ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪುಣೆ ಸ್ಫೋಟಕ್ಕೆ ತಿಂಗಳು; ಇನ್ನೂ ಮಹತ್ವದ ಮುನ್ನಡೆಯಿಲ್ಲ (Pune blast | Indian Mujahideen | Iqbal Bhaktal | Riyaz Bhaktal)
Bookmark and Share Feedback Print
 
ಫೆಬ್ರವರಿ 13ರಂದು ನಡೆದಿದ್ದ ಪುಣೆ ಜರ್ಮನ್ ಬೇಕರಿ ಸ್ಫೋಟ ಪ್ರಕರಣಕ್ಕೆ ಇಂದು ತಿಂಗಳು ತುಂಬಿದೆ. ಕೃತ್ಯ ನಡೆಸಿರುವುದು ಇಂಡಿಯನ್ ಮುಜಾಹಿದೀನ್ ಎಂಬುದು ಸ್ಪಷ್ಟವಾಗಿದ್ದು, ಗುರುವಾರ ಮತ್ತೆ ಮೂವರನ್ನು ಬಂಧಿಸಿರುವುದನ್ನು ಬಿಟ್ಟರೆ ಇದುವರೆಗೂ ಭಾರತದ ತನಿಖಾ ದಳಗಳಿಗೆ ಭಾರೀ ಮುನ್ನಡೆ ಸಿಕ್ಕಿಲ್ಲ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುರುವಾರ ಮತ್ತೆ ಮೂವರನ್ನು ಬಂಧಿಸಿದ್ದೇವೆ. ಇವರು ಸ್ಫೋಟದ ಹಿಂದೆ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ ಎಂಬುದು ತನಿಖಾ ದಳ ಹೇಳಿದೆಯಾದರೂ, ಅವರ ವಿವರಗಳನ್ನು ಬಹಿರಂಗಪಡಿಸಿಲ್ಲ.

ಆದರೆ ಪುಣೆ ಸ್ಫೋಟಕ್ಕೆ ಇಂಡಿಯನ್ ಮುಜಾಹಿದೀನ್ ಕಾರಣವೆಂಬುದು ಮಹಾರಾಷ್ಟ್ರ ಉಗ್ರ ನಿಗ್ರಹ ದಳಕ್ಕೆ (ಎಟಿಎಸ್) ಸ್ಪಷ್ಟವಾಗಿದೆ. ಅವರ ಪ್ರಕಾರ ದುಬೈಯಿಂದ ಭಟ್ಕಳ ಸಹೋದರರಾದ ರಿಯಾಜ್ ಮತ್ತು ಇಕ್ಬಾಲ್ ಈ ಕೃತ್ಯವನ್ನು ತಮ್ಮ ಸಹಚರರ ಮೂಲಕ ನಡೆಸಿದ್ದಾರೆ.

ಇದಕ್ಕೆ ಸ್ಥಳೀಯವಾಗಿ ಸಹಕರಿಸಿದವರು ಯಾರೆಂಬುದನ್ನು ಪತ್ತೆ ಹಚ್ಚುವಂತೆ ಸ್ಥಳೀಯ ತನಿಖಾ ದಳಗಳಿಗೆ ಕೇಂದ್ರೀಯ ಏಜೆನ್ಸಿಗಳು ಸೂಚಿಸಿವೆ. ಆದರೆ ಪುಣೆ ಪೊಲೀಸರು ಇದುವರೆಗೂ ಹೆಚ್ಚಿನ ದಾಖಲೆ ಅಥವಾ ಮಾಹಿತಿಗಳನ್ನು ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಲಾಗಿದೆ.

ಇಕ್ಬಾಲ್ ಭಟ್ಕಳ್ ಮತ್ತು ರಿಯಾಜ್ ಭಟ್ಕಳ್ ಯಾನೆ ಯಾಸೀನ್ ಭಟ್ಕಳ್ ಐದು ವರ್ಷಗಳ ಹಿಂದೆಯೇ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾರೆ. ಆ ಬಳಿಕ ಹೈದರಾಬಾದ್, ವಾರಣಾಸಿ, ಜೈಪುರ, ಅಹಮದಾಬಾದ್ ಮತ್ತು ದೆಹಲಿ ಸ್ಫೋಟಗಳಿಗೆ ಸಂಬಂಧಪಟ್ಟಂತೆ ಅವರ ಸಂಘಟನೆಯ ಹಲವು ಸದಸ್ಯರನ್ನು ತನಿಖಾ ದಳಗಳು ಬಂಧಿಸಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಎರಡು ವರ್ಷ ಅವಧಿಯಲ್ಲಿ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಉತ್ತರ ಮತ್ತು ದಕ್ಷಿಣ ಭಾರತ ವಿಭಾಗಗಳ ಸುಮಾರು 16 ಮಂದಿ ಸದಸ್ಯರನ್ನು ಬಂಧಿಸಿದ್ದೇವೆ. ನಮ್ಮ ಪ್ರಕಾರ ಜರ್ಮನ್ ಬೇಕರಿ ಪ್ರಕರಣಕ್ಕೆ ಅವರು ಹೊಸ ನೇಮಕಾತಿಯನ್ನು ಮಾಡಿರಬಹುದು. ಹಾಗಾಗಿ ನಮಗೆ ಅವರನ್ನು ಗುರುತಿಸುವುದು ವಿಳಂಬವಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪುಣೆ ಸ್ಫೋಟದ ಹಿಂದಿರುವವರು ಸ್ಥಳೀಯರಲ್ಲ. ಆದರೆ ಅವರು ಪುಣೆಯಲ್ಲಿನ ಭಯೋತ್ಪಾದಕರ ಸುಪ್ತದಳದ ಬೆಂಬಲವನ್ನು ಪಡೆದುಕೊಂಡಿದ್ದರು. ಶೀಘ್ರದಲ್ಲೇ ಹೆಚ್ಚಿನ ಮುನ್ನಡೆಯನ್ನು ನಾವು ಪಡೆಯಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ