ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜರ್ಮನ್ ಬೇಕರಿಯ ಹತ್ತಿರ ವಾಸವಾಗಿದ್ದ ಹೆಡ್ಲಿ:ಪಿಳ್ಳೈ (PuneBomb Blast | Headley | German Bakery | Chabad Houses)
Bookmark and Share Feedback Print
 
ಇಸ್ರೇಲ್ ಮತ್ತು ಜಿವಿಷ್ ನಾಗರಿಕರನ್ನು ಗುರಿಯಾಗಿಸಿಕೊಂಡು ಉಗ್ರರಿಗೆ ನೆರವು ನೀಡಲು, ಅಮೆರಿಕ ಮೂಲದ ಲಷ್ಕರ್-ಏ.ತೊಯಿಬಾ ಶಂಕಿತ ಉಗ್ರ ಡೇವಿಡ್ ಕೊಲ್ಮನ್ ಹೆಡ್ಲಿ ಭಾರತದ ಪ್ರವಾಸದಲ್ಲಿದ್ದಾಗ, ಜರ್ಮನ್‌ ಬೇಕರಿಗೆ ಹತ್ತಿರವಿರುವ ಚಾಬಾದ್‌ ಹೌಸ್‌ನಲ್ಲಿ ಕೆಲ ಕಾಲ ತಂಗಿದ್ದನೆಂದು ಗುಪ್ತಚರ ದಳಗಳು ಮಾಹಿತಿ ನೀಡಿವೆ.

ಕೇಂದ್ರ ಗೃಹ ಕಾರ್ಯದರ್ಶಿಜಿ.ಕೆ ಪಿಳ್ಳೈ ಮಾತನಾಡಿ, ನಗರದ ಚಾಬಾದ್ ಹೌಸ್ ಹಾಗೂ ಒಶೋ ಆಶ್ರಮ ಹತ್ತಿರವಿರುವ ಹೋಟೆಲ್‌ನಲ್ಲಿ ಹೆಡ್ಲಿ ತಂಗಿರುವುದು ಖಚಿತವಾಗಿದೆ. ಕೇಂದ್ರ ಸರಕಾರ ಹೆಡ್ಲಿಯ ಬಗ್ಗೆ ಮಹಾರಾಷ್ಟ್ರ ಸರಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಮುಂಚಿತವಾಗಿ ಅಕ್ಟೋಬರ್ 12 ರಂದು ಮಾಹಿತಿ ನೀಡಲಾಗಿತ್ತು ಎಂದು ಹೇಳಿದ್ದಾರೆ.

ನವದೆಹಲಿಯಲ್ಲಿರುವ ಚಾಬಾದ್ ಹೌಸ್‌ ಬಳಿಯರುವ ಪಹಾಡ್‌ಗಂಜ್‌ನಲ್ಲಿರುವ ಹೋಟೆಲ್‌ನಲ್ಲಿ ವಾಸವಾಗಿದ್ದು, ಇಸ್ರೆಲ್ ರಾಯಭಾರಿ ಕಚೇರಿ‌, ಯಹೂದಿಗಳ ಮೇಲೆ ದಾಳಿ ನಡೆಸಲು ಉಗ್ರರಿಗೆ ಮಾಹಿತಿ ಒದಗಿಸುತ್ತಿದ್ದನು ಎಂದು ಪಿಳ್ಳೈ ತಿಳಿಸಿದ್ದಾರೆ.

ಪ್ರಮುಖ ನಗರವಾದ ಪುಷ್ಕರ್‌‌ಗೆ ಹೆಚ್ಚಿನ ಇಸ್ರೇಲ್ ಪ್ರವಾಸಿಗರು ಭೇಟಿ ನೀಡುವದರಿಂದ, ಹೆಡ್ಲಿ ಅಲ್ಲಿನ ಚಾಬಾದ್‌ ಹೌಸ್ ಬಳಿ ವಾಸವಾಗಿದ್ದು, ಪ್ರಾರ್ಥನಾ ಮಂದಿರದ ಬಗ್ಗೆ ವಿವರಗಳನ್ನು ಸಂಗ್ರಹಿಸುತ್ತಿದ್ದನು ಎಂದು ಗೃಹಕಾರ್ಯದರ್ಶಿ ಜಿ.ಕೆ ಪಿಳ್ಳೈ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜರ್ಮನ್ ಬೇಕರಿ, ಹೆಡ್ಲಿ, ಪಿಳ್ಳೈ