ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಕ್ಕರೆ ಆಮದಿನಲ್ಲಿ ಭಾರೀ ಭ್ರಷ್ಟಾಚಾರ: ಪ್ರತಿಪಕ್ಷಗಳಿಂದ ಗದ್ದಲ (sugar imports | Rajya Sabha | food and agriculture minister | Sharad Pawar)
Bookmark and Share Feedback Print
 
ಸಕ್ಕರೆ ಆಮದಿನ ಹಿಂದೆ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಸರಕಾರದ ವಿರುದ್ಧ ಪಕ್ಷಬೇಧ ಮರೆತು ವಿರೋಧಪಕ್ಷಗಳು ರಾಜ್ಯಸಭೆಯಲ್ಲಿ ಆರೋಪಿಸಿದ್ದನ್ನು ನಿರಾಕರಿಸಿರುವ ಆಹಾರ ಮತ್ತು ಕೃಷಿ ಸಚಿವ ಶರದ್ ಪವಾರ್, ಸರಕಾರ ಸಕ್ಕರೆಯನ್ನು ಆಮದು ಮಾಡಿಕೊಂಡೇ ಇಲ್ಲ ಎಂದಿದ್ದಾರೆ.

ಸಕ್ಕರೆ ಆಮದಿನಲ್ಲಿ ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಮತ್ತು ಎಡಪಕ್ಷಗಳೂ ಸೇರಿದಂತೆ ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಬೆಲೆಯೇರಿಕೆ ಕುರಿತು ಚರ್ಚೆ ನಡೆದ ಸಂದರ್ಭದಲ್ಲಿ ಪವಾರ್ ಮೇಲೆ ನೇರವಾಗಿ ಆರೋಪ ನಡೆಸಿದ್ದವು.

ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಅಗತ್ಯ ವಸ್ತುಗಳ ದರಯೇರಿಕೆಗ ಸಂಬಂಧಪಟ್ಟಂತೆ ಪ್ರತಿಪಕ್ಷಗಳು ಮೇಲ್ಮನೆಯಲ್ಲಿ ಗದ್ದಲ ಎಬ್ಬಿಸಿ ಮೂರು ಬಾರಿ ಸದನವನ್ನು ಮುಂದೂಡಿದ ಸಂದರ್ಭದಲ್ಲಿ ಇದಕ್ಕೆ ಉತ್ತರ ನೀಡಿದ ಪವಾರ್, ಸರಕಾರವು ಒಂದೇ ಒಂದು ಕೇಜಿ ಸಕ್ಕರೆಯನ್ನೂ ಆಮದು ಮಾಡಿಕೊಂಡಿಲ್ಲ ಎಂದರು.

ಸಕ್ಕರೆಯನ್ನು ಆಮದು ಮಾಡಿಕೊಳ್ಳದೇ, ಖಾಸಗಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುವ ಮೂಲಕ ರಾಜ್ಯದ ಏಜೆನ್ಸಿಗಳು ಶಂಕಾಸ್ಪದ ವರ್ತನೆಯನ್ನು ತೋರಿಸಿವೆ ಎಂದು ಸಿಪಿಎಂ ಸದಸ್ಯೆ ಬೃಂದಾ ಕಾರಟ್ ಆರೋಪಿಸಿದರು.

ಕಳೆದ ಒಂದು ವರ್ಷದ ಅವಧಿಯಲ್ಲಿ ಸಕ್ಕರೆ ಚಿಲ್ಲರೆ ಬೆಲೆ ದ್ವಿಗುಣಗೊಂಡಿದ್ದು, ಪ್ರತೀ ಕೇಜಿ ಸಕ್ಕರೆಯೀಗ 43 ರೂಪಾಯಿಯಲ್ಲಿ ಮಾರಲ್ಪಡುತ್ತಿದೆ.

ರಾಜ್ಯಸಭೆಯು ಅಪರಾಹ್ನ ಎರಡು ಗಂಟೆಗೆ ಒಟ್ಟು ಸೇರಿದಾಗ ಆರೋಪಗಳಿಗೆ ಉತ್ತರಿಸಲು ಆರಂಭಿಸಿದ ಪವಾರ್ ಅವರ ವಿರುದ್ಧ ಪ್ರತಿಪಕ್ಷಗಳು ಘೋಷಣೆಗಳನ್ನು ಕೂಗುವ ಮೂಲಕ ತೀವ್ರ ವಿರೋಧ ವ್ಯಕ್ತಪಡಿಸಿದವು. ಮಾತನಾಡದಂತೆ ಅಡ್ಡಿಪಡಿಸಿದವು.

ಬೇಳೆಕಾಳುಗಳು, ಆಲೂಗಡ್ಡೆ ಮತ್ತು ಈರುಳ್ಳಿ ಸೇರಿದಂತೆ ಕೆಲವು ಅಗತ್ಯ ವಸ್ತುಗಳ ಬೆಲೆಯಲ್ಲಿ ಈಗಾಗಲೇ ಸಾಕಷ್ಟು ಇಳಿಕೆಯಾಗಿದೆ ಎಂದಿರುವ ಪವಾರ್, ಗೋಧಿ ಮತ್ತು ಅಕ್ಕಿಗೆ ಸರಕಾರವು ನೀಡಲಾಗುವ ಕನಿಷ್ಠ ಬೆಂಬಲ ಬೆಲೆಯನ್ನು ಕಳೆದ ಐದು ವರ್ಷಗಳಲ್ಲಿ ಶೇ.70ರಷ್ಟು ಹೆಚ್ಚಿಸಲಾಗಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ