ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಸ್ಲೀಮಾ ಲೇಖನ ಪ್ರಕಟಿಸಿದ್ದು ದುರುದ್ದೇಶಪೂರಿತ: ಚಿದಂಬರಂ (Karnataka | Taslima Nasreen | P Chidambaram | B S Yeddyurappa)
Bookmark and Share Feedback Print
 
ಬಾಂಗ್ಲಾದೇಶ ಮೂಲದ ಲೇಖಕಿ ತಸ್ಲೀಮಾ ನಸ್ರೀನ್ ಅವರ ಲೇಖನವನ್ನು ಕನ್ನಡ ಪತ್ರಿಕೆಯಲ್ಲಿ ಪ್ರಕಟಿಸಿದ್ದರ ಹಿಂದೆ ದುರುದ್ದೇಶ ಅಡಗಿದೆ, ಇದು ದುರದೃಷ್ಟಕರ. ಆದರೆ ಕರ್ನಾಟಕದಲ್ಲಿನ ಕಾನೂನು ಸುವ್ಯವಸ್ಥೆ ಈಗ ನಿಯಂತ್ರಣದಲ್ಲಿದೆ ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ (2007ರಲ್ಲಿ) ತಸ್ಲೀಮಾ ಅವರು ಬರೆದಿದ್ದ ಇಂಗ್ಲೀಷ್ ಲೇಖನವನ್ನು ಮುಸ್ಲಿಮರ ಪವಿತ್ರ ಹಬ್ಬ 'ಮಿಲಾದ್ ಉನ್ ನಬೀ' ಸಂಭ್ರಮದ ದಿನ ಕನ್ನಡದಲ್ಲಿ ಅನುವಾದ ಮಾಡಿ ಪ್ರಕಟಿಸಲಾಗಿತ್ತು. ಇದು ದುರದೃಷ್ಟಕರ ಮಾತ್ರವಲ್ಲ, ದುರುದ್ದೇಶಪೂರಿತವೂ ಹೌದು ಎಂದು ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ಮಟ್ಟದ ಪತ್ರಿಕೆಯೊಂದು ತಸ್ಲೀಮಾ ಅವರ ಲೇಖನದ ಅನುವಾದವನ್ನು ಭಾನುವಾರದ (28-02-2010) ಸಾಪ್ತಾಹಿಕದಲ್ಲಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಮುಸ್ಲಿಮರು ತೀವ್ರ ಪ್ರತಿಭಟನೆಯನ್ನು ನಡೆಸಿ ಹಿಂಸಾಚಾರದಲ್ಲಿ ನಿರತರಾದ ಬಳಿಕ ಇಬ್ಬರು ಗೋಲಿಬಾರ್‌ಗೆ ಬಲಿಯಾಗಿದ್ದರು.

ಪ್ರಸಕ್ತ ಕರ್ನಾಟಕದ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಕೇಂದ್ರೀಯ ಪಡೆಗಳು ಕೂಡ ಅಲ್ಲಿ ರಕ್ಷಣೆ ನೀಡುತ್ತಿವೆ. ಕರ್ನಾಟಕ ಸರಕಾರದ ಜತೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಗೃಹಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಗಲಭೆ ಹಿನ್ನಲೆಯಲ್ಲಿ ಎರಡು ಪತ್ರಿಕೆಗಳ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಾಹಿತಿ ನೀಡಿದ್ದಾರೆ. ಕರ್ನಾಟಕ ಸರಕಾರಕ್ಕೆ ತನ್ನ ಜವಾಬ್ದಾರಿಯ ಬಗ್ಗೆ ಅರಿವಿದೆ ಎಂಬ ನಂಬಿಕೆ ನನಗಿದ್ದು, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದರು.

ಈ ಬಗ್ಗೆ ಈಗಾಗಲೇ ತಸ್ಲೀಮಾ ಅವರು ಸ್ಪಷ್ಟನೆ ನೀಡಿದ್ದು, 'ನಾನು ಕರ್ನಾಟಕದ ಯಾವುದೇ ಪತ್ರಿಕೆಗೆ ಯಾವುದೇ ಲೇಖನವನ್ನು ಬರೆದಿಲ್ಲ. ಅಲ್ಲದೆ ಪ್ರವಾದಿಯವರು ಬುರ್ಖಾ ವಿರೋಧಿಸಿದ್ದರು ಎಂದೂ ಬರೆದಿಲ್ಲ. ನನ್ನ ಲೇಖನವನ್ನು ತಿರುಚಲಾಗಿದೆ' ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ