ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬ್ರೈನ್ ಹ್ಯಾಮರೇಜ್; ಮಹಾಜನ್ ಹಂತಕ ಪ್ರವೀಣ್ ನಿಧನ (Pravin Mahajan | Pramod Mahajan | India | Brain haemorrhage)
Bookmark and Share Feedback Print
 
ಸಹೋದರ ಹಾಗೂ ಬಿಜೆಪಿ ಮುಖಂಡ ಪ್ರಮೋದ್ ಮಹಾಜನ್ ಹತ್ಯೆಗೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಪ್ರವೀಣ್ ಮಹಾಜನ್ ಮಿದುಳಿನ ಆಘಾತದ ಪರಿಣಾಮ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಸಾವನ್ನಪ್ಪಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ಬ್ರೈನ್ ಹ್ಯಾಮರೇಜ್‌ಗೊಳಗಾಗಿದ್ದ ಅವರು ಗಂಭೀರ ಸ್ಥಿತಿಯಲ್ಲಿ ಥಾಣೆಯಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಅವರು ಬುಧವಾರ ಸಂಜೆ ಹೊತ್ತಿಗೆ ಇಹಲೋಕ ತ್ಯಜಿಸಿದ್ದಾರೆ. ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅವರು ಅಗಲಿದ್ದಾರೆ ಎಂದು ಮೂಲಗಳು ಹೇಳಿವೆ.

ನವೆಂಬರ್ ಮಾಸಾಂತ್ಯದಿಂದ 14 ದಿನಗಳ ಪೆರೋಲ್‌ನಲ್ಲಿ ಪತ್ನಿ ಸಾರಂಗಿಯನ್ನು ಭೇಟಿಯಾಗಲು ಜೈಲಿನಿಂದ ಹೊರ ಬಂದಿದ್ದ ಪ್ರವೀಣ್, ಮಿದುಳಿನ ರಕ್ತಸ್ರಾವದಿಂದಾಗಿ ಡಿಸೆಂಬರ್ 11ರಂದು ಕೋಮಾ ಸ್ಥಿತಿಗೆ ತಲುಪಿದ್ದರು. ಅವರನ್ನು ಥಾಣೆಯ ಜ್ಯೂಪಿಟರ್ ಆಸ್ಪತ್ರೆಯ ತುರ್ತು ನಿಗಾ ವಿಭಾಗದಲ್ಲಿರಿಸಲಾಗಿತ್ತು.

ಈ ಸಂದರ್ಭದಲ್ಲಿ ಅತಿ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಂಡ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಸಕ್ತ ಅವರ ಆರೋಗ್ಯ ಗಂಭೀರವಾಗಿದೆ. ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ಸಹೋದರ ಪ್ರಕಾಶ್ ಮಹಾಜನ್ ಆಗ ವಿವರಣೆ ನೀಡಿದ್ದರು.

2006ರ ಏಪ್ರಿಲ್ 22ರಂದು ಪ್ರಮೋದ್ ಮಹಾಜನ್ ಅವರನ್ನು ಅವರ ವೋರ್ಲಿಯಲ್ಲಿನ ಮನೆಯಲ್ಲಿ ಹತ್ಯೆ ಮಾಡಿದುದಕ್ಕಾಗಿ ಮುಂಬೈಯ ನ್ಯಾಯಾಲಯವೊಂದು ಪ್ರವೀಣ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ನಾಸಿಕ್ ಸೆಂಟ್ರಲ್ ಜೈಲಿನಲ್ಲಿ ಅವರನ್ನು ಇರಿಸಲಾಗಿತ್ತು.

55ರ ಹರೆಯದ ಪ್ರವೀಣ್ ಡಯಾಬಿಟೀಸ್ ಮತ್ತು ಹೈಪರ್‌ಟೆನ್ಶನ್‌ಗಳಿಂದಲೂ ಅವರು ಬಳಲುತ್ತಿದ್ದರು ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ