ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಂಸದ, ಶಾಸಕರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲೂ ಟೋಲ್ ಫ್ರೀ! (National Highways | MPs | MLAs | Parliamentarians | exemption)
Bookmark and Share Feedback Print
 
ಸಂಸದರು, ಶಾಸಕರಿಗೆ ಹಲವು ಸೌಲಭ್ಯ ಉಚಿತದ ಜೊತೆಗೆ, ಇನ್ನು ಮುಂದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಗುವಾಗ ಯಾವುದೇ ಟೋಲ್ ಹಣ ಪಾವತಿ ಮಾಡಬೇಕಾಗಿಲ್ಲ!

ಏಕೆಂದರೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರಿಗೆ ಸಲ್ಲಿಸಿದ್ದ ಈ ಪ್ರಸ್ತಾವನೆಗೆ ಮುಖರ್ಜಿ ನೇತೃತ್ವದ ಉನ್ನತಾಧಿಕಾರದ ಸಚಿವರ ಸಭೆಯಲ್ಲಿ ಗ್ರೀನ್ ಸಿಗ್ನಲ್ ದೊರೆತಿದೆ.

ಸರಕಾರಿ ಹಾಗೂ ಖಾಸಗಿ ಸಹಭಾಗಿತ್ವದ ಎರಡೂ ಟೋಲ್‌ಗಳಲ್ಲಿ ಇನ್ನು ಮುಂದೆ ಸಂಸದರು, ಶಾಸಕರು ಟೋಲ್ ಹಣ ಪಾವತಿ ಮಾಡಬೇಕಾಗಿಲ್ಲ. ಅಲ್ಲದೇ ರಾಷ್ಟ್ರೀಯ ಹೆದ್ದಾರಿ ಹೊಸ ಟೋಲ್ ನೀತಿಯನ್ನು ಮಾರ್ಪಡಿಸುವ ಪ್ರಸ್ತಾಪಕ್ಕೂ ಈ ಸಂದರ್ಭದಲ್ಲಿ ಒಪ್ಪಿಗೆ ದೊರೆತಿದೆ.

ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವಾಹನಗಳು, ಶೌರ್ಯ ಪ್ರಶಸ್ತಿ ಪಡೆದವರ ವಾಹನಗಳು, ಅಂಚೆ ಮತ್ತು ತಂತಿ ಇಲಾಖೆ ವಾಹನಗಳು ಮತ್ತು ಶವಸಂಸ್ಕಾರದ ವಾಹನಗಳಿಗೂ ಟೋಲ್ ವಿನಾಯ್ತಿ ನೀಡಲಾಗಿದೆ.ವಾಣಿಜ್ಯ ವಾಹನಗಳಿಗೆ ಮಾಸಿಕ ರಿಯಾಯಿತಿ ದರದಲ್ಲಿ ಪಾಸ್ ನೀಡಿಕೆಯಲ್ಲಿ ಒಪ್ಪಿಗೆ ದೊರೆತಿದೆ.
ಸಂಬಂಧಿತ ಮಾಹಿತಿ ಹುಡುಕಿ