ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್‌ಗೆ ಯಾವುದೇ ಶಸ್ತ್ರಾಸ್ತ್ರ ನೀಡಲ್ಲ,ಭಾರತಕ್ಕೆ ರಷ್ಯಾ ಅಭಯ (Pakistan | Vladimir Putin | India | Russia | nuclear,)
Bookmark and Share Feedback Print
 
ಜಗಳಗಂಟ ಪಾಕಿಸ್ತಾನಕ್ಕೆ ಚೀನಾ ಬೆಂಬಲಕ್ಕೆ ನಿಂತಿರುವ ಬೆನ್ನಲ್ಲೇ, ಇದೀಗ ಭಾರತಕ್ಕೆ ರಷ್ಯಾ ಪೂರ್ಣ ಪ್ರಮಾಣದ ಬೆಂಬಲ ನೀಡುವುದರೊಂದಿಗೆ ಬಹುನಿರೀಕ್ಷೆಯ ಭಾರತದ ಅಣು ಒಪ್ಪಂದಕ್ಕೆ ರಷ್ಯಾ ಪ್ರಧಾನಿ ವ್ಲಾಡಿಮಿರ್ ಪುಟಿನ್ ಶುಕ್ರವಾರ ಸಹಿ ಹಾಕಿದ್ದಾರೆ.

ಒಪ್ಪಂದದಂತೆ ರಷ್ಯಾ ಭಾರತದಲ್ಲಿ 12ಅಣು ರಿಯಾಕ್ಟರ್‌ಗಳನ್ನು ನಿರ್ಮಿಸಿಕೊಡಲಿದೆ. ಈಗಾಗಲೇ ರಷ್ಯಾ ಒಡೆತನದ ಅಣು ಕಂಪನಿ ರೋಸಟಾಮ್ ಭಾರತದಲ್ಲಿ 2ರಿಯಾಕ್ಟರ್‌ಗಳನ್ನು ನಿರ್ಮಿಸುತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನೆಲದಲ್ಲಿ ಠಿಕಾಣಿ ಹೂಡಿರುವ ಉಗ್ರಗಾಮಿ ಸಂಘಟನೆಗಳಿಂದ ಜಾಗತಿಕವಾಗಿಯೇ ಬೆದರಿಕೆ ಎದುರಿಸುವಂತಾಗಿದೆ ಎಂದರು. ಅಲ್ಲದೇ ರಷ್ಯಾ ಪಾಕಿಸ್ತಾನದ ಜೊತೆಗೆ ಯಾವುದೇ ಶಸ್ತ್ರಾಸ್ತ್ರ ನೀಡುವ ಬಗ್ಗೆ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಭಾರತಕ್ಕೆ ಭರವಸೆ ನೀಡಿದ್ದರಲ್ಲದೇ, ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ಪುಟಿನ್ ಪ್ರಧಾನಿ ಡಾ.ಮನಮೋಹನ್ ಸಿಂಗ್ ಜೊತೆ ಮಾತನಾಡುತ್ತ ಹೇಳಿದರು.

ಎರಡು ದಿನಗಳ ಕಾಲ ಭಾರತದ ಪ್ರವಾಸದಲ್ಲಿರುವ ರಷ್ಯಾ ಪ್ರಧಾನಿ ವ್ಲಾದ್‌ಮಿರ್ ಪುಟಿನ್ ಅಣು ಒಪ್ಪಂದ ಮಾತ್ರವಲ್ಲದೆ, ಇತರೆ 19ಒಪ್ಪಂದಗಳಿಗೂ ಕೂಡ ಸಹಿ ಹಾಕಿದ್ದಾರೆ. ಇದರೊಂದಿಗೆ ಭಾರತ ಮಿಗ್ 29 ವಿಮಾನ, ವಿಮಾನಗಳನ್ನು ಹೊತ್ತೊಯ್ಯುವ ಗೋರ್ಶ್ಕೋವ್ ಯುದ್ಧ ಹಡಗು ಖರೀದಿ ಮಾಡಲಿದೆ.
ಸಂಬಂಧಿತ ಮಾಹಿತಿ ಹುಡುಕಿ