ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸರ್ಕಾರಿ ಯೋಜನೆ ಹೆಸರುಗಳು ಗಾಂಧಿ ಕುಟುಂಬಕ್ಕೆ ಗುತ್ತಿಗೆಯೇ? (government schemes | L.K. Advani | Nehru-Gandhi family | Indira Gandhi)
Bookmark and Share Feedback Print
 
ಸರಕಾರಿ ಯೋಜನೆಗಳು ಮತ್ತು ಸಂಸ್ಥೆಗಳಿಗೆ ಆಗಿ ಹೋದ ನೆಹರೂ-ಗಾಂಧಿ ಕುಟುಂಬದ ಸದಸ್ಯರ ಹೆಸರುಗಳನ್ನು ಇಡುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿ, ಸರಕಾರಿ ಯೋಜನೆಗಳು ರಾಜಕೀಯ ಮುಕ್ತವಾಗಿರಬೇಕು ಎಂದು ಆಗ್ರಹಿಸಿದ್ದಾರೆ.

ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮಾಡಿದ ಭಾಷಣಕ್ಕೆ ಲೋಕಸಭೆಯಲ್ಲಿ ವಂದನಾ ನಿರ್ಣಯ ಸಲ್ಲಿಸುವ ಚರ್ಚೆ ಸಂದರ್ಭದಲ್ಲಿ ಅವರು, ಸರಕಾರಿ ಯೋಜನೆಗಳು ಮತ್ತು ಸಂಸ್ಥೆಗಳನ್ನು ಪಕ್ಷ ರಾಜಕೀಯದಿಂದ ದೂರ ಉಳಿಸಬೇಕು ಎಂದರು.

ಕಾಂಗ್ರೆಸ್‌ನ ಮಾದರಿ ವ್ಯಕ್ತಿಗಳು ಹಾಗೂ ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಹೆಸರುಗಳನ್ನು ಉಲ್ಲೇಖಿಸಿದ ಅಡ್ವಾಣಿ, 'ಈ ಮೂವರು ಇಹಲೋಕ ತ್ಯಜಿಸಿದ ಬಳಿಕ ಅವರ ಹೆಸರುಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಾವಿರಾರು ಕೋಟಿ ರೂಪಾಯಿ ಮೌಲ್ಯದ 450ಕ್ಕೂ ಹೆಚ್ಚು ಸಾರ್ವಜನಿಕ ಹಣದ ಯೋಜನೆಗಳಿಗೆ ಹೆಸರಿಸಲಾಗಿದೆ' ಎಂದು ಸಂಸತ್ತಿನ ಗಮನಕ್ಕೆ ತಂದರು.

ಗಾಂಧಿ-ನೆಹರೂ ಕುಟುಂಬಗಳ ಹೆಸರಿನ ಈ ಯೋಜನೆಗಳ ಮೂಲಕ ಕಾಂಗ್ರೆಸ್ ಪಕ್ಷವು ಚುನಾವಣೆಗಳಲ್ಲಿ ಅನುಚಿತ ಲಾಭಗಳನ್ನು ಪಡೆಯುತ್ತಿದೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ಪತ್ರಕರ್ತರೊಬ್ಬರು ಬರೆದಿದ್ದ ಪತ್ರವನ್ನು ಈ ಸಂದರ್ಭದಲ್ಲಿ ಅಡ್ವಾಣಿಯವರು ಪ್ರಸ್ತಾಪಿಸಿದರು.

28,000 ಕೋಟಿ ಮೊತ್ತದ ರಾಜೀವ್ ಗಾಂಧಿ ಗ್ರಾಮೀಣ್ ವಿದ್ಯುತೀಕರಣ ಯೋಜನೆ, 7,400 ಕೋಟಿ ರೂಪಾಯಿ ಮೊತ್ತದ ರಾಜೀವ್ ಗಾಂಧಿ ಕುಡಿಯುವ ನೀರು ಯೋಜನೆ, ಕರ್ತವ್ಯನಿರತ ತಾಯಂದಿರ ಮಕ್ಕಳ ರಾಜೀವ್ ಗಾಂಧಿ ರಾಷ್ಟ್ರೀಯ ಬಾಲವಾಡಿ ಯೋಜನೆ, ರಾಜೀವ್ ಗಾಂಧಿ ಉದ್ಯಮಿ ಮಿತ್ರ ಯೋಜನೆ, ರಾಜೀವ್ ಗಾಂಧಿ ಶ್ರಮಿಕ್ ಕಲ್ಯಾಣ ಯೋಜನೆ ಮತ್ತು ರಾಜೀವ್ ಗಾಂಧಿ ಶಿಲ್ಪಿ ಸ್ವಾಸ್ತ್ಯ ಭೀಮಾ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೆ ರಾಜೀವ್ ಗಾಂಧಿಯವರ ಹೆಸರುಗಳನ್ನಿಡಲಾಗಿದೆ.

ಇಂದಿರಾ ಆವಾಸ್ ಯೋಜನೆ, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧರ ಪಿಂಚಣಿ ಯೋಜನೆ, ಜವಾಹರಲಾಲ್ ನೆಹರೂ ರೋಜಗಾರ್ ಯೋಜನೆ ಮತ್ತು ಜವಾಹರಲಾಲ್ ನೆಹರೂ ನಗರ ಪುನರ್ನವೀಕರಣ ಯೋಜನೆ ಸೇರಿದಂತೆ ಇಂದಿರಾ ಗಾಂಧಿ ಮತ್ತು ನೆಹರೂ ಅವರ ಹೆಸರುಗಳನ್ನು ಕೂಡ ಹತ್ತಾರು ಸರಕಾರಿ ಯೋಜನೆಗಳಿಗೆ ಇಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ