ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೌದು, ಗೋದ್ರಾ ಹತ್ಯಾಕಾಂಡ ತಪ್ಪು: ಮೋದಿ ಉವಾಚ (Gujarat riots | Narendra Modi | Gujarat | post-Godhra | Amitabh Bachchan)
Bookmark and Share Feedback Print
 
PTI
ಗುಜರಾತ್‌ ಹತ್ಯಾಕಾಂಡದಿಂದಾಗಿ ತಮ್ಮನ್ನು ಅಸ್ಪೃಶ್ಯರಂತೆ ಕಾಣುತ್ತಿರುವ ಬಗ್ಗೆ ಕಿಡಿಕಾರಿರುವ ಮುಖ್ಯಮಂತ್ರಿ ನರೇಂದ್ರ ಮೋದಿ, ತಾನು ಕೂಡ 2002ರ ಗೋದ್ರಾ ಮತ್ತು ಗೋದ್ರೋತ್ತರ ಘಟನೆಗಳನ್ನು ಯಾವುದೇ ಮುಲಾಜಿಲ್ಲದೆ ಖಂಡಿಸುತ್ತೇನೆ ಎಂದು ತಿಳಿಸಿದ್ದಾರೆ.

ಮೇರು ನಟ ಅಮಿತಾಭ್ ಬಚ್ಚನ್‌ಗೆ ಗುಜರಾತ್‌ನಲ್ಲಾದ ಕೋಮುದಳ್ಳುರಿಯಲ್ಲಿ ಮೋದಿಯ ಭಾಗಿಯನ್ನು ತಪ್ಪು ಎಂದು ಘಂಟಾಘೋಷವಾಗಿ ಹೇಳುತ್ತೀರಾ ಎಂಬ ಕಾಂಗ್ರೆಸ್ ಪಕ್ಷದ ಪ್ರಶ್ನೆಗೆ ಮೋದಿ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಅಮಿತಾಭ್‌ಗೆ ಗುಜರಾತ್ ಹತ್ಯಾಕಾಂಡವನ್ನು ಖಂಡಿಸುತ್ತೀರಾ?ಎಂದು ಕೇಳಿತ್ತು. ಅಲ್ಲದೇ 'ಮೋದಿ ಖುದ್ದು ಈ ಘಟನೆಯನ್ನು ಖಂಡಿಸಿದ್ದಾರೆ. ಈಗಲೂ ಖಂಡಿಸುತ್ತಾರೆ. ಇದನ್ನು ಪ್ರತಿಯೊಬ್ಬ ನಾಗರಿಕನೂ ವಿರೋಧಿಸಬೇಕು' ಎಂದು ಇತ್ತೀಚೆಗೆ ಮೋದಿ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದರು.

ಅಲ್ಲದೇ 1948ರಲ್ಲಿ ನಡೆದ ಗಲಭೆಗೂ ಮತ್ತು 2002ರಲ್ಲಿ ನಡೆದ ಕೋಮುದಳ್ಳುರಿಗೂ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ಕೂಡ ಮೋದಿ ಸಮಜಾಯಿಸಿ ನೀಡಿದ್ದಾರೆ. ಇದು 1984ರ ದೆಹಲಿ ದಂಗೆಯಾಗಲಿ, 1992ರ ಮುಂಬೈ ಗಲಭೆಯಾಗಲಿ, 1985ರ ಗುಜರಾತ್ ಗಲಭೆ ಅಥವಾ ಕಾಶ್ಮೀರದಲ್ಲಿ ನಡೆದ ಹಿಂಸಾಚಾರ ಅಥವಾ ಗೋದ್ರಾಗೆ ಸಂಬಂಧಪಟ್ಟ ಘಟನೆಗಳಾಗಲಿ ಇದರಲ್ಲಿ ಯಾವುದೇ ವ್ಯತ್ಯಾಸ ಕಾಣಲು ಸಾಧ್ಯವಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾರ್ಚ್ 2002ರಲ್ಲಿ ಗುಜರಾತ್ ಗಲಭೆಯಾದ ನಂತರ ನಾನು ವಿಧಾನ ಸಭೆಯಲ್ಲಿ ಒಂದು ಹೇಳಿಕೆಯನ್ನು ನೀಡಿದ್ದೆ. ದಿನ ಬೆಳಗಾದರೆ ಈ ಘಟನೆಗೆ ಸಂಬಂಧಪಟ್ಟಂತೆ ಸುಳ್ಳು ಸುದ್ದಿಗಳನ್ನು ಹರಡುತ್ತಿರುವವರಿಗೆ ಸಾಕ್ಷಿ ಒದಗಿಸಲು ಆ ಹೇಳಿಕೆಯನ್ನು ಇಲ್ಲಿ ಪ್ರಸ್ತಾಪಿಸಲು ಇಚ್ಛಿಸುತ್ತೇನೆ. ನಮ್ಮ ಆತ್ಮ ಪರೀಕ್ಷೆ ಮಾಡಿಕೊಳ್ಳುವ ಅವಶ್ಯಕತೆ ಮತ್ತು ಹಕ್ಕು ಎಲ್ಲರಿಗೂ ಇದೆ. ಗೌರವಯುತ ಸಮಾಜದಲ್ಲಿ ಗೋದ್ರಾ ಅಥವಾ ಗೋದ್ರೋತ್ತರ ಘಟನೆಗಳು ಸಭ್ಯ ಎನ್ನಿಸಿಕೊಳ್ಳುವುದಿಲ್ಲ. ಮಾನವೀಯತೆಗೆ ದಕ್ಕೆ ತರಬಹುದಾದಂತಹ ಇಂತಹ ಘಟನೆಗಳು ಯಾರನ್ನೂ ತಲೆ ಎತ್ತಿ ತಿರುಗುವಂತೆ ಮಾಡುವುದಿಲ್ಲ. ಇದಕ್ಕಾಗಿ ಅಭಿಪ್ರಾಯಗಳಲ್ಲಿ ವಿರೋಧ ಯಾಕೆ ಎಂದು ಮೋದಿ ಪ್ರಶ್ನಿಸಿದ್ದಾರೆ.

ಗಲಭೆಯಾದ ಫೆಬ್ರುವರಿ 2002ರ ಮಧ್ಯಾಹ್ನವೇ ದೂರದರ್ಶನ ಮತ್ತು ಆಕಾಶವಾಣಿ ಮೂಲಕ ಈ ಸಂದೇಶವನ್ನು ನಾನು ನೀಡಿರುವುದಾಗಿ ಮೋದಿ ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ