ ತಮಗೆ ಮೀನು-ಮಾಂಸದೂಟ ನೀಡಲಾಯಿತು ಮತ್ತು ಮಹಿಳೆಯರ ಪಕ್ಕವೇ ಕೂರುವಂತೆ ಆದೇಶಿಸಲಾಯಿತು ಎಂದು ಆರೋಪಿಸಿದ ಭಕ್ತರು, ಚೆನ್ನೈಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
WD


ನಮಗೆ ನೀಡಲಾಗಿದ್ದ ತಿಳಿಸಾರಿನಲ್ಲಿ ಮೀನು ಹಾಕಲಾಗಿತ್ತು, ಸಾಂಬಾರಿನಲ್ಲಿ ಆಡಿನ ಮಾಂಸವಿತ್ತು ಎಂದು ಚೆನ್ನೈ ಬಂದರು ತಲುಪಿದ ಭಕ್ತರು ಪತ್ರಕರ್ತರಲ್ಲಿ ದೂರಿಕೊಂಡಿದ್ದಾರೆ.

ಹಡಗಿನ ಆಹಾರದ ಗುತ್ತಿಗೆದಾರ ನೀಡಿದ ಮಾಂಸಾಹಾರಕ್ಕೆ ನೀವು ಇದಕ್ಕೆ ಆಕ್ಷೇಪವ್ಯಕ್ತಪಡಿಸಿಲ್ಲವೇ ಎಂದು ಪ್ರಶ್ನಿಸಿದಾಗ, ಗುತ್ತಿಗೆದಾರನ ಸಹಚರರು ಬೆದರಿಕೆ ಹಾಕಿದ್ದನ್ನು ಅಯ್ಯಪ್ಪ ವ್ರತಧಾರಿಗಳು ತೋಡಿಕೊಂಡರು.

ಇಷ್ಟೇ ಅಲ್ಲದೆ ಬಳಿಕ ಯುವತಿಯರೊಂದಿಗೆ ಕುಳಿತುಕೊಳ್ಳುವಂತೆ ನಮ್ಮ ಜತೆಗಿದ್ದ ಕೆಲವರ ಮೇಲೆ ಒತ್ತಡ ಹೇರಲಾಯಿತು ಎಂದು 60ರ ಹರೆಯದ ವ್ಯಕ್ತಿಯೊಬ್ಬರು ನೋವಿನಿಂದ ವೃತಭಂಗಕ್ಕೆತ್ನಿಸಿದ ಪ್ರಸಂಗವನ್ನು ವಿವರಿಸಿದ್ದಾರೆ.

ಸುಮಾರು 450 ಮಂದಿಯನ್ನು ಹೊತ್ತುಕೊಂಡು ದ್ವೀಪದಿಂದ ಚೆನ್ನೈ ಬಂದರಿಗೆ ಬಂದ ಹಡಗಿನಲ್ಲಿದ್ದ ಭಕ್ತರು ಪ್ರಯಾಣದ ಐದು ದಿನಗಳ ಅವಧಿಯಲ್ಲಿ ಮಾಂಸಾಹಾರ ಸೇವಿಸದೆ, ಕೇವಲ ಬಿಸ್ಕತ್ತು ಮತ್ತು ಹಣ್ಣನ್ನು ಸೇವಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಬಂದರಿನಲ್ಲಿ ತೀವ್ರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸಂಬಂಧಪಟ್ಟವರು ಹಡಗಿನ ಆಹಾರ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಲ್ಲದೆ ಹಿಂದೂವೇತರ ವ್ಯಕ್ತಿಗೆ ಗುತ್ತಿಗೆ ನೀಡಿರುವುದನ್ನೂ ಭಕ್ತರು ವಿರೋಧಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ