ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಮುಂಬೈ ದಾಳಿ ಸಂದರ್ಭದ ಕಸಬ್ ಚಿತ್ರಗಳು ಸುಳ್ಳು ಹೇಳಲ್ಲ' (Mumbai attack | Pakistan | Mohammed Ajmal Amir Kasab | Ujjwal Nikam)
Bookmark and Share Feedback Print
 
PTI
ಮುಂಬೈ ದಾಳಿ ಸಂದರ್ಭದಲ್ಲಿ ತೆಗೆದಿದೆ ಎನ್ನಲಾದ ಚಿತ್ರಗಳು ನೈಜವಾದುದಲ್ಲ ಎಂಬ ಪಾಕಿಸ್ತಾನಿ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ವಾದವನ್ನು ತಳ್ಳಿ ಹಾಕಿರುವ ಪ್ರಾಸಿಕ್ಯೂಷನ್, ಪತ್ರಿಕಾ ಛಾಯಾಗ್ರಾಹಕರು ನೀಡಿರುವ ಚಿತ್ರಗಳು ಈ ಪ್ರಕರಣಕ್ಕೆ ಅತ್ಯುತ್ತಮ ಸಾಕ್ಷ್ಯಗಳು ಎಂದು ಹೇಳಿದ್ದಾರೆ.

ಮುಂಬೈ ಸಿಎಸ್‌ಟಿ ರೈಲ್ವೇ ನಿಲ್ದಾಣದಲ್ಲಿ ಜನರತ್ತ ಗುಂಡು ಹಾರಿಸುತ್ತಿರುವ ಭಾವಚಿತ್ರಗಳು ನೈಜವಾದುದಲ್ಲ, ಅವುಗಳನ್ನು ತಂತ್ರಜ್ಞಾನ ಬಳಸಿ ಸಿದ್ಧಪಡಿಸಲಾಗಿದೆ ಎಂದು ಕಸಬ್ ನ್ಯಾಯಾಲಯದಲ್ಲಿ ಹೇಳಿದ್ದ.

'ಮುಂಬೈ ಮಿರರ್' ಟ್ಯಾಬ್ಲಾಯ್ಡ್ ಪತ್ರಿಕೆ ಮುಖ್ಯ ಛಾಯಾಗ್ರಾಹಕ ಸೆಬಾಸ್ಟಿಯನ್ ಡಿಸೋಜಾ ಅವರು ತೆಗೆದಿರುವ ಸಿಎಸ್‌ಟಿ ರೈಲ್ವೇ ನಿಲ್ದಾಣದ ಚಿತ್ರ ಪ್ರಮುಖ ದಾಖಲೆಯಾಗಿದ್ದು, ಅವರ ಕಾರ್ಯ ಪ್ರಶಂಸಾರ್ಹವಾಗಿದೆ ಎಂದು ವಿಶೇಷ ನ್ಯಾಯಾಲಯದಲ್ಲಿ ಸರಕಾರಿ ವಕೀಲ ಉಜ್ವಲ್ ನಿಕ್ಕಂ ತಿಳಿಸಿದ್ದಾರೆ.

ಒಂದು ಚಿತ್ರವನ್ನು ತಂತ್ರಜ್ಞಾನದ ಮೂಲಕ ಬದಲಾಯಿಸಬೇಕಾದರೆ ಚಿತ್ರದಲ್ಲಿರಬೇಕಾದ ವ್ಯಕ್ತಿಯ ಮೂಲ ಚಿತ್ರ ಅಗತ್ಯವಿರುತ್ತದೆ. ಕಸಬ್ ಭಾವ ಚಿತ್ರ 2008ರ ನವೆಂಬರ್ 27ರಂದು ಪ್ರಕಟವಾಗಿತ್ತು. ಹಾಗಾಗಿ ನಕಲಿ ಎಂಬುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನಿಕ್ಕಂ ವಾದಿಸಿದ್ದಾರೆ.

ತಾವು ನ್ಯಾಯಾಲಯದಲ್ಲಿ ಕಸಬ್‌ನನ್ನು ನೋಡುವ ಮೊದಲು ಆತನ ಯಾವುದೇ ಭಾವಚಿತ್ರಗಳನ್ನು ನೋಡಿಲ್ಲ ಎಂದು ಕೆಲವು ಸಾಕ್ಷಿಗಳು ಹೇಳಿಕೆ ನೀಡಿದ್ದಾರೆ. ಹಾಗಾಗಿ ಸಾಕ್ಷಿಯ ಒಂದು ಭಾಗ ಸುಳ್ಳೆಂದು ಕಂಡು ಬರುತ್ತಿದೆ ಎಂದು ಇದೇ ಸಂದರ್ಭದಲ್ಲಿ ವಿಚಾರಾಧೀನ ನ್ಯಾಯಾಲಯದ ನ್ಯಾಯಮೂರ್ತಿ ಎಂ.ಎಲ್. ತಹಲಿಯಾನಿ ತಿಳಿಸಿದ್ದಾರೆ.

ಅದೇ ಹೊತ್ತಿಗೆ ಮತ್ತೊಂದು ವಿಚಾರವನ್ನು ಸ್ಪಷ್ಟಪಡಿಸಿರುವ ನ್ಯಾಯಾಧೀಶರು, ಸಾಕ್ಷಿಯೊಬ್ಬ ಒಂದು ಸುಳ್ಳನ್ನು ಹೇಳಿದ ಮಾತ್ರಕ್ಕೆ ಆತ ಹೇಳಿರುವ ಎಲ್ಲವೂ ಸುಳ್ಳೆಂದು ಅರ್ಥವಲ್ಲ ಎಂದರು.

ಮತ್ತೊಂದು ಚಿತ್ರವನ್ನು 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯ ಛಾಯಾಗ್ರಾಹಕ ತೆಗೆದಿದ್ದರು. ಸಿಎಸ್‌ಟಿ ರೈಲ್ವೇ ನಿಲ್ದಾಣಕ್ಕೆ ಹೋಗುವ ಹಾದಿಯಲ್ಲಿನ ಕಾಮಾ ಹಾಸ್ಪಿಟಲ್ ಪಕ್ಕ ಹಾದು ಹೋಗುತ್ತಿದ್ದಾಗ ಈ ಚಿತ್ರ ತೆಗೆಯಲಾಗಿತ್ತು.

ಈ ಇಬ್ಬರೂ ಛಾಯಾಗ್ರಾಹಕರು ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ