ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸುಖ್ನಾ ಭೂಹಗರಣ; ಹೈಕೋರ್ಟ್‌ನಲ್ಲಿ ರಥ್ ಅರ್ಜಿ ವಜಾ (Sukna land scam | Lt Gen PK Rath | Lt Gen Avadesh Prakash | Indian Army)
Bookmark and Share Feedback Print
 
ಪಶ್ಚಿಮ ಬಂಗಾಲದಲ್ಲಿನ ಡಾರ್ಜಲಿಂಗ್ ಜಿಲ್ಲೆಯಲ್ಲಿನ ಸುಖ್ನಾ ಭೂಹಗರಣಕ್ಕೆ ಸಂಬಂಧಪಟ್ಟಂತೆ ಮಿಲಿಟರಿ ಮಾಜಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅವದೇಶ್ ಪ್ರಕಾಶ್ ಜತೆಗೆ ಕೋರ್ಟ್ ಮಾರ್ಷಲ್ ಎದುರಿಸಲಿರುವ ಲೆಫ್ಟಿನೆಂಟ್ ಜನರಲ್ ಪಿ.ಕೆ. ರಥ್ ಅವರ ಮನವಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ತಳ್ಳಿ ಹಾಕಿದೆ.

ರಥ್ ಅವರ ಮನವಿಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಗೀತಾ ಮಿತ್ತಲ್ ಮತ್ತು ವಿಪಿನ್ ಸಂಘಿಯವರನ್ನೊಳಗೊಂಡ ವಿಭಾಗೀಯ ಪೀಠವು, ಈ ವಿಚಾರವು ತನ್ನ ನ್ಯಾಯವ್ಯಾಪ್ತಿಯಲ್ಲಿ ಬರುವುದಿಲ್ಲವಾದ್ದರಿಂದ ವಿಚಾರಣೆ ನಡೆಸಲು ಸಾಧ್ಯವಿಲ್ಲ; ನೀವು ಸಂಬಂಧಪಟ್ಟ ವೇದಿಕೆಯಲ್ಲಿ ಇದನ್ನು ಪ್ರಶ್ನಿಸಿ ಎಂದು ನಿರ್ದೇಶನ ನೀಡಿದೆ.

ರಥ್ ಅವರು ಶಸ್ತ್ರಾಸ್ತ್ರ ಪಡೆಗಳ ವಿಶೇಷ ನ್ಯಾಯಾಲಯದಲ್ಲಿ ತನ್ನ ಮನವಿಯನ್ನು ಸಲ್ಲಿಸಬಹುದಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಶಸ್ತ್ರಾಸ್ತ್ರ ಪಡೆಗಳ ನ್ಯಾಯಾಲಯದಲ್ಲಿ ಈ ಸಂಬಂಧ ಅಗತ್ಯ ತಿದ್ದುಪಡಿಗಳನ್ನು ಮಾಡಿದ ನಂತರ ಅರ್ಜಿ ಸಲ್ಲಿಸಲಾಗುತ್ತದೆ ಎಂದು ರಥ್ ಅವರ ವಕೀಲ ಎ.ಕೆ. ಸಿಂಗ್ ತಿಳಿಸಿದ್ದಾರೆ.

ಭೂವಿವಾದದ ಹಿನ್ನೆಲೆಯಲ್ಲಿ ಸೇನಾ ಸಿಬ್ಬಂದಿಗಳ ಉಪ ಮುಖ್ಯಸ್ಥ ಹುದ್ದೆಯ ನೇಮಕಾತಿಯಿಂದ ವಜಾಗೊಳಿಸಿದ ಸರಕಾರದ ನಿರ್ಧಾರವನ್ನು ರಥ್ ಅವರು ಗುರುವಾರ ದೆಹಲಿಯ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಪಶ್ಚಿಮ ಬಂಗಾಲದ ಡಾರ್ಜಲಿಂಗ್‌ನ ಸುಖ್ನಾ ಮಿಲಿಟರಿ ನೆಲೆ ಪಕ್ಕದ 71 ಎಕರೆ ಭೂಮಿಯನ್ನು ಅವದೇಶ್ ಸಂಬಂಧಿಯೋರ್ವರಿಗೆ ಮಾರಾಟ ಮಾಡಲು ಕಾನೂನನ್ನು ಉಲ್ಲಂಘಿಸಿ ನಿರಕ್ಷೇಪಣಾ ಪತ್ರ ನೀಡಿದ್ದಾರೆ ಎಂದು ಅವದೇಶ್, ರಥ್ ಮತ್ತು ಇತರ ಇಬ್ಬರು ಸೇನಾಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ತನಿಖೆ ನಡೆಸಿದ್ದ ಪೂರ್ವ ವಲಯ ಭೂಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ವಿ.ಕೆ. ಸಿಂಗ್ ಶಿಫಾರಸು ಮಾಡಿದ್ದರು.

ಶಿಫಾರಸಿನ ನಂತರ ಸೇನಾ ಮುಖ್ಯಸ್ಥ ದೀಪಕ್ ಕಪೂರ್ ಅವರು ತನ್ನ ಆಪ್ತ ಎನ್ನಲಾದ ಅವದೇಶ್ ವಿರುದ್ಧ ಆಡಳಿತಾತ್ಮಕ ಕ್ರಮಕ್ಕೆ ಮಾತ್ರ ಆದೇಶ ನೀಡಿದ್ದರು. ಈ ಬಗ್ಗೆ ನೀಡಿದ್ದ ಶೋಕಾಸ್ ನೊಟೀಸಿಗೆ ಅವದೇಶ್ ಸ್ಪಷ್ಟನೆ ನೀಡಿದ್ದರು.

ಆದರೆ ಅವದೇಶ್ ವಿರುದ್ಧ ಕೇವಲ ಆಡಳಿತಾತ್ಮಕ ಕ್ರಮ ಕೈಗೊಂಡ ನಿರ್ಧಾರ ರಕ್ಷಣಾ ಸಚಿವರಿಗೆ ಸರಿ ಕಂಡು ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಕೋರ್ಟ್ ಮಾರ್ಷಲ್‌ಗೆ ಒಳಪಡಿಸುವಂತೆ ಕಪೂರ್ ಅವರಿಗೆ 'ಸಲಹೆ' ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ