ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಸಲೀಲೆ: ಧ್ಯಾನಪೀಠದ ಎಲ್ಲಾ ಹುದ್ದೆಗೆ ನಿತ್ಯಾನಂದ ಗುಡ್‌ಬೈ (Nithyananda Dhyanapeetam | Nithyananda | Hindu Dharma, Hardwar)
Bookmark and Share Feedback Print
 
PR
ನಟಿ ರಂಜಿತ ಜೊತೆ ರಾಸಲೀಲೆ ನಡೆಸಿ ನಾಪತ್ತೆಯಾಗಿರುವ ನಿತ್ಯಾನಂದ ಸ್ವಾಮಿಗೆ ತಡವಾಗಿ ಜ್ಞಾನೋದಯವಾಗಿದ್ದು, ಇದೀಗ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ವಿದ್ಯಮಾನ ಮನಗಂಡಿದ್ದು, ತಾನು ಧ್ಯಾನಪೀಠದ ಎಲ್ಲಾ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಪರಮಹಂಸ ನಿತ್ಯಾನಂದ ಮಿಷನ್ ವೆಬ್ ಸೈಟ್‌ನಲ್ಲಿ ಘೋಷಿಸಿದ್ದಾನೆ.

ಕಳೆದ ಮೂರು ವಾರಗಳಲ್ಲಿ ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ ಹರಿದ್ವಾರದಲ್ಲಿ ಹಿಂದೂ ಧರ್ಮದ ಪ್ರಮುಖ ಆಚಾರ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ಹೇಳಿರುವ ನಿತ್ಯಾನಂದ, ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏನು ನಡೆಯಿತು ಎಂಬ ಬಗ್ಗೆ ವಿವರಿಸಿದ್ದೇನೆ.

ಹಿರಿಯ ಸ್ವಾಮೀಜಿಗಳೊಂದಿಗೆ ತನ್ನ ಮುಕ್ತ ಅಭಿಪ್ರಾಯ ಹಂಚಿಕೊಂಡಿದ್ದು, ಅವರಿಂದ ಧಾರ್ಮಿಕ ಮತ್ತು ನೈತಿಕ ಬೆಂಬಲ ನೀಡಿ, ಮಾರ್ಗದರ್ಶನ ಮಾಡುವಂತೆ ಕೋರಿದ್ದೇನೆ. ಆ ನಿಟ್ಟಿನಲ್ಲಿ ನಾನು ಧ್ಯಾನಪೀಠದ ಮುಖ್ಯ ಸ್ಥಾನ ಸೇರಿದಂತೆ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾನೆ.

PR
ನಾನು ಅನಿರ್ದಿಷ್ಟ ಕಾಲಾವಧಿವರೆಗೆ ಆಧ್ಯಾತ್ಮದ ಕಡೆಗೆ ಹೆಚ್ಚಿನ ಒಲವು ತೋರಲು ನಿರ್ಧರಿಸಿದ್ದೇನೆ. ಇದಕ್ಕೆ ಹಿರಿಯ ಆಚಾರ್ಯರೂ ಕೂಡ ಸಮ್ಮತಿಸಿದ್ದಾರೆ. ಹಾಗಾಗಿ ಧ್ಯಾನಪೀಠಕ್ಕೆ ವಿವಾದಿತ ರಹಿತ ಸಾಧಕರೊಬ್ಬರನ್ನು ಆಡಳಿತ ಮಂಡಳಿ ನೂತನ ಮುಖ್ಯ ಸ್ವಾಮಿಯನ್ನಾಗಿ ನೇಮಕ ಮಾಡಲಿದೆ. ನೂತನವಾಗಿ ಆಯ್ಕೆಯಾಗಲಿರುವ ಸ್ವಾಮೀಜಿಗೆ ಧ್ಯಾನಪೀಠದಲ್ಲಿ ನಡೆಯಲಿರುವ ಎಲ್ಲಾ ಚಟುವಟಿಕೆಗಳಲ್ಲಿಯೂ ಸಹಕಾರ ನೀಡಬೇಕು ಎಂದು ಕೋರುತ್ತೇನೆ. ಈ ಸಂದರ್ಭದಲ್ಲಿ ನೂತನ ಟ್ರಸ್ಟಿಗಳನ್ನೂ ಕೂಡ ನೇಮಕ ಮಾಡಲಾಗುವುದು ಎಂದು ನಿತ್ಯಾನಂದ ವೆಬ್ ಪ್ರಕಟಣೆಯಲ್ಲಿ ವಿವರಿಸಿದ್ದಾನೆ.

ಕಳೆದ ಒಂದು ದಶಕಗಳ ಕಾಲ ಧ್ಯಾನಪೀಠದಲ್ಲಿ ಲಕ್ಷಾಂತರ ಭಕ್ತರು ತುಂಬು ಹೃದಯದ ಸಹಕಾರ ನೀಡಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇನ್ನು ಮುಂದೆಯೂ ಕೂಡ ಧ್ಯಾನಪೀಠಕ್ಕೆ ಭಕ್ತರ ತನು, ಮನ, ಧನದ ಸಹಕಾರ ಮುಂದುವರಿಯಲಿ ಎಂದು ಮನವಿ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ.

ಮಾಧ್ಯಮಗಳಲ್ಲಿ ಇತ್ತೀಚೆಗೆ ಪ್ರಕಟಗೊಂಡ ವರದಿಯಿಂದಾಗಿ ತನ್ನ ಸಾಧನೆಗೆ ಯಾವುದೇ ಭಂಗ ಉಂಟು ಮಾಡಲು ಸಾಧ್ಯವಿಲ್ಲ, ನಿಮಗೆ ಅಗತ್ಯವಿದ್ದಲ್ಲಿ ಖಂಡಿತವಾಗಿಯೂ ನಾನು ಧ್ಯಾನಪೀಠಕ್ಕೆ ಹಿಂತಿರುಗುತ್ತೇನೆ. ಹಾಗೂ ಏನು ನಡೆಯಿತು ಎಂಬುದರ ಬಗ್ಗೆಯೂ ಪೂರ್ಣ ವಿವರಣೆಯನ್ನೂ ನೀಡುವುದಾಗಿ ನಿತ್ಯಾನಂದ ಭಕ್ತ ಕೋಟಿಗೆ ಅಭಯ ನೀಡಿದ್ದಾನೆ.

ನಿತ್ಯಾನಂದನ ರಾಸಲೀಲೆ ಮಾಧ್ಯಮಗಳಲ್ಲಿ ಬಯಲಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದ ಸ್ವಾಮಿ ಈವರೆಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಘಟನೆಗೆ ಸಂಬಂಧಿಸಿದಂತೆ ಕರ್ನಾಟಕದ ಬಿಡದಿ ಠಾಣೆಯಲ್ಲಿ ಆರು ಮೊಕದ್ದಮೆಗಳು ದಾಖಲಾಗಿದ್ದವು. ಅಲ್ಲದೇ ತನ್ನ ವಿರುದ್ದ ದಾಖಲಾಗಿದ್ದ ಎಫ್‌ಐಆರ್ ವಜಾಗೊಳಿಸುವಂತೆ ಮತ್ತು ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯೂ ಕೂಡ ತಿರಸ್ಕೃತಗೊಂಡಿತ್ತು. ಅಂತೂ ಕೈಗೆ ಕೋಳ ಹಾಕಿಸಿಕೊಳ್ಳುವುದು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರಿತ ಸ್ವಾಮಿ ಇದೀಗ ಧ್ಯಾನಪೀಠದ ಎಲ್ಲಾ ಹುದ್ದೆಗೂ ರಾಜೀನಾಮೆ ನೀಡಿದ್ದೇನೆ ಎಂದು ವೆಬ್‌ಸೈಟ್‌ನಲ್ಲಿ ಹೇಳಿಕೆ ನೀಡಿದ್ದರೂ ಕೂಡ ಸ್ವಾಮಿ ಎಲ್ಲಿದ್ದಾನೆ ಎಂಬುದು ಮಾತ್ರ ನಿಗೂಢವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ