ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗುಜರಾತ್‌ನಲ್ಲಿ ಏಳು ಪಾಕಿಸ್ತಾನೀಯರನ್ನು ಬಂಧಿಸಿದ ಬಿಎಸ್‌ಎಫ್ (Pakistani men | BSF | Gujarat | Terrorists)
Bookmark and Share Feedback Print
 
ಗುಜರಾತ್‌ನ ಕಚ್ ಜಿಲ್ಲೆಯ ಅರೇಬಿಯನ್ ಸಾಗರ ಪ್ರದೇಶದಲ್ಲಿ ಸಂಶಯಾಸ್ಪದವಾಗಿ ಅಡ್ಡಾಡುತ್ತ ದೋಣಿಯೊಂದನ್ನು ಬಿಎಸ್‌ಎಫ್ ವಶಕ್ಕೆ ತೆಗೆದುಕೊಂಡಿದ್ದು, ಅದರಲ್ಲಿದ್ದ ಏಳು ಮಂದಿ ಪಾಕಿಸ್ತಾನೀಯರನ್ನು ಬಂಧಿಸಲಾಗಿದೆ.

ಅರೇಬಿಯನ್ ಸಾಗರದ ಕೋರಿ ಕ್ರೀಕ್ ಸಮೀಪ ಭಾರತೀಯ ಜಲಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ದೋಣಿಯನ್ನು ನಮ್ಮ ಪಡೆ ಗುರುತಿಸಿತ್ತು. ಅದರಲ್ಲಿದ್ದ ಏಳು ಮಂದಿ ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದ್ದು, ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಬಿಎಸ್ಎಫ್ ಜನರಲ್ ಇನ್ಸ್‌ಪೆಕ್ಟರ್ ಎ.ಕೆ. ಸಿನ್ಹಾ ತಿಳಿಸಿದ್ದಾರೆ.

2008ರ ಮುಂಬೈ ದಾಳಿ ನಡೆಸಿದ ಪಾಕಿಸ್ತಾನಿ ಉಗ್ರರು ಸಾಗರ ಮೂಲಕ ಭಾರತ ಪ್ರವೇಶಿಸಿದ ನಂತರ ಸಮುದ್ರ ಪ್ರದೇಶದಲ್ಲಿನ ಚಟುವಟಿಕೆಗಳ ಬಗ್ಗೆ ತಟರಕ್ಷಣಾ ಪಡೆ ಸೇರಿದಂತೆ ಭಾರತವು ಹೆಚ್ಚಿನ ಗಮನ ಹರಿಸುತ್ತಿದೆ.

ಬಂಧಿಸಿದ ನಂತರ ಅವರನ್ನು ವಿಚಾರಣೆ ನಡೆಸಲಾಗಿದ್ದು, ಪ್ರಾಥಮಿಕ ಮಾಹಿತಿಗಳ ಪ್ರಕಾರ ಅವರು ಕರಾಚಿಯವರು; ಇಲ್ಲಿಗೆ ಮೀನುಗಾರಿಕೆ ನಡೆಸಲು ಬಂದಿದ್ದಾರೆ. ಅವರ ಉದ್ದೇಶ ಬೇರೇನಾದರೂ ಆಗಿತ್ತೇ ಎಂಬುದನ್ನು ಕೂಲಂಕಷ ತನಿಖೆಯ ಮೂಲಕ ಕಂಡುಕೊಳ್ಳಲಾಗುತ್ತಿದೆ ಎಂದು ಸಿನ್ಹಾ ವಿವರಣೆ ನೀಡಿದ್ದಾರೆ.

ಅವರು ಬಳಸಿದ ದೋಣಿಯನ್ನು ವಶಕ್ಕೆ ತೆಗೆದುಕೊಂಡು, ಬಂಧಿತರನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಮುಂದಿನ ತನಿಖೆಗಳನ್ನು ಜಿಲ್ಲಾ ಪೊಲೀಸರು ನಡೆಸಲಿದ್ದಾರೆ ಎಂದರು.

ಈ ಹಿಂದೆ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಕಚ್‌ನ ಸರ್ ಕ್ರೀಕ್ ಪ್ರದೇಶದಲ್ಲಿ ಭಾರತೀಯ ಜಲಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಪಾಕಿಸ್ತಾನಿ ದೋಣಿಯೊಂದನ್ನು ವಶಕ್ಕೆ ತೆಗೆದುಕೊಂಡಿತ್ತಾದರೂ, ಅದರಲ್ಲಿದ್ದವರು ತಪ್ಪಿಸಿಕೊಂಡಿದ್ದರು. ಅದಕ್ಕೂ ಮೊದಲು ಇದೇ ಪ್ರದೇಶದಲ್ಲಿ ಆಗಸ್ಟ್ 16ರಂದು ಬೋಟೊಂದನ್ನು ವಶಪಡಿಸಿ, ಒಂಬತ್ತು ಮಂದಿ ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ