ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅನೈತಿಕ ಸಂಬಂಧ; ಜೋಡಿಯನ್ನು ಬೆಂಕಿಯಲ್ಲಿ ಸುಟ್ಟೇ ಹಾಕಿದರು! (extra marital affair | burnt to death | Shyam Pratap Singh | Phool Mala, Police)
Bookmark and Share Feedback Print
 
ತನ್ನ ಪತ್ನಿಗೆ ಪರಪುರುಷನೊಂದಿಗೆ ಅಕ್ರಮ ಸಂಬಂಧವಿರುವುದನ್ನು ಮನಗಂಡಿದ್ದ ಪತಿಯೊಬ್ಬ ಹೆಂಡತಿಯ ಪ್ರಿಯಕರನನ್ನು ಮನೆಗೆ ಕರೆಸಿ ಇಬ್ಬರನ್ನೂ ಬೆಂಕಿ ಹಚ್ಚಿ ಕೊಂದು ಹಾಕಿದ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ.

ನಾಲ್ಕು ಮಕ್ಕಳ ತಂದೆ 45ರ ಹರೆಯದ ಶ್ಯಾಮ್ ಪ್ರತಾಪ್ ಸಿಂಗ್ ಮತ್ತು ಫೂಲ್ ಮಾಲಾ ಎಂಬ 32ರ ಹರೆಯದ ಎರಡು ಮಕ್ಕಳ ತಾಯಿಯೇ ಹತ್ಯೆಯಾದವರು. ಸೋಮವಾರ ಇವರಿಬ್ಬರನ್ನು ಖಾಂಡೌಲಿ ಪ್ರದೇಶದಲ್ಲಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಬರ್ಬರವಾಗಿ ಕೊಂದು ಹಾಕಲಾಗಿದೆ.

ತನ್ನ ಪತ್ನಿ ಮಾಲಾಳಿಗೆ ಪರಪುರುಷನ ಜತೆ ಅನೈತಿಕ ಸಂಬಂಧ ಹೊಂದಿರುವುದನ್ನು ದೃಢಪಡಿಸಿಕೊಂಡಿದ್ದ ಗಂಡ ದಿಲೀಪ್, ಆಕೆಯ ಪ್ರಿಯಕರ ಶ್ಯಾಮ್‌ನನ್ನು ಹೋಳಿಯ ದಿನ ಮನೆಗೇ ಕರೆಸಿದ್ದ. ಆತ ಮನೆಗೆ ಬರುತ್ತಿದ್ದಂತೆ ಕುಟುಂಬದ ಇತರ ನಾಲ್ವರ ಜತೆ ಸೇರಿಕೊಂಡು ಶ್ಯಾಮ್ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ ದಿಲೀಪ್.

ಈ ಸಂದರ್ಭದಲ್ಲಿ ದಿಲೀಪ್ ಪತ್ನಿ ಹಾಗೂ ಶ್ಯಾಮ್ ಪ್ರಿಯತಮೆ ಮಾಲಾ ಮಧ್ಯಪ್ರವೇಶಿಸಿದ್ದಳು. ಆಗ ಅವಳಿಗೂ ಅಗ್ನಿಸ್ಪರ್ಶ ನಡೆಸಲಾಗಿದೆ ಎಂದು ಗ್ರಾಮಸ್ಥರು ವಿವರಣೆ ನೀಡಿದ್ದಾರೆ.

ಜೋಡಿಯನ್ನು ಶೇ.90ರಷ್ಟು ಸುಟ್ಟ ಗಾಯಗಳೊಂದಿಗೆ ಆಗ್ರಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಳಿಕ ಅವರಿಬ್ಬರೂ ಸತ್ತಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಇವರಿಬ್ಬರೂ ಸಾವನ್ನಪ್ಪುವ ಮೊದಲು ನೀಡಿರುವ ಹೇಳಿಕೆಯ ಪ್ರಕಾರ, ಮಾಲಾಳ ಗಂಡ ಶ್ಯಾಮ್‌ನನ್ನು ಕೊಂದು ಹಾಕಿದ್ದ. ಬಳಿಕ ಮಾಲಾ ಸ್ವತಃ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಇವರಿಬ್ಬರೂ ಪರಸ್ಪರ ಸಂಬಂಧ ಹೊಂದಿದ್ದದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ