ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾಲೆಂಗಾವ್ ಸ್ಫೋಟ; ಸಾಧ್ವಿ ಜಾಮೀನು ಅರ್ಜಿ ತಿರಸ್ಕೃತ (sadhvi Pragya Singh Thakur | Bombay High Court | 2008 Malegaon blast | ATS)
Bookmark and Share Feedback Print
 
PTI
2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರುವ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರ ಜಾಮೀನು ಅರ್ಜಿಯನ್ನು ಶುಕ್ರವಾರ ಬಾಂಬೆ ಹೈಕೋರ್ಟ್ ತಳ್ಳಿ ಹಾಕಿದೆ.

2008ರ ಅಕ್ಟೋಬರ್ 23ರಲ್ಲಿ ಅಧಿಕೃತವಾಗಿ ಬಂಧಿಸುವ ಮೊದಲೇ ಸಾಧ್ವಿಯನ್ನು ಪೊಲೀಸರು ವಶದಲ್ಲಿಟ್ಟುಕೊಂಡಿದ್ದರು ಎಂಬ ಸಾಧ್ವಿ ವಕೀಲರ ವಾದವನ್ನು ತಳ್ಳಿ ಹಾಕಿರುವ ನ್ಯಾಯಮೂರ್ತಿ ಎಸ್.ಸಿ. ಧರ್ಮಾಧಿಕಾರಿ, ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಅಕ್ಟೋಬರ್ 10ರಿಂದ ಮಹಾರಾಷ್ಟ್ರ ಉಗ್ರ ನಿಗ್ರಹ ದಳವು ಸಾಧ್ವಿಯನ್ನು ವಶದಲ್ಲಿಟ್ಟುಕೊಂಡಿತ್ತು ಎಂದು ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ವಾದಿಸಿದ್ದರು.

ಆದರೆ ಅಕ್ಟೋಬರ್ 10ರಿಂದ 23ರ ನಡುವೆ ಪೊಲೀಸರ ಕಣ್ಗಾವಲಿಲ್ಲದೆ ಸಾಧ್ವಿಯವರು ಮುಕ್ತವಾಗಿ ಸಂಚರಿಸಿದ್ದರು ಎಂಬುದನ್ನು ನ್ಯಾಯಾಲಯ ಇದೇ ಸಂದರ್ಭದಲ್ಲಿ ಹೇಳಿದೆ.

ತನಗೆ ಪೊಲೀಸ್ ಕಸ್ಟಡಿಯಲ್ಲಿ ಹಿಂಸೆ-ಕಿರುಕುಳ ನೀಡಲಾಗುತ್ತಿದೆ ಎಂದು ಮಾನವ ಹಕ್ಕುಗಳ ಆಯೋಗದ ಮುಂದೆ ದೂರು ನೀಡಿರುವುದಕ್ಕೂ, ನ್ಯಾಯಾಲಯದಲ್ಲಿ ಹೇಳಿರುವುದಕ್ಕೂ ವ್ಯತ್ಯಾಸಗಳಿವೆ ಎಂಬುದನ್ನೂ ನ್ಯಾಯಾಲಯ ಎತ್ತಿ ತೋರಿಸಿತು.

ಸಾಧ್ವಿಯವರಿಗೆ ಸೇರಿದೆ ಎಂದು ಹೇಳಲಾಗಿರುವ ಬೈಕಿನಲ್ಲಿ ಬಾಂಬ್ ಇಡಲಾಗಿತ್ತು ಎಂಬುದನ್ನು ತಿಳಿದುಕೊಂಡಿದ್ದ ಉಗ್ರ ನಿಗ್ರಹ ದಳವು ಬಳಿಕ ಸ್ಫೋಟದಲ್ಲಿ ಆಕೆಯ ಪಾತ್ರವನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಿತ್ತು.

2008ರ ಸೆಪ್ಟೆಂಬರ್ 29ರಂದು ಮಾಲೆಗಾಂವ್‌ನಲ್ಲಿ ನಡೆದಿದ್ದ ಈ ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದರು. ಇದನ್ನು ಹಿಂದೂ ಬಲಪಂಥೀಯ ಸಂಘಟನೆ 'ಅಭಿನವ್ ಭಾರತ್' ನಡೆಸಿದೆ ಎಂದು ಆರೋಪಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ