ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕಲಿ ಸಾಯಿಬಾಬಾ, ಸಮಾಧಿಗಳ ವಿರುದ್ಧ ಕ್ರಮ: ಶಿರ್ಡಿ ಸಂಸ್ಥಾನ (Shirdi Saibaba temple | devotees | Sai temples | Saibaba)
Bookmark and Share Feedback Print
 
ವಿಶ್ವದಾದ್ಯಂತದಿಂದ ಕೋಟ್ಯಾನುಗಟ್ಟಲೆ ಭಕ್ತರನ್ನು ಆಕರ್ಷಿಸುತ್ತಿರುವ ಶಿರ್ಡಿ ಶ್ರೀ ಸಾಯಿಬಾಬಾ ಸಂಸ್ಥಾನದ ಹೆಸರು ದುರುಪಯೋಗಕ್ಕೊಳಗಾಗುತ್ತಿದ್ದು, ಸಾಯಿಬಾಬಾ ಅವರ ಸಮಾಧಿಗಳನ್ನು ಅಲ್ಲಲ್ಲಿ ನಿರ್ಮಿಸಲಾಗುತ್ತಿದೆ. ಅವುಗಳನ್ನು ತಕ್ಷಣವೇ ತೆಗೆಯದಿದ್ದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ದೇವಳ ಎಚ್ಚರಿಕೆ ನೀಡಿದೆ.

ಸಾಯಿಬಾಬಾ ಅವರ ಸಮಾಧಿ ಇರುವುದು ಒಂದೇ ಮತ್ತು ಅದು ಶಿರ್ಡಿಯಲ್ಲಿದೆ. ಅವರ ಹೆಸರಿನಲ್ಲಿರುವ ಮಂದಿರಗಳಲ್ಲಿ ಎಲ್ಲೆಲ್ಲಾ ಸಮಾಧಿಗಳನ್ನು ನಿರ್ಮಿಸಲಾಗಿದೆಯೋ, ಅವುಗಳನ್ನು ತಕ್ಷಣವೇ ತೆಗೆಯಬೇಕು. ತಪ್ಪಿದಲ್ಲಿ ಕಾನೂನು ಕ್ರಮಕ್ಕೆ ಸಿದ್ಧರಾಗಬೇಕು ಎಂದು ಸಂಸ್ಥಾನದ ಟ್ರಸ್ಟಿ ಅಶೋಕ್ ಖಾಂಬೇಕರ್ ತಿಳಿಸಿದ್ದಾರೆ.
Sai Baba
PR


ಸಾಯಿಬಾಬಾ ಬಳಸಿದ್ದಾರೆ ಎಂದು ಹೇಳುತ್ತಾ ಕೆಲವು ಮಂದಿ ನಕಲಿ ಪಾದುಕೆಗಳನ್ನು ಪ್ರದರ್ಶಿಸಿ ಭಕ್ತರನ್ನು ಹಾದಿ ತಪ್ಪಿಸುತ್ತಿದ್ದಾರೆ. ಸಾಯಿಬಾಬಾ ಅವರು ತನ್ನ ಉತ್ತರಾಧಿಕಾರಿಯನ್ನೂ ನೇಮಿಸಿರಲಿಲ್ಲ. ಆದರೆ ಕೆಲವು ಸಾಧುಗಳು ಸಾಯಿಬಾಬಾ ಅವರಂತೆ ಬಟ್ಟೆ ಧರಿಸಿ ಭಕ್ತರನ್ನು ಮೋಸ ಮಾಡುತ್ತಿದ್ದಾರೆ. ಭಕ್ತಾದಿಗಳು ಕೂಡ ಇದನ್ನು ನಂಬುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಖಾಂಬೇಕರ್ ಅಸಮಾಧಾನ ವ್ಯಕ್ತಪಡಿಸಿದರು.

ಸಾಯಿಬಾಬಾ ಅವರು ಶಿರ್ಡಿಗೆ 1858ರಲ್ಲಿ ಬಂದಿದ್ದರು ಮತ್ತು 1918ರವರೆಗೂ ಇಲ್ಲೇ ಇದ್ದರು. ಅವರ ಎರಡು ಜೋಡಿ ಪಾದುಕೆಗಳು ಸಂಸ್ಥಾನದಲ್ಲಿದ್ದು, ಪ್ರತೀ ಗುರುವಾರ ಅವುಗಳನ್ನು ಭಕ್ತರು ದರ್ಶಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಸಾಯಿಬಾಬಾ ಸಂಸ್ಥಾನವು ಕಳೆದ ವರ್ಷ ಲಕ್ನೋ, ರಾಯ್ಪುರ್, ಪಣಜಿ, ಕೊಲ್ಕತ್ತಾ, ಗುವಾಹತಿ ಮತ್ತು ಕಾಲಿಂಪಾಂಗ್ ಸೇರಿದಂತೆ ದೇಶದ ಹಲವೆಡೆ 'ಪಾದುಕಾ ದರ್ಶನ' ಕಾರ್ಯಕ್ರಮಗಳನ್ನು ಏರ್ಪಡಿಸಿತ್ತು.

ಶಿರ್ಡಿಯು ಜಾತ್ಯತೀತತೆಯ ಸಂಕೇತವಾಗಿದ್ದು, ಇಲ್ಲಿಗೆ ಎಲ್ಲಾ ಧರ್ಮಗಳ ಜನ ಬರುತ್ತಿದ್ದಾರೆ. ಶಿರ್ಡಿ ಸಂಸ್ಥಾನದ ಉಪ ಕಚೇರಿ ಎಲ್ಲಿಯೂ ಇಲ್ಲ. ಆದರೆ ಭಾರತ ಸೇರಿದಂತೆ ಜಗತ್ತಿನಾದ್ಯಂತ 4,000ಕ್ಕೂ ಹೆಚ್ಚು ಸಾಯಿ ಮಂದಿರಗಳಿವೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ