ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಂಡವಾಳಶಾಹಿಗಳ ಹಿಡಿತದಲ್ಲಿ ಸರಕಾರ:ಮಾಯಾವತಿ (Sharad Pawar | mayawati | price rise)
Bookmark and Share Feedback Print
 
ದರ ಏರಿಕೆಗೆ ರಾಜ್ಯ ಸರಕಾರಗಳು ಕಾರಣ ಎನ್ನುವ ಕೇಂದ್ರದ ಹೇಳಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ,ಕೇಂದ್ರ ಸರಕಾರ ಬಂಡವಾಳಶಾಹಿಗಳ ಪ್ರಭಾವದಲ್ಲಿ ನಡೆಯುತ್ತಿದೆ. ದರ ಏರಿಕೆ ನಿಯಂತ್ರಿಸದಿದ್ದಲ್ಲಿ ರಾಷ್ಟ್ರವ್ಯಾಪಿ ಮುಷ್ಕರವನ್ನು ಹಮ್ಮಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದಾರೆ.

ಕಾಂಗ್ರೆಸ್ ನೇತೃತ್ವದ ಸರಕಾರ ಬಂಡವಾಳಶಾಹಿಗಳ ಅಣತಿ ಹಾಗೂ ಒತ್ತಡದಲ್ಲಿ ನಡೆಯುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. ಒಂದು ವೇಳೆ ದರ ಇಳಿಕೆಗೆ ಮುಂದಾಗದಿದ್ದಲ್ಲಿ ತಮ್ಮ ಪಕ್ಷ ದೇಶಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರಕಾರದ ಅಮುದು ಹಾಗೂ ರಫ್ತಿನ ತಪ್ಪು ಆರ್ಥಿಕ ನೀತಿಗಳು, ಬಂಡವಾಳಶಾಹಿಗಳು ಹಾಗೂ ಬೃಹತ್ ಉದ್ಯಮಿಗಳಿಗೆ ಲಾಭವಾಗಿ, ದರಗಳು ಗಗನಕ್ಕೇರುತ್ತಿವೆ ಎಂದು ಕಿಡಿಕಾರಿದರು.

ಅಹಾರ ಧಾನ್ಯಗಳು ತರಕಾರಿ ಮತ್ತು ಸಕ್ಕರೆ ದರಗಳು ನಿರಂತರವಾಗಿ ಏರಿಕೆಯಾಗುತ್ತಿದ್ದರೂ ಕೇಂದ್ರ ಸರಕಾರ ಸಮಯಕ್ಕೆ ತಕ್ಕಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿ ಕಾಳಸಂತೆಕಾರರಿಗೆ ಹಾಗೂ ವಹಿವಾಟುದಾರರಿಗೆ ಪರೋಕ್ಷವಾಗಿ ಸಹಕರಿಸುತ್ತಿದೆ ಎಂದು ಮಾಯಾವತಿ ಆರೋಪಿಸಿದ್ದಾರೆ.

ಕಳೆದ ವರ್ಷ ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಸರಕಾರ ರಾಜಕೀಯ ಲಾಭಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್‌ ದರಗಳಲ್ಲಿ ಇಳಿಕೆ ಮಾಡಲಾಗಿತ್ತು.ಚುನಾವಣೆಗಳ ನಂತರ ಬಂಡವಾಳಶಾಹಿಗಳ ಹಿತಕ್ಕಾಗಿ ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್‌ ದರಗಳಲ್ಲಿ ಏರಿಕೆ ಮಾಡಲು ಹವಣಿಸುತ್ತಿದೆ ಎಂದು ಮುಖ್ಯಮಂತ್ರಿ ಮಾಯಾವತಿ ಅಕ್ರೋಶ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶರದ್ ಪವಾರ್, ಮಾಯಾವತಿ, ದರ ಏರಿಕೆ