ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಫ್ಜಲ್ ಕ್ಷಮಾದಾನ-ಗೃಹ ಸಚಿವಾಲಯ ನಿರ್ಧಾರ ಕೈಗೊಳ್ಳುತ್ತೆ: ಶೀಲಾ (Afzal's mercy petition | Sheila Dikshit | Parliament attack | Home Ministry)
Bookmark and Share Feedback Print
 
ಸಂಸತ್ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಅಫ್ಜಲ್ ಗುರು ಗಲ್ಲು ಶಿಕ್ಷೆ ಕುರಿತ ಕ್ಷಮಾದಾನ ಅರ್ಜಿಯ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ಅಫ್ಜಲ್ ಗಲ್ಲು ಶಿಕ್ಷೆಯ ಕ್ಷಮಾದಾನ ಮನವಿ ಪ್ರಕರಣದ ಬಗ್ಗೆ ಗೃಹ ಸಚಿವಾಲಯವೇ ನಿರ್ಧಾರ ಕೈಗೊಳ್ಳಲಿದೆ. ಆ ನಿಟ್ಟಿನಲ್ಲಿ ನಾವು ಕ್ಷಮಾದಾನ ಅರ್ಜಿಯ ಕುರಿತು ಮುಂದಿನ ಕ್ರಮ ಕೈಗೊಳ್ಳಲು ಲೆಫ್ಟಿನೆಂಟ್ ಗವರ್ನರ್ ಅವರಿಗೆ ಕಡತವನ್ನು ರವಾನಿಸಿರುವುದಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಸಂಸತ್ ದಾಳಿಯಲ್ಲಿ ಭಾಗಿಯಾಗಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಫ್ಜಲ್ ಕ್ಷಮಾದಾನ ಮನವಿ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಅಫ್ಜಲ್ ಗಲ್ಲು ಶಿಕ್ಷೆಯ ಕ್ಷಮಾದಾನ ಮನವಿಯಲ್ಲಿ ಗವರ್ನರ್ ಅವರು ತಮ್ಮ ನಿಲುವಿನ ಷರಾ ಬರೆಯಲಿದ್ದಾರೆ. ನಂತರ ಆ ಫೈಲ್ ಅನ್ನು ಗೃಹ ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ ಎಂದು ವಿವರಿಸಿದರು.

ಬುಧವಾರ ಅಫ್ಜಲ್ ಗಲ್ಲುಶಿಕ್ಷೆಯ ಕ್ಷಮಾದಾನ ಅರ್ಜಿಯನ್ನು ದೆಹಲಿ ಸರ್ಕಾರ ಗವರ್ನರ್ ಅವರಿಗೆ ಕಳುಹಿಸಿತ್ತು. ಅಲ್ಲದೇ ಅಫ್ಜಲ್‌ಗೆ ಸುಪ್ರೀಂಕೋರ್ಟ್ ವಿಧಿಸಿರುವ ಗಲ್ಲು ಶಿಕ್ಷೆ ಬಗ್ಗೆ ಸರ್ಕಾರದ ಸಹಮತ ಇರುವುದಾಗಿಯೂ ತಿಳಿಸಿತ್ತು. ಏತನ್ಮಧ್ಯೆ ಅಫ್ಜಲ್‌ಗೆ ಇಲ್ಲಿಯೇ ಗಲ್ಲು ಶಿಕ್ಷೆ ವಿಧಿಸುವ ಬಗ್ಗೆ ತಲೆದೋರಲಿರುವ ಕಾನೂನು ತೊಂದರೆ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂಬುದಾಗಿಯೂ ದೆಹಲಿ ಸರ್ಕಾರ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಅಫ್ಜಲ್ ಗಲ್ಲುಶಿಕ್ಷೆಯ ಕ್ಷಮಾದಾನ ಪತ್ರದ ಬಗ್ಗೆ ದೆಹಲಿ ಸರ್ಕಾರದ ನಿಲುವೇನು ಎಂದು ಸ್ಪಷ್ಟಪಡಿಸುವಂತೆ ಕಳೆದ ನಾಲ್ಕು ವರ್ಷದ ಹಿಂದೆಯೇ ಕೇಂದ್ರ ಗೃಹ ಸಚಿವಾಲಯ ವಿವರಣೆ ಕೇಳಿತ್ತು. ಕೊನೆಗೂ ಸರ್ಕಾರ ಸೋಮವಾರ ಕ್ಷಮಾದಾನ ಅರ್ಜಿಯನ್ನು ರಾಜ್ಯಪಾಲ ಖನ್ನಾ ಅವರಿಗೆ ಕಳುಹಿಸಿಕೊಟ್ಟಿತ್ತು. ಆದರೆ ಈ ಬಗ್ಗೆ ಇನ್ನೂ ಹೆಚ್ಚಿನ ವಿವರಣೆ ನೀಡುವಂತೆ ಕೋರಿ ಗವರ್ನರ್ ಅರ್ಜಿಯನ್ನು ಮಂಗಳವಾರ ಸರ್ಕಾರಕ್ಕೆ ವಾಪಸ್ ಕಳುಹಿಸಿಕೊಟ್ಟಿದ್ದರು.
ಸಂಬಂಧಿತ ಮಾಹಿತಿ ಹುಡುಕಿ