ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಫ್ಜಲ್ ಗಲ್ಲು;ಸುಪ್ರೀಂ ತೀರ್ಪಿಗೆ ಬದ್ಧ: ಶೀಲಾ ದೀಕ್ಷಿತ್ (Afzal Guru | death-penalty | Parliament attack case | Dikshit | Supreme Court)
Bookmark and Share Feedback Print
 
ಸಂಸತ್ ಮೇಲೆ ದಾಳಿ ನಡೆಸಿದ ಸಂಚಿನ ಪ್ರಮುಖ ರೂವಾರಿ ಅಫ್ಜಲ್ ಗುರು ಸಲ್ಲಿಸಿರುವ ಕ್ಷಮಾದಾನ ಅರ್ಜಿಯನ್ನು ರಾಜ್ಯಪಾಲರಿಗೆ ರವಾನಿಸಲಾಗಿದೆ ಎಂದು ಮಂಗಳವಾರ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ತಿಳಿಸಿದ್ದು, ಅಫ್ಜಲ್ ಗಲ್ಲು ಶಿಕ್ಷೆ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ಸರ್ಕಾರದ ಸಹಮತ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಅಫ್ಜಲ್ ಗುರು ಕ್ಷಮಾದಾನದ ಅರ್ಜಿ ಕುರಿತಂತೆ ಕೇಂದ್ರ ಗೃಹ ಇಲಾಖೆ ರಾಜ್ಯಕ್ಕೆ ಕಳುಹಿಸಿರುವ ಪತ್ರದ ಬಗ್ಗೆ ಏನೂ ಗೊತ್ತಿಲ್ಲ ಎಂಬ ಹೇಳಿಕೆಯ ಮಾಧ್ಯಮದ ವರದಿಯನ್ನು ತಳ್ಳಿಹಾಕಿರುವ ದೀಕ್ಷಿತ್, ಅಫ್ಜಲ್ ಗುರು ಕ್ಷಮಾದಾನ ಮನವಿಯನ್ನು ಲೆಫ್ಟಿನೆಂಟ್ ಗವರ್ನರ್ ತೇಜೇಂದರ್ ಖನ್ನಾ ಅವರಿಗೆ ರವಾನಿಸಲಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಗುರು ಕ್ಷಮಾದಾನ ಅರ್ಜಿಯನ್ನು ಖನ್ನಾ ಅವರಿಗೆ ಕಳುಹಿಸಲಾಗಿದೆ ಎಂದು ದೆಹಲಿ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಕೂಡ ಖಚಿತಪಡಿಸಿದ್ದಾರೆ. ಅಫ್ಜಲ್ ಗಲ್ಲುಶಿಕ್ಷೆ ಪ್ರಕರಣದ ಕುರಿತು ಕೇಂದ್ರ ಗೃಹ ಸಚಿವಾಲಯ ದೆಹಲಿ ಸರ್ಕಾರದ ಅಭಿಪ್ರಾಯ ಕೇಳಿತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ ಅಫ್ಜಲ್ ಕ್ಷಮಾದಾನ ಅರ್ಜಿ ದೆಹಲಿ ಸರ್ಕಾರದ ಬಳಿಯೇ ದೂಳು ಹಿಡಿದು ಕೂತಿತ್ತು.

ಇದೀಗ ಅಫ್ಜಲ್ ಸುಪ್ರೀಂಕೋರ್ಟ್ ನೀಡಿರುವ ಗಲ್ಲುಶಿಕ್ಷೆಗೆ ಸರ್ಕಾರ ಅನುಮೋದನೆ ನೀಡಿರುವುದಾಗಿ ಹೇಳಿದೆ. ಆದರೆ ಮರಣದಂಡನೆ ಶಿಕ್ಷೆ ಜಾರಿಗೊಳಿಸುವ ಮುನ್ನ ಅದಕ್ಕೆ ಎದುರಾಗುವ ಕಾನೂನು ತೊಡಕುಗಳ ಬಗ್ಗೆ ಪರಿಶೀಲನೆ ನಡೆಸಿದ್ದು ಅರ್ಜಿಯನ್ನು ರಾಜ್ಯಪಾಲರಿಗೆ ರವಾನಿಸಲಾಗಿದೆ ಎಂದು ಸರ್ಕಾರದ ಮೂಲವೊಂದು ತಿಳಿಸಿದೆ.

ಕಾಶ್ಮೀರ ಕಣಿವೆಯ ಸೋಪೋರ್ ನಿವಾಸಿಯಾದ ಅಫ್ಜಲ್ ಗುರು ಸಂಸತ್ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ 2001 ಡಿಸೆಂಬರ್ 13ರಂದು ದೋಷಿ ಎಂದು ಸಾಬೀತಾಗಿತ್ತು. ನಂತರ ವಿಚಾರಣಾಧೀನ ನ್ಯಾಯಾಲಯ ಗುರುಗೆ 2002ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು 2003ರಲ್ಲಿ ದೆಹಲಿ ಹೈಕೋರ್ಟ್ ಕೂಡ ಎತ್ತಿ ಹಿಡಿದಿತ್ತು.

2005ರ ಆಗೋಸ್ಟ್‌ನಲ್ಲಿ ದಾಳಿಯ ಸಂಚಿನ ಪ್ರಮುಖ ಪಾತ್ರಧಾರಿಯಾದ ಅಫ್ಜಲ್‌ನ ಗಲ್ಲುಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಸುಪ್ರೀಂ ಅಂತಿಮ ತೀರ್ಪಿನ ನಂತರ ಅಫ್ಜಲ್ ಪತ್ನಿ ತಬ್ಸಮ್ ತನ್ನ ಗಂಡನಿಗೆ ಕ್ಷಮಾದಾನ ನೀಡಬೇಕೆಂದು ಕೋರಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದಳು. ಕ್ಷಮಾದಾನ ಪತ್ರದ ಕುರಿತಂತೆ ರಾಷ್ಟ್ರಪತಿಯವರು ಅರ್ಜಿಯನ್ನು 2005ರಲ್ಲಿ ಗೃಹಸಚಿವಾಲಯಕ್ಕೆ ಕಳುಹಿಸಿ ಅಭಿಪ್ರಾಯ ಕೇಳಿದ್ದರು. ಕ್ಷಮಾದಾನ ಮನವಿ ಕುರಿತಂತೆ ಕಾನೂನಿ ರೀತ್ಯಾ ರಾಜ್ಯ ಸರ್ಕಾರ ನಿಲುವನ್ನು ಗೃಹ ಸಚಿವಾಲಯ ಎದುರು ನೋಡುತ್ತಿದ್ದು, ಆ ನಿಟ್ಟಿನಲ್ಲಿ ದೆಹಲಿ ಸರ್ಕಾರ ಗುರು ಗಲ್ಲುಶಿಕ್ಷೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ಅನುಮೋದನೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ