ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಯೇಶಾ ಪ್ರಕರಣ; ಸಾನಿಯಾ ಮಿರ್ಜಾ ಮದುವೆಗೆ ಮತ್ತೆ ವಿಘ್ನ? (Sania Mirza | Shoaib Malik | Ayesha Siddiqui | MA Siddiqui)
Bookmark and Share Feedback Print
 
ಆಯೇಶಾ ಸಿದ್ಧಿಕಿ
PR
ತನ್ನ ಮಗಳು ಆಯೇಶಾ ಸಿದ್ಧಿಕಿಯನ್ನು ಹಲವು ವರ್ಷಗಳ ಹಿಂದೆಯೇ ಮದುವೆಯಾಗಿರುವ ಪಾಕಿಸ್ತಾನಿ ಕ್ರಿಕೆಟ್ ಆಟಗಾರ ಶೋಯಿಬ್ ಮಲಿಕ್ ವಿವಾಹ ವಿಚ್ಛೇದನ ನೀಡಿಲ್ಲ; ಹಾಗಾಗಿ ತಾನು ನ್ಯಾಯಾಲಯದ ಮೆಟ್ಟಿಲೇರಲಿದ್ದೇನೆ ಎಂದು ಹೇಳಿದ್ದಾರೆ ಎಂದು ವರದಿಗಳು ಹೇಳಿದ್ದು, ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮದುವೆಗೆ ಮತ್ತೆ ವಿಘ್ನ ಎದುರಾಗಿದೆ.

ತನ್ನ ಮಗಳನ್ನು ಶೋಯಿಬ್ ವಿವಾಹವಾಗಿದ್ದಾರೆ, ಆದರೆ ವಿಚ್ಛೇದನ ನೀಡಿಲ್ಲ. ಅವರಿಬ್ಬರು ಕಾನೂನಿನ ಪ್ರಕಾರ ಪ್ರತ್ಯೇಕವಾಗದೆ ಮತ್ತೊಂದು ಮದುವೆಯಾಗಲು ಹೇಗೆ ಸಾಧ್ಯ ಎಂದು ಆಯೇಶಾ ಸಿದ್ಧಿಕಿ ತಂದೆ ಎಂ.ಎ. ಸಿದ್ಧಿಕಿ ಪ್ರಶ್ನಿಸಿದ್ದು, ನ್ಯಾಯಾಲಯಕ್ಕೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.

2002ರಲ್ಲೇ ಶೋಯಿಬ್‌ಗೆ ಮದುವೆಯಾಗಿತ್ತು...
ಇಂಟರ್ನೆಟ್ ಮೂಲಕ ಸುದೀರ್ಘ ಕಾಲ ಪ್ರೀತಿಸುತ್ತಿದ್ದ ಆಯೇಶಾ ಮತ್ತು ಶೋಯಿಬ್ 2002ರ ಜೂನ್ 3ರಂದು ತನ್ನ ಮಗಳನ್ನು ದೂರವಾಣಿ ನಿಖಾ (ಮದುವೆ) ಮಾಡಿಕೊಂಡಿದ್ದಾರೆ ಎಂದು ಸೌದಿ ಏರ್‌ಲೈನ್ಸ್‌ನಲ್ಲಿ ಉದ್ಯೋಗಿಯಾಗಿದ್ದ ಆಯೇಶಾ ತಂದೆ ಸಿದ್ಧಿಕಿ ಹೇಳುತ್ತಾರೆ.

ಪ್ರಸಕ್ತ ಹೈದರಾಬಾದ್‌ನ ಐಷಾರಾಮಿ ಬಂಜಾರಾ ಹಿಲ್ಸ್‌ನಲ್ಲಿ ಮಗಳೊಂದಿಗೆ ವಾಸಿಸುತ್ತಿರುವ ಆಯೇಶಾ ಮತ್ತು ಆಕೆಯ ಹೆತ್ತವರಾದ ಎಂ.ಎ. ಸಿದ್ಧಿಕಿ ಮತ್ತು ಫಾರಿಸಾ ಎಲ್ಲೂ ಸಾರ್ವಜನಿಕ ಹೇಳಿಕೆಗಳನ್ನು ನೀಡಿಲ್ಲ.

ಮೂಲಗಳ ಪ್ರಕಾರ 2001ರಲ್ಲಿ ದುಬೈಯಲ್ಲಿನ ರೆಸ್ಟಾರೆಂಟ್ ಒಂದರಲ್ಲಿ ಆಯೇಶಾ ತನ್ನ ಗೆಳತಿ ಮಹಾ ಜತೆ ಶೋಯಿಬ್‌ರನ್ನು ಭೇಟಿಯಾಗಿದ್ದಳು. ಆಯೇಶಾ ಗುಂಡಗಿದ್ದರೆ, ಮಹಾ ಮುದ್ದಾಗಿದ್ದಳು. ಈ ಸಂದರ್ಭದಲ್ಲಿ ಮಹಾಳಲ್ಲಿ ಶೋಯಿಬ್ ಅನುರಕ್ತರಾಗಿದ್ದರು.
PTI


ಹೈದರಾಬಾದ್‌ಗೆ ವಾಪಸಾದ ಆಯೇಶಾ ತಾನೇ ಮಹಾ ಎಂಬುದಾಗಿ ಹೇಳಿಕೊಳ್ಳುತ್ತಾ ಶೋಯಿಬ್ ಜತೆ ಇಂಟರ್ನೆಟ್ ಚಾಟಿಂಗ್ ಮಾಡುತ್ತಿದ್ದಳು. ನಂತರ ಹೆತ್ತವರನ್ನು ಒಪ್ಪಿಸಿ ಅವರಿಬ್ಬರ ನಡುವೆ ದೂರವಾಣಿ ನಿಖಾ ನಡೆದಿತ್ತು.

ಬಳಿಕ 2005ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಹೈದರಾಬಾದ್‌ಗೆ ಬಂದಿದ್ದಾಗ ತನ್ನ ಸಹ ಆಟಗಾರರಿಗೆ ಅದ್ದೂರಿ ಔತಣಕೂಟ ಏರ್ಪಡಿಸಿದ್ದ ಶೋಯಿಬ್, ಪತ್ನಿ ಆಯೇಶಾಳನ್ನು ಭೇಟಿ ಮಾಡಲು ಬಯಸಿದ್ದರು. ಆದರೆ ಆಕೆಯ ಹೆತ್ತವರು, ಮಗಳು ನಗರದಲ್ಲಿಲ್ಲ ಎಂದು ಸುಳ್ಳು ಹೇಳಿದ್ದರು.

ದುಬೈಯಲ್ಲಿ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಆಯೇಶಾ ಬಳಿಕ ತನ್ನ ನಿಜವಾದ ಭಾವಚಿತ್ರವನ್ನು ಶೋಯಿಬ್‌ಗೆ ಕಳುಹಿಸಿದ್ದಳು. ಆ ಬಳಿಕ ಕ್ರಿಕೆಟಿಗ ಆಕೆಯ ಜತೆಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದ್ದರು. ತನ್ನನ್ನು ಸಿದ್ಧಿಕಿ ಕುಟುಂಬ ವಂಚಿಸಿದೆ ಎಂದು ಶೋಯಿಬ್ ಈ ಸಂದರ್ಭದಲ್ಲಿ ಆರೋಪಿಸಿದ್ದರು.

ಮದುವೆ ಒಪ್ಪಿಕೊಂಡಿದ್ದ ಶೋಯಿಬ್...
2005ರ ಮಾರ್ಚ್ 30ರಂದು ಹೈದರಾಬಾದ್‌ನಲ್ಲಿ ಅಮೋಘ ಅರ್ಧಶತಕ ದಾಖಲಿಸಿದ್ದ ಶೋಯಿಬ್ ಪಂದ್ಯದ ನಂತರ ಪ್ರತಿಕ್ರಿಯಿಸುತ್ತಾ, 'ನಾನು ಈ ಹಿಂದೆ ಕೊಂಚ ನಿರಾಸೆಗೊಂಡಿದ್ದೆ. ಆದರೆ ಈಗ 82 ರನ್ ಗಳಿಸಿರುವುದರಿಂದ ಸಮಾಧಾನವಾಗಿದೆ. ಅಲ್ಲದೆ ಇದು ನನ್ನ ಪತ್ನಿಯ ತವರಾಗಿರುವುದರಿಂದ ಮತ್ತಷ್ಟು ಸಂತೋಷವಾಗಿದೆ' ಎಂದಿದ್ದರು.

ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಅರುಣ್ ಲಾಲ್ ಅವರು ಶೋಯಿಬ್‌ರನ್ನು ಅಭಿನಂದಿಸಿದ್ದರು.

ಸಾನಿಯಾ ತಪ್ಪು ಆಯ್ಕೆ...
ಈ ನಡುವೆ ಪ್ರತಿಕ್ರಿಯಿಸಿರುವ ಆಯೇಶಾ ತಂದೆ ಸಿದ್ಧಿಕಿ, ಸಾನಿಯಾ ಮಿರ್ಜಾ ಕ್ರಿಕೆಟಿಗ ಶೋಯಿಬ್ ಮಲಿಕ್ ಅವರನ್ನು ಮದುವೆಯಾಗಲು ನಿರ್ಧರಿಸುವ ಮೂಲಕ ತಪ್ಪು ಆಯ್ಕೆ ನಡೆಸಿದ್ದಾರೆ ಎಂದಿದ್ದಾರೆ.
PTI

ನನ್ನ ಮಗಳೊಂದಿಗೆ ಮದುವೆಯಾಗಿ ವಂಚಿಸಿರುವ ಶೋಯಿಬ್‌ರಿಂದಾಗಿ ನಮ್ಮ ಮನಶಾಂತಿ ಹಾಳಾಗಿದೆ. ಅವರಿಂದಾಗಿ ಮಗಳು ಎರಡೆರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮಗಳಿಗೆ ವಿಚ್ಛೇದನ ನೀಡದೆ ಮತ್ತೊಂದು ಮದುವೆಯಾಗಲು ನಾನು ಅವಕಾಶ ನೀಡುವುದಿಲ್ಲ ಎಂದು ಸಿದ್ಧಿಕಿ ಹೇಳಿದ್ದಾರೆ ಎಂದು ವರದಿಗಳು ಹೇಳಿವೆ.

ಸಿದ್ಧಿಕಿ ಕುಟುಂಬ ಕೋರ್ಟಿಗೆ ಹೋಗಲ್ಲ...
ಆದರೆ ಮತ್ತೊಂದು ಮೂಲಗಳ ಪ್ರಕಾರ ಸಿದ್ಧಿಕಿ ಕುಟುಂಬ ನ್ಯಾಯಾಲಯಕ್ಕೆ ಹೋಗುವ ಸಾಧ್ಯತೆಗಳಿಲ್ಲ.

ಮತ್ತೊಬ್ಬ ಸುಂದರ ಹುಡುಗಿಯಂತೆ ಪೋಸ್ ಕೊಡುತ್ತಾ ಇಂಟರ್ನೆಟ್ ಮೂಲಕ ಚಾಟಿಂಗ್ ಮಾಡುತ್ತಿದ್ದ ಆಯೇಶಾ, ಶೋಯಿಬ್‌ಗೆ ವಂಚನೆ ಮಾಡಿದ್ದಳು. ಅಲ್ಲದೆ ಆಕೆಯ ತಂದೆ ಸಿದ್ಧಿಕಿ ಕೂಡ ಮಗಳ ಫೋಟೋ ಬದಲು ಮತ್ತೊಬ್ಬಳ ಫೋಟೋ ನೀಡಿದ್ದರು.

ವಿಚ್ಛೇದನ ಪಡೆಯದೆ ಮತ್ತೊಂದು ಮದುವೆಯಾಗಲು ಬಿಡುವುದಿಲ್ಲ ಎಂದು ಸಿದ್ಧಿಕಿ ಬಾಲ ಬಿಚ್ಚಿದರೆ, ವಂಚನೆ ಪ್ರಕರಣ ದಾಖಲಿಸುವುದಾಗಿ ಶೋಯಿಬ್ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದ್ದು ಸಾನಿಯಾ-ಶೋಯಿಬ್ ಮದುವೆ ಸರಾಗವಾಗಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಸಾನಿಯಾಗಿದು ಎರಡನೇ ವಿಘ್ನ...
ಬಾಲ್ಯದ ಗೆಳೆಯ ಸೊಹ್ರಾಬ್ ಮಿರ್ಜಾ ಜತೆ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸಾನಿಯಾ ಮಿರ್ಜಾ ವೈಯಕ್ತಿಕ ಕಾರಣಗಳನ್ನು ಮುಂದೊಡ್ಡಿ ಮದುವೆಯಾಗಲು ನಿರಾಕರಿಸಿದ್ದರು.

ಬಳಿಕ ಪಾಕಿಸ್ತಾನಿ ಕ್ರಿಕೆಟಿಗ ಶೋಯಿಬ್ ಮಲಿಕ್ ಅವರನ್ನು ಮದುವೆಯಾಗುವುದಾಗಿ ನಿನ್ನೆಯಷ್ಟೇ ಹೇಳಿದ್ದರು. ಇದೀಗ ಆಯೇಶಾ ಪ್ರಕರಣ ಗರಿಗೆದರಿರುವುದರಿಂದ ಇವರಿಬ್ಬರ ನಡುವಿನ ಮದುವೆಗೆ ಕಾನೂನು ತೊಡಕು ಎದುರಾಗಬಹುದು ಎಂಬ ಭೀತಿ ಎದುರಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ